Home ಜಿಲ್ಲೆ ಬರ ಪರಿಸ್ಥಿತಿ ಅವಲೋಕನ ಸಭೆ

ಬರ ಪರಿಸ್ಥಿತಿ ಅವಲೋಕನ ಸಭೆ

ಶಿರಹಟ್ಟಿ,ಆ೯: ಪಟ್ಟಣದ ತಾಲೂಕ ಪಂಚಾಯತಿಯ ಸಾಮರ್ಥ್ಯ ಸೌಧದಲ್ಲಿ ಶನಿವಾರ ಶಿರಹಟ್ಟಿ ಮತ್ತು ಲಕ್ಷೆ÷್ಮÃಶ್ವರ ತಾಲೂಕುಗಳ ಬರ ಪರಿಸ್ಥಿತಿ ಅವಲೋಕನ ಸಭೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ರಾಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.


ಸಭೆಯಲ್ಲಿ ಬಸವರಾಜ್ ರಾಯರೆಡ್ಡಿ ಅವರು ಶಿರಹಟ್ಟಿ ಮತ್ತು ಲಕ್ಷೆ÷್ಮÃಶ್ವರ ತಾಲೂಕುಗಳಲ್ಲಿ ಬಿತ್ತನೆಯಾಗಿರುವ ಜಮೀನುಗಳಲ್ಲಿ ಶೇಕಡ೫೦ರಷ್ಟು ಹಾನಿಯಾಗಿದೆ. ಶೇಕಡ ೧೦ರಷ್ಟು ಬಿತ್ತನೆಯಾಗಿಲ್ಲ ಈ ಹಿನ್ನೆಲೆಯಲ್ಲಿ ರೈತರಿಗೆ ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ ಮಾನದಂಡದ ಪ್ರಕಾರ ಹಾನೀ ಗೀಡಾಗಿರುವಮತ್ತು ೩೩,೦೦೦ ರೈತರು ಫಸಲ್ ಭೀಮಾ ಯೋಜನೆ ಮತ್ತು ಬೆಳೆ ವಿಮಾ ಯೋಜನೆ ಮಾಡಿಸಿದ್ದು ಈ ಎಲ್ಲಾ ರೈತರಿಗೂ ಮಾನ ದಂಡದ ಪ್ರಕಾರ ಪರಿಹಾರ ನೀಡಿ ಬರಪೀಡಿತ ಪ್ರದೇಶ ಎಂದು ಸಾರಲು ಸಾಧ್ಯವಿದೆ ಎಂದರು.


ಒಂದು ಹಂತದಲ್ಲಿ ಸಚಿವ ರಾಯರೆಡ್ಡಿ ಅವರು ಅಧಿಕಾರಿಗಳು ಮನಬಂದAತೆ ಅಂಕಿ ಅಂಶಗಳನ್ನು ನೀಡಿದರೆ ಸಹಿಸಲು ಸಾಧ್ಯವಿಲ್ಲ ಸಮರ್ಪಕ ಮತ್ತು ಸೂಕ್ತವಾದ ಮಾಹಿತಿಯನ್ನು ನೀಡಿ ವರದಿ ಸಲ್ಲಿಸಿದರೆ ಸರ್ಕಾರದ ಮಟ್ಟದಲ್ಲಿ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗುತ್ತದೆ ಅಧಿಕಾರಿಗಳು ತಮ್ಮ ಜಿಡ್ಡು ತನವನ್ನು ಬಿಟ್ಟು ಸರ್ಕಾರದ ಜೊತೆ ಕೆಲಸ ಮಾಡಬೇಕು ಇಲ್ಲದಿದ್ದರೆ ಸರ್ಕಾರ ಕಣ್ಮುಚ್ಚಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದರು.


ಕುಡಿಯುವ ನೀರಿನ ಯೋಜನೆಗೆ ಸಂಬAಧಪಟ್ಟAತೆ ಅಧಿಕಾರಿಗಳು ಪ್ರತಿ ವ್ಯಕ್ತಿಗೆ ೭೦ ಲೀಟರ್ ನೀರು ಡಿಬಿ ಓಟಿ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ನೀಡಬೇಕು ಆದರೆ ಅಧಿಕಾರಿಗಳು ಈ ವಿಷಯದಲ್ಲಿ ಸುಳ್ಳು ಅಂಕಿ ಸಂಖ್ಯೆ ನೀಡಿದ್ದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೋಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.


ಇನ್ನು ೧೫ ದಿನದಲ್ಲಿ ಬರ ಪರಿಸ್ಥಿತಿ ಅಧ್ಯಯನದ ವರದಿ ಸಿದ್ಧವಾಗಲಿದ್ದು ಮುಖ್ಯಮಂತ್ರಿ , ಡಿಕೆ ಶಿವಕುಮಾರ್ ಅವರಿಗೆ ಜಿಲ್ಲೆಯ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಮನದಟ್ಟು ಮಾಡಿಕೊಟ್ಟು ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಸಾರಲು ಒತ್ತಾಯಿಸುವುದಾಗಿ ಮತ್ತು ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳದಾಗಿ ಹೇಳಿದರು.


ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಂಪುಟ ರಚನೆ ಮಾಡುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಖಡಕ್ ಸೂಚನೆ ನೀಡಿ ಬರ ಪರಿಸ್ಥಿತಿಯ ಬಗ್ಗೆ ಸಾಕ್ಷಾತ ಪರಿಶೀಲಿಸಿ ವರದಿ ನೀಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಮತ್ತು ಎಲ್ಲಾ ವರದಿಗಳನ್ನು ಕ್ರೂಢೀಕರಿಸಿ ಕೇಂದ್ರಕ್ಕೆ ಸಲ್ಲಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಸಚಿವರು ಬರ ಪರಿಸ್ಥಿತಿ ಅಧ್ಯಯನ ನಡೆಸುತ್ತಿದ್ದಾರೆ.


ಸಭೆಯಲ್ಲಿ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಹೆಚ್ಚುವರಿ ಜಿಲ್ಲಾಧಿಕಾರಿ ದುರ್ಗೇಶ್ ಕೆಆರ್ ಉಪವಿಭಾಗಾಧಿಕಾರಿ ಎಂ ಗಂಗಪ್ಪ ಶಾಸಕ ಚಂದ್ರು ಲಮಾಣಿ ಗ್ಯಾರಂಟಿ ಸಮಿತಿ ತಾಲೂಕ ಅಧ್ಯಕ್ಷ ವೀರಯ್ಯ ಮಠಪತಿ , ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟಿಲ್ ತೋಟಗಾರಿಕಾ ಇಲಾಖೆಯ ಚಿದಾನಂದ ಶಿರಹಟ್ಟಿ ತಹಶೀಲ್ದಾರ್ ರಾಘವೇಂದ್ರ ರಾವ್ ಕೆ ಲಕ್ಷೆ÷್ಮÃಶ್ವರ ಧನಂಜಯ ಎಂ ಸೇರಿದಂತೆ ತಾಲೂಕ ಮಟ್ಟದ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.