
ಬೀದರ್: ಮಹಾರಾಷ್ಟ್ರದ ಬೀಡ್‍ನ ಶ್ರೀ ಕ್ಷೇತ್ರ ಮನ್ಮಥ ಧಾಮ ಸಂಸ್ಥಾನದ ಡಾ. ವಿರೂಪಾಕ್ಷ ಶಿವಾಚಾರ್ಯರಿಗೆ ಶ್ರೀಮದ್ ಕಾಶಿ ಪೀಠದಿಂದ ಕೊಡಲಾಗುವ ಶಿವ ಸಂಸ್ಕøತಿ ರಕ್ಷಕ ಪುರಸ್ಕಾರ ದೊರೆತಿದೆ.
ನಾಲ್ಕು ದಶಕಗಳ ಸಮಾಜೋ ಧಾರ್ಮಿಕ ಕಾರ್ಯಗಳಿಗಾಗಿ ಅವರಿಗೆ ಪುರಸ್ಕಾರ ಸಂದಿದೆ.
ಸೋಲಾಪುರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ. ವಿರೂಪಾಕ್ಷ ಶಿವಾಚಾರ್ಯರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಭಾಲ್ಕಿಯ ಭಾಗ್ಯಶ್ರೀ ಸೋಮಶಂಕರ ಹಿರೇಮಠ, ಅಚ್ಚು ಚನ್ನವೀರ ಸ್ವಾಮಿ ಹಾಗೂ ಅಮು ಚನ್ನವೀರ ಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.


























