
ಹುಬ್ಬಳ್ಳಿ, ಆ೧೬: ಹಳೇಹುಬ್ಬಳ್ಳಿ ಅರವಿಂದನಗರದಲ್ಲಿರುವ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಧ್ವಜಾರೋಹಣವನ್ನು ದೇವಸ್ಥಾನದ ಧರ್ಮದರ್ಶಿಗಳಾದ ಮಾತೋಶ್ರೀ ಡಾ.ಹುಲಿಗೆಮ್ಮಾ ಪೋಸಾ ಅಮ್ಮನವರು ನೆರವೇರಿಸಿ ಮಾತನಾಡಿ, ನಾವೆಲ್ಲಾ ಭಾರತೀಯರು ದೇಶ ಮೊದಲು ಎಂಬ ಸಿದ್ಧಾಂತವನ್ನು ಇಟ್ಟುಕೊಂಡು ದೇಶಕ್ಕಾಗಿ ನಮ್ಮ ಬದುಕನ್ನು ಮೀಸಲಿಡಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಮೇಜರ್ ಶಿವಾಜಿ ಗಾಂವಕರ, ತೋಟಪ್ಪಾ ನಿಡಗುಂದಿ, ಶ್ರೀ ಮಹೇಶ ದಾಬಡೆ, ಶ್ರೀ ಕೀರ್ತೆಪ್ಪಾ ಗೋಟುರ, ಸುರೇಶ ಪೂಜಾರಿ, ಶ್ರೀಧರ ಮಗಜಿಕೊಂಡಿ, ವಿರುಪಾಕ್ಷ ಚಲವಾದಿ, ಅರುಣಕುಮಾರ ಹೆಬ್ಬಳ್ಳಿ. ಪ್ರಕಾಶ ಅರಗಂಜಿ, ಗುರು ಬನ್ನಿಕೊಪ್ಪ ಪಾಲ್ಗೊಂಡಿದ್ದರು.































