
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.29- ತಾಲೂಕಿನ ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಸಿ. ಬಸವಣ್ಣ ಹಾಗೂ ಸಿದ್ದಶೆಟ್ಟಿ ಅವರು ಅವಿರೋಧವಾಗಿ ಇಂದು ಆಯ್ಕೆಯಾದರು.
ಸಂಘ ಅಧ್ಯಕ್ಷರಾಗಿದ್ದ ಶಿವಸ್ವಾಮಿ, ಉಪಾಧ್ಯಕ್ಷೆ ನೀಲಮ್ಮ ಅವರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಗ್ರಾಮದ ಸಹಕಾರ ಸಂಘ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ. ಬಸವಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದಶೆಟ್ಟಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧೀಕ್ಷಕ ನಾಗೇಶ್ ಅವರು ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿನಂದನೆ: ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಸಹಕಾರ ಸಂಘದಿಂದ ರೈತರ ಅಭಿವೃದ್ದಿ ಸಾಧ್ಯವಾಗಿದ್ದು, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸುವ ಮೂಲಕ ಅವರ ಅಭಿವೃದ್ದಿಗೆ ನೂತನ ಆಡಳಿತ ಮಂಡಲಿಯವರು ದುಡಿಯಬೇಕು. ಸ್ಥಳೀಯ ಶಾಸಕರಾದ ಸಿ. ಪುಟ್ಟರಂಗಶೆಟ್ಟರು ಎಂಎಂಡಿಸಿ ಬ್ಯಾಂಕ್ ನಿರ್ದೇಶಕರಾಗಿದ್ದು, ನಮ್ಮ ಪಕ್ಷದವರೇ ಅಧ್ಯಕ್ಷರು ಸಹ ಆಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾಲ, ಇತರೇ ಸೌಲಭ್ಯಗಳನ್ನು ಪಡೆದುಕೊಳ್ಳ ಲು ಅನುಕೂಲವಾಗುತ್ತದೆ. ಸಹಕಾರ ಸಂಘದ ಪ್ರಗತಿಗೆ ಎಲ್ಲರು ಒಗ್ಗಟ್ಟಿನಿಂದ ದುಡಿಯಬೇಕು ಎಂದು ತಿಳಿಸಿದರು.
ನೂತನ ಅಧ್ಯಕ್ಷ ಸಿ. ಬಸವಣ್ಣ ಮಾತನಾಡಿ, ಸಂಘದ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಮುಖಂಡರು, ಹಿರಿಯರು ಹಾಗು ನಿರ್ದೇಶಕರು ಒಮ್ಮತದಿಂದ ಅವಿರೋಧ ಆಯ್ಕೆ ಮಾಡಿರುವುದಕ್ಕೆ ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಂಘ ಹಾಗು ಸರ್ಕಾರದಿಂದ ರೈತರಿಗೆ ದೊರೆಯುವ ಎಲ್ಲಾ ಸಾಲ ಸೌಲಭ್ಯಗಳನ್ನು ಕಲ್ಪಿಸಲು ಬದ್ದನಾಗಿದ್ದೇನೆ. ಸಂಘದ ಎಲ್ಲಾ ನಿರ್ದೇಶಕರ ಸಹಕಾರ ಮುಂದೆಯೂ ಹೀಗೆ ಇರಲಿ ಎಂದು ಆಶಿಸಿದರು.
ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಶಿವಸ್ವಾಮಿ, ಮಾಜಿ ಉಪಾಧ್ಯಕ್ಷೆ ನೀಲಮ್ಮ, ನಿರ್ದೇಶಕರಾದ ಉಮೇಶ್, ನಾಗರಾಜಪ್ಪ, ಪದ್ಮಾವತಿ, ಮಂಜುನಾಥ, ಶಿವಕುಮಾರ್, ಬಸವನಾಯಕ ಪಿ. ಕುಮಾರ್, ಬಿ. ನಂಜಪ್ಪ, ಸಿಇಓ ಆಶೋಕ್, ನೌಕರರಾದ ಪ್ರಸನ್ನ, ನಾಗರಾಜು ಇದ್ದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಬಿಸಲವಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸಿ. ಮಹದೇವಪ್ಪ, ವಿ. ಪ್ರಭುಸ್ವಾಮಿ, ಸದಸ್ಯರಾದ ನಾರಾಯಣನಾಯಕ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಬಿಸಲವಾಡಿ ರವಿ, ಮುಖಂಡರಾದ ಎನ್. ಚನ್ನಬಸಪ್ಪ, ನಾಗರಾಜು, ಮಹದೇವಯ್ಯ, ಸಿದ್ದನಾಯಕ, ಶಿವಕುಮಾರ್, ಗುರುಶಾಂತು, ಶಿವಾನಂದ, ಶಿವಕುಮಾರ್ ಬಂದಿಗೌಡನಹಳ್ಳಿ. ಮಹೇಶ್, ಬಿ.ಎಂ. ಬಸವರಾಜು, ನಾಗರಾಜು, ನಾಗಣ್ಣ ಅನೇಕರು ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿದರು.
ಚಾಮರಾಜನಗರ ತಾಲೂಕಿನ ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಸಿ. ಬಸವಣ್ಣ, ಸಿದ್ದಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು.
ರಾಜ್ಯ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಪುಷ್ಪ ಅಮರನಾಥ್ ಮಹಿಳೆಯರಿಗೆ ಮೀಸಲಾತಿ ನೀಡುವಲ್ಕಿ ಬಿಜೆಪಿ ಮಹಿಳೆಯರು ಪ್ರತಿಭಟನೆಗೆ ಹಾಸ್ಯ ಆಸ್ಪದ ಚಾಮರಾಜನಗರ ಮುಖಂಡರಿಗೆ ಬಿಜೆಪಿ ಮುಖಂಡರಿಗೆ ಮಾಹಿತಿ ಕೊರತೆ ಇದೆ. ಜನರನ್ನು ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ್ದಾರೆ
ಮಹಿಳಾ ಸಮಾನತೆ ತರಲಲು ಅನೇಕ ನಾಯಕರು ಮಾತನಾಡಿದ್ದರು , ಬುದ್ದ ಬಸವ ಅಂಬೇಡ್ಕರ್ ಸಮಾನತೆ ತಂದರು ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಸಂವಿಧಾನದಲ್ಕಿ 33 % ಕೊಡಲು ಸಂವಿದಾನದಲ್ಲಿ ಮೀಸಲೀಡುತ್ತಾರೆ. ಎಲ್ಲಾ ರಾಜಕೀಯ ವಾಗಿ ಮೀಸಲಾತಿ ಮೂರನೇ ಒಂದು ಭಾಗ ಮಹಿಳೆಯರು ಹೆಚ್ಚಾಗಿರುವ ದೇಶ ಮಹಿಳೆಯೆಉಗೆ ಮೀಸಲಾತಿ ಇಚ್ಚಾಸಕ್ತಿ ಬೇಕು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪಂಚಾಯಿತ್ ಸ್ಥಳೀಯ ಸಂಸ್ಥೆಗಳು ಮೀಸಲಾತಿ ಜಾರಿಮಾಡಲಾಗಿದೆ ಮುನ್ನುಡಿ ಬರೆದಿದ್ದು ಕಾಂಗ್ರೆಸ್ ಪಕ್ಷ , ಮನುಸ್ಮೃತಿ ಪ್ರತಿಪಾದಿಸುವ ಬಿಜೆಪಿ ಹಲವು ನಾಯಕರುಗೆ ಪ್ರಶ್ನೆಗಳಿಗೆ ಮಾಡಿದ್ದಾರೆ.
2023 ರಲ್ಲಿ ಬಿಲ್ ಕಾಯ್ದೆ ಜಾರಿಯಾಗಿದೆ ಮತ್ತೆ ಯಾಕೆ ಬಿಲ್ ತರಬೇಕು ಬಡಲಡ ಏರಿಕೆ ನೆಪದಲ್ಲಿ ಕಾಯ್ದೆ ಕಾನೂನು ಬದ್ದವಾಗಿ ಡಿಲಿಮೀಡೇಷನ್ ಜನಸಂಖ್ಯೆ ಆದಾರಿತ ವಾಗಿ ಜಾರಿಯಾಗಬೇಕು. ತರಾತುರಿಯಲ್ಲಿ ಅದೀವೇಶನ ಕರೆಯುದಿಲ್ಲ, ಮಹಿಳಾ ಮೀಸಲಾತಿ ಜಾರಿನಾಡಿದ್ದರು. ಅಗಿಲ್ಲ. ಇಚ್ಚಾಸಕ್ತಿ ಇಲ್ಲ ಪ್ರಧಾನ ಮಂತ್ರಿ ಗಳು ಜಾರಿಮಾಡಬೇಕು.
ಮಹಿಳೆಯರ ಪರವಾಗಿದ್ದರೆ.

























