
ಗುರುಮಠಕಲ್: ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕಿನ ವಿಕಲಚೇತನರಿಗಾಗಿ SಃI ಖseಣi ಯಾದಗಿರಿ ಹಾಗೂ ಎಪಿಡಿ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ ೧-೬-೨೬ ರಿಂದ ೧೨-೬-೨೬ ರವರೆಗೆ _೧೨ ದಿನಗಳ ಕಾಲ ಪೇಪರ್ ಬ್ಯಾಗ್ ಮತ್ತು
ಇಟಿveಟoಠಿe ಕವರ್, ಫೈಲ್ ತರಬೇತಿ ಸಮರೋಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದಂತ ಡಾಕ್ಟರ್ ಮಹೇಶ್ ಕುಮಾರ್ ಸಜ್ಜನ್ ಅವರು ವಿಕಲಚೇತನರ ಸ್ವಾವಲಂಬಿ ಜೀವನಕ್ಕಾಗಿ ಎಲ್ಲರ ಸಹಕಾರ ಅತಿ ಮುಖ್ಯವಾಗಿದೆ ಅದಕ್ಕಾಗಿ ಎಲ್ಲರೂ ಶ್ರಮಿಸೋಣ ಎಂದು ತಿಳಿಸಿದರು. ನಂತರ ಎಪಿಡಿ ಸಂಸ್ಥೆಯ ಜೀವನಚಕ್ರ ಯೋಜನೆಯ ಮುಖ್ಯಸ್ಥರಾದ ಮಧುಕೇಶವರವರು ಮಾರುಕಟ್ಟೆ ಸ್ಥಿರತೆಯನ್ನು ಅರಿತು ತಮ್ಮ ಸ್ವಾವಲಂಭಿ ಜೀವನವನ್ನು ಮನ್ನಡೆಸಲು ಸಂಸ್ಥೆಯಿAದ ಸಹಕಾರ ನೀಡಲು ಸದಾಸಿದ್ಧ ಎಂಬ ಭರವಸೆಯನ್ನು ನೀಡಿದರು.ಈ ಕಾರ್ಯಕ್ರಮದಲ್ಲಿ ಶರಣಪ್ಪ, ಡಾ.ಮಹೇಶಕುಮಾರ ಸಜ್ಜನ್ ತಾಲೂಕ ವೈಧ್ಯಾಧಿಕಾರಿಗಳು, ಖSeಣi ಯ ಸಂಪನ್ಮೂಲ ವ್ಯಕ್ತಿಗಳಾದ ಶಫೀಕ್, ಎಪಿಡಿ ಸಂಸ್ಥೆಯ ತಾಲೂಕ ಸಂಯೋಜಕರಾದ ವಿರುಪಾಕ್ಷಿ ಮಾಲಿಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಬಂದAತಹ ಒಟ್ಟು ೨೯ ಜನ ವಿಕಲಚೇತನರಿಗೆ ತರಬೇತಿಯ ಪ್ರಮಾಣ ಪತ್ರವನ್ನು ಗಣ್ಯರಿಂದ ವಿತರಿಸಲಾಯಿತು.ಹಾಗೂ ಮುಂಬರುವ ದಿನಗಳಲ್ಲಿ ಬ್ಯಾಂಕನಿAದ ಸಹಕಾರ ನೀಡಲು ಸಹಕರಿಸಲು ಸಹಾಯ ಮಾಡುಲು ಸಹಕರಿಸುವ ಭರವಸೆಯನ್ನು ನೀಡಿದರು.
ಸಮರೋಪದ ತೆರಬೇತಿಯಲ್ಲಿ ಎಪಿಡಿ ಸಂಸ್ಥೆಯ ಜೀವನೋಪಾಯ ವಿಭಾಗದ ಜಿಲ್ಲಾ ಸಂಯೋಜಕರಾದ ಶಿವಯೋಗಪ್ಪ, ಸುರೇಶ್, ಶಿಲ್ಪ ಎಂ, ಶಿಲ್ಪ ಎಸ್, ಅಂಬಿಕಾ, ನಾಗಮಣಿ, ಅತೀಸ್ ಸೇರಿದಂತೆ ಇನ್ನಿರತ ಸಿಬ್ಬಂದಿಗಳು ಉಪಸ್ಥಿತರಿದ್ದರು.


























