
ಬೆಂಗಳೂರು: ಮೇ ೧- ರಾಜ್ಯದ ಗೃಹಬಳಕೆ ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಕೆ.ಇ.ಆರ್.ಸಿ (ಏಇಖಅ) ವಿದ್ಯುತ್ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ಇಂದಿನಿಂದಲೇ ಗೃಹಬಳಕೆ ವಿದ್ಯುತ್ ದರದಲ್ಲಿ ಏರಿಕೆ
ಜಾರಿಯಾಗಿದ್ದು, ಪ್ರತಿ ಯೂನಿಟ್‌ಗೆ ೫೬ ಪೈಸೆ ಹೆಚ್ಚಳ ಮಾಡಲಾಗಿದೆ. ಮೇ ತಿಂಗಳ ಬಿಲ್‌ನಿಂದ ಈ ಹೊಸ ದರ ಅನ್ವಯವಾಗಲಿದೆ. ಎಸ್ಕಾಂಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಗಣಿಸಿದ ಕೆಇಆರ್ಸಿ, ಈ ದರ ಏರಿಕೆಗೆ ಮಂಜೂರು ನೀಡಿದೆ.
೨೦೨೪-೨೫ನೇ ಆರ್ಥಿಕ ವರ್ಷದಲ್ಲಿ ವಿದ್ಯುತ್ ಮಾರಾಟದಿಂದ ೩೪,೦೮೪ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿತ್ತು. ಆದರೆ, ಕೇವಲ ೩೨,೦೧೯ ಕೋಟಿ ರೂಪಾಯಿ ಆದಾಯ ಮಾತ್ರ ಬಂದಿದ್ದು, ಸುಮಾರು ೨,೦೬೮ ಕೋಟಿ ರೂಪಾಯಿ ಕೊರತೆ ಉಂಟಾಗಿದೆ.
ಈ ಕೊರತೆಯನ್ನು ಪೂರೈಸಲು ಗ್ರಾಹಕರಿಂದಲೇ ಸಂಗ್ರಹಿಸುವಂತೆ ಕೆಇಆರ್ಸಿ ಆದೇಶಿಸಿದೆ. ಅದರ ಭಾಗವಾಗಿ ಪ್ರತಿ ಯೂನಿಟ್‌ಗೆ ೫೬ ಪೈಸೆ ಹೆಚ್ಚಳ ಮಾಡಲಾಗಿದೆ.
ದರ ಏರಿಕೆಯಿಂದ ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಮತ್ತಷ್ಟು ಭಾರವಾಗಲಿದೆ

























