
ಚಿತ್ತಾಪುರ:ಜೂ.25: ಹೆಣ್ಣುಮಕ್ಕಳಿಗೆ ತಾರತಮ್ಮ ಮಾಡದೇ ಉತ್ತಮ ಶಿಕ್ಷಣ ನೀಡುವುದರಿಂದ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರತಿ ತುಪ್ಪದ್ ಹೇಳಿದರು.
ತಾಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರ ಮೂರರಲ್ಲಿ ನಡೆದ ಬೇಟಿ ಬಚಾವೋ ಬೇಟಿ ಪಢಾವೋ ಆಂದೋಲನದ ಅಂಗವಾಗಿ ಒಂದು ದಿನದ ಅರಿವು ಕಾರ್ಯಕ್ರಮವನ್ನು ಸಿಡಿಪಿಒ ಆರತಿ ತುಪ್ಪದ್ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗಂಡು ಹೆಣ್ಣು ಎಂಬ ತಾರತಮ್ಮ ಮಾಡಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡದೇ ಬಾಲ್ಯ ವಿವಾಹ ಮಾಡಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಜೊತೆಗೆ ಹೆರಿಗೆ ಸಂದರ್ಭದಲ್ಲಿ ಸಾವು ನೋವುಗಳು ಆಗುವ ಸಂಧರ್ಬ ಎದುರಾಗುವ ಸಾಧ್ಯತೆ ಇರುತ್ತದೆ.
ಆರ್ಥಿಕವಾಗಿ ಹಿಂದುಳಿದ ಜನರು ಹೆಣ್ಣು ಮಗುವಿನ ಜನನ ಆದರೆ ದೊಡ್ಡ ಭಾರ ಎಂದು ಭಾವಿಸಿ ಬಾಲ್ಯ ವಿವಾಹ ಮಾಡಿ ಬಿಡುತ್ತಾರೆ,ಇಂತಹ ಮನಸ್ಥಿತಿಯಿಂದ ಸಾರ್ವಜನಿಕರು ಹೊರಬಂದು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು,ಉತ್ತಮ ಶಿಕ್ಷಣ ನೀಡಿದಾಗ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಅಲ್ಲದೆ ಲಿಂಗ ತಾರತಮ್ಯ ಮಾಡುವುದು,
ವರದಕ್ಷಿಣೆ ನಿಷೇಧ ಕಾಯ್ದೆ, ಹೆಣ್ಣು ಮಗುವಿನ ರಕ್ಷಣೆ, ಸುಕನ್ಯಾ ಸಮೃದ್ಧಿ ಯೋಜನೆಯ ಸೌಲಭ್ಯದ ಬಗ್ಗೆ ಸಾರ್ವಜನಿಕರಿಗೆ,ಪೆÇೀಷಕರಿಗೆ ಮಾಹಿತಿ ನೀಡಿದರು.
ದಂಡೋತಿ ವಲಯ ಮೇಲ್ವಿಚಾರಕಿ ಶೋಭಾ ಕೇಶಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಂಗನವಾಡಿ ಶಿಕ್ಷಕಿ ಸರಸ್ವತಿ ಹಾದಿಮನಿ ಪ್ರಾರ್ಥನೆ ಗೀತೆ ಹಾಡಿದರು,ಅಂಗನವಾಡಿ ಕೇಂದ್ರ ಐದರ ಶಿಕ್ಷಕಿ ವಿದ್ಯಾನಿಧಿ ಕವಡೆ ನೀರುಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಕಲಾಲ್,ಗ್ರಾಮದ ಮುಖಂಡರಾದ ದಾವೂದ್ ಪಟೇಲ್,ರಶೀದ್ ಪಠಾಣ್,ಶರಣ ಬಸವೇಶ್ವರ ಶಾಲೆಯ ಮುಖ್ಯೋಪಾದ್ಯಾಯ ಮಲ್ಲಣ್ಣ, ಉರ್ದು ಶಾಲೆಯ ಸಹ ಶಿಕ್ಷಕಿ ಸಭಾ,ಅಂಗನವಾಡಿ ಶಿಕ್ಷಕಿಯರಾದ ಅಕ್ಕಮಹಾದೇವಿ ಭೃಂಗಿಮಠ,ಸುಮಲತಾ ಬಟಿಗೇರಿ,ರಾಧಾ,ರೇಖಾ,ಬಸ್ಸಮ್ಮ,ಆಲಿಯಾ ಬೇಗಂ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಇದ್ದರು.




















