Home ಜಿಲ್ಲೆ ವಿದ್ಯುತ್ ತಗುಲಿ ಮೂಕಪ್ರಾಣಿ ಸಾವು

ವಿದ್ಯುತ್ ತಗುಲಿ ಮೂಕಪ್ರಾಣಿ ಸಾವು

ಗುರುಮಠಕಲ್,ಜೂ 27: ಮಿನಾಸಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದ ಪಕ್ಕದಲ್ಲಿ ಮುಖ್ಯ ರಸ್ತೆ ಹೊಂದಿಕೊಂಡಂತೆ ವಿದ್ಯುತ್ ಪರಿವರ್ತಕ ಇದ್ದು ಶುಕ್ರವಾರ ಮಧ್ಯಾಹ್ನ ಹಂದಿಯೊಂದು ಅದರ ಸಮೀಪದಿಂದ ಬರುವಾಗ ಭೂಮಿಗೆ ಹತ್ತಿರುವ ತಂತಿ ಕರಂಟ್ ಶಾಕ್ ನಿಂದ ಪ್ರಾಣ ಕಳೆದುಕೊಂಡಿದೆ.
ಶಾಲಾ ಮಕ್ಕಳಿಗೆ ಹಾಗೂ ಮನುಷ್ಯರಿಗೆ ಮತ್ತು ಮೂಕ ಪ್ರಾಣಿಗಳಿಗೂ ವಿದ್ಯುತ್ ಪರಿವರ್ತಕ ಅಪಾಯವನ್ನು ಉಂಟುಮಾಡುತ್ತದೆ ಎಂದು ಸಾರ್ವಜನಿಕರು ಹಾಗೂ ಮುಖಂಡರು ಸಂಬಂಧ ಪಟ್ಟ ಜೆಸ್ಕಾಂ ಅಧಿಕಾರಿಗಳಿಗೆ ಹಿಗಾಗಲೆ ತಿಳಿಸಿದ್ದಾರೆ. ಅಪಾಯದ ಅಂಚಿನಲ್ಲಿರುವ ವಿದ್ಯುತ್ ಪರಿವರ್ತಕ ಸುತ್ತ ಕಬ್ಬಿಣದ ಮುಳ್ಳಿನ ಜಾಲಿ ಹಾಕಿಲ್ಲ. ಇಂತಹ ಆಪಾಯದ ಅಂಚಿನಲ್ಲಿರುವ ವಿದ್ಯುತ್ ಪರಿವರ್ತಕವನ್ನು ಬೇರೆಕಡೆಯಲ್ಲಿಯಾದರು ವ್ಯವಸ್ಥೆಮಾಡಿ, ಇಲ್ಲವೇ ಅದರ ಸುತ್ತಲು ಕಬ್ಬಿಣದ ಮುಳ್ಳಿನ ಬೇಲಿಯನ್ನಾದರು ಹಾಕಿದರೆ ಸೂಕ್ತವಾಗುತ್ತದೆ ಎಂದು ಸಾರ್ವಜನಿಕರ ಅಭಿಪ್ರಾಯ. ಈ ವೇಳೆ ಜಯಕರ್ನಾಟಕ ಸಂಘ ಗ್ರಾಮ ಘಟಕದ ಅಧ್ಯಕ್ಷ ಭಾಸ್ಕರ ರೆಡ್ಡಿ, ಯಾದಯ್ಯ, ದೇವಿಂದ್ರಪ್ಪ, ರವಿಕುಮಾರ, ಆಶಪ್ಪ, ಉಮೇಶ ಹಾಗೂ ಸಾರ್ವಜನಿಕರು ಗ್ರಾಮದ ಮುಖಂಡರು ಇದ್ದರು.