Home ಜಿಲ್ಲೆ ಮಣ್ಣೆತ್ತಿನ ಅಮವಾಸ್ಯೆ: ವಿಶೇಷ ಆಚರಣೆ

ಮಣ್ಣೆತ್ತಿನ ಅಮವಾಸ್ಯೆ: ವಿಶೇಷ ಆಚರಣೆ


ಲಕ್ಷೆ÷್ಮÃಶ್ವರ,ಜು.೧೩: ಉತ್ತರ ಕರ್ನಾಟಕದಲ್ಲಿ ಅನಾದಿಕಾಲದಿಂದಲೂ ಪ್ರತಿಯೊಂದು ಹಬ್ಬ ಹರಿದಿನಗಳಿಗೆ ತಮ್ಮದೇ ಆದ ಮಹತ್ವವಿದೆ.
ಉತ್ತರ ಕರ್ನಾಟಕದಲ್ಲಿಎಳ್ಳು ಅಮಾವಾಸ್ಯೆ ನಾಗರ ಅಮಾವಾಸ್ಯೆ ಮಣ್ಣೆತ್ತಿನ ಅಮಾವಾಸ್ಯೆಗಳಿಗೆ ವಿಶೇಷವಾದ ಅರ್ಥವಿದೆ.


ಅದೇ ರೀತಿ ನೂಲು ಹುಣ್ಣಿಮೆ ಸೀಗೆ ಹುಣ್ಣಿಮೆ ಭಾರತ ಹುಣ್ಣಿಮೆ ಮತ್ತು ಕಾರು ಹುಣ್ಣಿಮೆಗಳನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.
ನಾಳೆ ಮಣ್ಣೆತ್ತಿನ ಅಮಾವಾಸ್ಯೆಯಿದು ರೈತರ ಜೀವನಾಡಿ ಎತ್ತುಗಳು. ಕಾರುಣ್ಣಿಮೆಯ ದಿನ ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿ ಮುನ್ನಾದಿನ ಹೊನ್ನುಗ್ಗಿಯ ದಿನದಂದು ಎತ್ತುಗಳನ್ನು ವಿಶೇಷವಾಗಿ ಸಿಂಗರಿಸಿ ಅವುಗಳ ಪಾದಗಳಿಗೆ ಬಂಗಾರವನ್ನು ಮುಟ್ಟಿಸಿ ನಮನ ಸಲ್ಲಿಸಲಾಗುತ್ತಿದೆ.


ಅದೇ ರೀತಿ ನಾಳೆ ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಮಣ್ಣುಗಳಿಂದಲೇ ನಿರ್ಮಿಸಿದ ಎತ್ತುಗಳನ್ನು ಪೂಜಿಸಿ ವಿಶೇಷವಾಗಿ ರೈತ ಸಮುದಾಯ ಗೌರವ ಸಲ್ಲಿಸುತ್ತದೆ.
ಈ ಅಮಾವಾಸ್ಯೆ ದಿನದಂದು ಬಹುತೇಕ ರೈತ ಸಮುದಾಯ ಮಣ್ಣಿನಿಂದ ಮಾಡಿದ ಎತ್ತುಗಳು ಹಾಗೂ ಗೋದಲಿಯನ್ನು ಮಾಡಿ ಅವುಗಳಿಗೆ ಹಣ್ಣು ಕಾಯಿ ನೈವೇದ್ಯ ಮಾಡಿ ಕರಿಗಡಬು ಕರದ ಮೆಣಸಿನಕಾಯಿ ಹಪ್ಪಳ ಸಂಡಿಗೆ ಶಾವಗಿ ಪಾಯಸ ನೈವೇದ್ಯ ಮಾಡಿ ನಂತರ ಕುಟುಂಬದವರು ಸಹ ಭೋಜನ ಮಾಡಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆಗೆ ವಿಶೇಷವಾಗಿ ಕಳೆತರುತ್ತಾರೆ.