Home ಜಿಲ್ಲೆ ಔಷಧ ಅಂಗಡಿಗಳು ಸಂಪೂರ್ಣ ಬಂದ್

ಔಷಧ ಅಂಗಡಿಗಳು ಸಂಪೂರ್ಣ ಬಂದ್

ಬಸವನಬಾಗೇವಾಡಿ:ಮೇ.21: ಔಷಧಗಳನ್ನು ಆನ್ಲೈನ್ ಸೇವೆ ಮೂಲಕ ವಿತರಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘ ಕರ್ನಾಟಕ ರಾಜ್ಯ ಔಷಧ ವ್ಯಾಪಾರಸ್ಥರ ಸಂಘ ಜಿಲ್ಲಾ ಹಾಗೂ ಬಸವನಬಾಗವಾಡಿ ತಾಲೂಕ ಔಷಧ ವ್ಯಾಪಾರ ಸಂಘದ ನೇತೃತ್ವದಲ್ಲಿ ದಿನಾಂಕ್ 20ರಂದು ಪಟ್ಟಣದ ಎಲ್ಲಾ ಔಷದ ಅಂಗಡಿಗಳನ್ನು ಒಂದು ದಿವಸ ಸಂಪೂರ್ಣ ಬಂಧಗೊಳಿಸಲಾಯಿತು ತಾಲೂಕ ಎಲ್ಲಾ ಔಷದ ವ್ಯಾಪಾರಸ್ಥರು ಶ್ರೀ ಬಸವೇಶ್ವರ ವೃತ್ತದಲ್ಲಿ ಜಮಾವನೆಗೊಂಡು ಸಂಕೇತಿಕವಾಗಿ ಬಂದ ಆಚರಿಸುವ ಜೊತೆಗೆ ತಾಲೂಕಿನ ದಂಡಾಧಿಕಾರಿಗಳ ಮೂಲಕ ಮನವಿಯನ್ನು ಅರ್ಪಿಸಿ ಜಿಲ್ಲಾ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷರಾದ ಶ್ರೀ ರಮೇಶ್ ಯಳಮೇಲಿ ಮಾತನಾಡಿ ಆನ್ಲೈನ್ ಸೇವೆಯ ನೆಪದಲ್ಲಿ ಔಷಧ ಪೂರೈಸುತ್ತಿರುವ ಕೆಲವು ಕಂಪನಿಗಳು ಗ್ರಾಹಕರಿಗೆ ಸರಿಯಾದ ಮೆಡಿಸನ್ ನೀಡದೆ ವಂಚಿಸುತ್ತಿವೆ ಅಲ್ಲದೆ ಕೆಲವು ಖಾಸಗಿ ದೊಡ್ಡ ದೊಡ್ಡ ಕಂಪನಿಗಳು ಔಷಧಗಳಿಗೆ ಹೆಚ್ಚಿನ ರಿಯಾಯಿತಿ ನೀಡಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿವೆ ಈ ವ್ಯವಸ್ಥೆಯನ್ನು ಸಂಪೂರ್ಣ ಬಂದ ಮಾಡಬೇಕೆಂದು ಆಗ್ರಹಿಸಿ ಮಾತನಾಡಿದರು ಅದೇ ರೀತಿಯಾಗಿ ತಾಲೂಕ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಶ್ರೀ ಪ್ರಭು ಪಟ್ಟಣಶೆಟ್ಟಿ ಮಾತನಾಡಿ ಕೆಲವೊಂದು ಔಷಧಗಳಿಗೆ ಸರಕಾರವು ವೈದ್ಯರ ಅನುಮತಿಯನ್ನು ಪಡೆದು ಔಷಧಿಗಳನ್ನು ಮಾರಬೇಕು ಆದರೆ ಆನ್ಲೈನ್ ಮೂಲಕ ಅಂತ ನಿಬರ್ಂಧಿತ ಔಷಧಿಗಳನ್ನು ತರಿಸಿಕೊಳ್ಳುತ್ತಾರೆ ಡಾಕ್ಟರ್ ಸಲಹೆ ಇಲ್ಲದೆ ಇಂಥ ಔಷಧಗಳನ್ನು ಸೇವಿಸುವುದರಿಂದ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಕಾರಣ ಸರ್ಕಾರ ಕೂಡಲೇ ಆನ್ಲೈನ್ ಔಷಧಿಯನ್ನು ರದ್ದುಗೊಳಿಸಬೇಕೆಂದು ಮಾತನಾಡಿದರು ಇದೇ ರೀತಿಯಾಗಿ ಶ್ರೀಕಾಂತ್ ಕೊಟ್ರಶೆಟ್ಟಿ ಮಾತನಾಡಿ ಅಪೆÇೀಲೋ ಮೆಡ್ಪ್ಲಸ್ ಔಷಧಿ ಅಂಗಡಿಗಳು ಗ್ರಾಹಕರಿಗೆ ಹೆಚ್ಚಿನ ರೀತಿಯಲ್ಲಿ ತೋರಿಸಿ ಔಷಧ ವ್ಯಾಪಾರ ಮಾಡುತ್ತಾರೆ ಇದರಿಂದ ಸಣ್ಣ ಸಣ್ಣ ಔಷಧಿ ವ್ಯಾಪಾರಸ್ಥರಿಗೆ ಹಾನಿಯಾಗುವುದರ ಜೊತೆಗೆ ಅವರ ಅಂಗಡಿಗಳನ್ನು ಬಂದು ಮಾಡುವ ಪರಿಸ್ಥಿತಿ ಬಂದಿದೆ ಎಂದರು ಈ ಈ ಬಂಧದಲ್ಲಿ ಎಲ್ಲಾ ಔಷಧಿ ವ್ಯಾಪಾರಸ್ಥರಾದ ಶ್ರೀಕಾಂತ್ ಕೋರಿ ಮಹಾವೀರ್ ಹೊಸಮನಿ ಅಶೋಕ ಮುಳವಾಡ ಪ್ರಭು ಪಟ್ಟಣಶೆಟ್ಟಿ ವಿದ್ಯಾಧರ ಉಪಾಧ್ಯಾ ರಾಘವೇಂದ್ರ ಸೋಮನಕಟ್ಟಿ ಮಲ್ಲಿಕಾರ್ಜುನ್ ಮಠ ಎಸ್ ಎ ನದಾಫ ಶೇಖರ್ ಹೂಗಾರ ಶಿವಾನಂದ್ ಬಿದರಿ ರಾಮದೇವ್ ಮೆಡಿಕಲ್ ಇಂಡಿಯನ್ ಮೆಡಿಕಲ್ ಹೋರಾಟದಲ್ಲಿ ಭಾಗವಹಿಸಿ ಮಾನ್ಯ ದಂಡಾಧಿಕಾರಿ ಮೂಲಕ ಸರ್ಕಾರಕ್ಕೆ ಕಳಿಸಲು ಮನವಿ ಅರ್ಪಿಸಲಾಯಿತು