
ಚನ್ನಮ್ಮನ ಕಿತ್ತೂರ,ಆ.೧೬ ಅನೇಕ ಮಹನೀಯರು ತಮ್ಮ ತ್ಯಾಗ ಬಲಿದಾನಗಳಿಂದ ಸ್ವಾತಂತ್ರö್ಯ ತಂದು ಕೊಟ್ಟು ಇಡೀ ವಿಶ್ವಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ರೂಪಿಸಿಕೊಟ್ಟ ಇಂದು ನಾವೆಲ್ಲರೂ ಸುಂದರವಾದ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟ ನೇತಾರರು ನಿತ್ಯ ಸ್ಮರಣಿಯರೆಂದು ಅಭಿವೃದ್ದಿ ಅಧಿಕಾರಿ ರವಿ ಉಡಕೇರಿ ಹೇಳಿದರು.
ತಾಲೂಕಿನ ದೇವಗಾಂವ ಗ್ರಾಪಂದಲ್ಲಿ ೮೦ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಮಹಾತ್ಮಾ ಗಾಂಧಿಜೀ, ಡಾ. ಬಾಬಾಸಾಹೇಬ ಅಂಬೇಡ್ಕರ ಭಾವಚಿತ್ರಗಳಿಗೆ ಪೂಜೆ-ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಕಳೆದ ೭೯ ವರ್ಷಗಳ ಅವಧಿಯಲ್ಲಿ ನಮ್ಮ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಅದ್ವಿತೀಯ ಪ್ರಗತಿ ಸಾಧಿಸುವ ಮೂಲಕ ವಿಶ್ವಗುರುವಾಗಿ ಹೊರಹೊಮ್ಮಿದೆ. ಇಂದಿನ ಪೀಳಿಗೆಗೆ ಸ್ವಾತಂತ್ರö್ಯ ಹೋರಾಟದ ಬೆಳವಣಿಗೆ, ದೇಶಭಕ್ತಿ ಕುರಿತು ತಿಳಿಸಿಕೊಡುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಧಾನಗುರು ಸದಾಶಿವ ಪೋಳ, ಈರಣ್ಣಾ ಮಾರಿಹಾಳ, ಮಹಾಂತೇಶ ದುಗ್ಗಾಣಿ, ರಮೇಶ ಉಗರಖೋಡ, ಭರತೇಶ ಗಂದಿಗವಾಡ, ಶಂಕರ ಗಳಗಿ, ಸುಕುಮಾರ ಶಿವಣ್ಣವರ ಕುಟುಂಬಸ್ಥರು, ಈರಣಗೌಡ ಪಾಟೀಲ, ರಾಮಚಂದ್ರಪತ್ತಾರ ನಾಗಪ್ಪ ತಳವಾರ, ಅದೃಶ್ಯ ಪತ್ತಾರ, ಮಲ್ಲಿಕಾರ್ಜುನ ಇಟ್ನಾಳ, ಉದಯ ಪೆಡ್ನೇಕರ, ಗ್ರಾಪಂ ಸಿಬ್ಬಂದಿ, ಮಂಜುನಾಥ ಕಮ್ಮಾರ, ಮುದಕಪ್ಪ ಅಗಸರ, ಮಂಜುನಾಥ ಹವಾಲ್ದಾರ, ಕಲ್ಲಪ್ಪ ತಳವಾರ, ಶಂಕರ ಪೂಜಾರ, ಸಂಗೀತಾ ಪಾಗಾದ, ಸಂರೋಜಾ ಗುತ್ತಿ, ಅಕ್ಷತಾ ಬಂಎರಗಾಳಿ. ಗ್ರಂಥಪಾಲಕಿ ಶ್ರೀಮತಿ ಉಡಕೇರಿ, ಕಸ ವಿಲೇವಾರಿ ಸಿಬ್ಬಂದಿ, ಗಡಗಿ ಹಾಗೂ ಕನ್ನಡ ಶಾಲೆ ಮಕ್ಕಳು, ಶಿಕ್ಷರು, ಮಾಜಿ ಸೈನಿಕ ಸುಕುಮಾರ ಶಿವಣ್ಣವರ ಇವರನ್ನು ಸತ್ಕರಿಸಲಾಯಿತು.





























