Home ಜಿಲ್ಲೆ ಸಿ.ಸಿ. ರಸ್ತೆ ಮಾಡಲು ಮನವಿ

ಸಿ.ಸಿ. ರಸ್ತೆ ಮಾಡಲು ಮನವಿ

ಲಕ್ಷ್ಮೇಶ್ವರ, ಏ29: ಪಟ್ಟಣದ 14ನೇ ವಾರ್ಡಿನ ಪರ್ವತ ಮಲ್ಲಯ್ಯ ದೇವಸ್ಥಾನದಿಂದ ಹಳೆ ಬಸ್ ನಿಲ್ದಾಣದವರೆಗಿನ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಮಾಡಿಸುವಂತೆ ಒತ್ತಾಯಿಸಿ ಪುರಸಭೆಯ ಮುಖ್ಯ ಅಧಿಕಾರಿ ಪರಶುರಾಮ ಅವರಿಗೆ ಅಖಂಡ ಭಾರತ ಯುವ ಸೇನೆಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.


ಮನವಿ ಪತ್ರದಲ್ಲಿ ಶ್ರೀ ಸೋಮೇಶ್ವರ ಪಾದಗಟ್ಟಿಯಿಂದ ಹಳೆಯ ಬಸ್ ನಿಲ್ದಾಣದವರೆಗಿನ ರಸ್ತೆಯನ್ನು ಸುಮಾರು 10 ವರ್ಷಗಳ ಹಿಂದೆಯೇ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅತಿಕ್ರಮಣ ತೆರವು ಗೊಳಿಸಿದ್ದು ಈಗ ಪಾದಗಟ್ಟೆಯಿಂದ ಪರ್ವತ ಮಲ್ಲಯ್ಯ ದೇವಸ್ಥಾನದವರೆಗೆ ಸಿಸಿ ರಸ್ತೆ ಮಾಡಿದ್ದು ಬಾಕಿ ಇರುವ ರಸ್ತೆಯನ್ನು 16ನೇ ಹಣಕಾಸಿನ ಯೋಜನೆ ಅಡಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


ಈ ಸಂದರ್ಭದಲ್ಲಿ ಕೊಟ್ರೇಶ ಕತ್ತಿ, ಮಂಜುನಾಥ ಗಾಂಜಿ, ವಿಜಿ ಪುರಾಣಿಕಮಠ, ವಾಗೀಶ ಪುರಾಣಿಕಮಠ, ಪ್ರವೀಣ ಡಂಬಳ, ಶಿವಾನಂದ ಮೇಟಿ, ಶ್ರೇಯಾಂಕ ಹಿರೇಮಠ, ಅಭಿಷೇಕ ಗೊಂಗಡಿ, ಗಣೇಶ ಬೆಳವಿಗಿ, ಗಂಗಾಧರ ಬೆಳವಿಗಿ ಸೇರಿದಂತೆ ಅನೇಕರಿದ್ದರು.