Home ಜಿಲ್ಲೆ ನಿಲಯಗಳ ನಿರ್ವಹಣೆ ಕುರಿತು ಕಾರ್ಯಾಗಾರ

ನಿಲಯಗಳ ನಿರ್ವಹಣೆ ಕುರಿತು ಕಾರ್ಯಾಗಾರ

ಗದಗ, ಏ29: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಗದಗ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗರವರ ಸಂಯುಕ್ತಾಶ್ರಯದಲ್ಲಿ ವಸತಿ ನಿಲಯಗಳ ಮತ್ತು ವಸತಿ ಶಾಲೆಗಳ ನಿರ್ವಹಣೆ, ದಾಖಲಾತಿಗಳ ನಿರ್ವಹಣೆ, ಆಹಾರ ಸುರಕ್ಷತೆ ಹಾಗೂ ಇ ಗುರುತು ಹಾಗೂ ಬಿಲ್‍ಗಳ ತಯಾರಿಕೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ ಇವರು ಉದ್ಘಾಟಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಡಾ.ನಂದಾ ಹಣಬರಟ್ಟಿ ಮಾತನಾಡಿ ಕಾರ್ಯಾಗಾರದ ವಿಷಯಗಳ ಕುರಿತು ಎಲ್ಲ ಸಿಬ್ಬಂದಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.

ನಿಲಯಗಳಲ್ಲಿ ದಾಖಲಾತಿಗಳನ್ನು ನಿರ್ವಹಿಸುವ ಕುರಿತು ಬಿ.ಎಮ್ ಬಡಿಗೇರ, ನಿಲಯಗಳ ನಿರ್ವಹಣೆ ಕುರಿತು ಉದಯಕುಮಾರ ಯಲಿವಾಳ, ಆಹಾರ ಸಾಮಗ್ರಿಗಳ ಬೇಡಿಕೆ ಕುರಿತು ಗೋಪಾಲ ಟಿ ಲಮಾಣಿ, ಬಿಲ್‍ಗಳ ತಯಾರಿಕೆ ಕುರಿತು ಮಲ್ಲಿಕಾರ್ಜುನ ಹೊಸೂರ ಲೆಕ್ಕ ಅಧೀಕ್ಷಕರು ಜಿಲ್ಲಾ ಪಂಚಾಯತ ಗದಗ ಹಾಗೂ ಸರ್ಫರಾಜ ಅಹಮ್ಮದ ಮುಖ್ಯ ಲೆಕ್ಕಿಗರ ಜಿಲ್ಲಾ ಖಜಾನೆ ಇಲಾಖೆ ಗದಗ. ಹಾಗೂ ಆಹಾರ ಸುರಕ್ಷತೆಯ ಕುರಿತು ರಾಜೇಂದ್ರ ಗಡಾದ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಗದಗ ರವರು ಉಪನ್ಯಾಸವನ್ನು ನೀಡಿದರು.

ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಎಂ.ತುಂಬರಮಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ಮಂಜುಳಾ ಸೋಮಕ್ಕನವರ, ಸಹಾಯಕ ನಿರ್ದೇಶಕರಾದ ಗೋಪಾಲ ಟಿ ಲಮಾಣಿ, ಉದಯಕುಮಾರ ಯಲಿವಾಳ, ಬಿ.ಎಮ್ ಬಡಿಗೇರ, ಶ್ರೀಮತಿ ಗೀತಾ ಆಲೂರ, ಕಛೇರಿ ಸಿಬ್ಬಂದಿಗಳು ಹಾಗೂ ಜಿಲ್ಲೆಯ ಎಲ್ಲ ನಿಲಯ ಮೇಲ್ವಿಚಾರಕರು ಹಾಜರಿದ್ದರು.