
ಶಹಾಬಾದ:ಜೂ.24: ಹಾಗೂ ದೇಶಕ್ಕಾಗಿಯೇ ತಮ್ಮ ಜೀವನವನ್ನು ಸವೆದ ಶ್ಯಾಮ ಪ್ರಸಾದ ಮುಖರ್ಜಿ ಇವರು ದೇಶ ಕಂಡು ಮಹಾನ್ ನಾಯಕರು ಎಂದು ಬಿಜೆಪಿ ಹಿರಿಯ ಮುಖಂಡರಾದ ಬಸವರಾಜ ಬಿರಾದಾರ ಹೇಳಿದರು.
ಅವರು ಬುಧವಾರ ನಗರದ ಬಿಜೆಪಿ ಕಚೇರಿಯಲ್ಲಿ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ಪುಣ್ಯ ಸ್ಮರಣೆ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶ್ಯಾಮ ಪ್ರಸಾದ ಮುಖರ್ಜಿಯವರು ನೀತಿ, ತತ್ವದ ಆಧಾರದ ಮೇಲೆ ನೆಹರೂ ನೇತೃತ್ವದ ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿದರು.ಈ ಮೂಲಕ ಮಂತ್ರಿ ಪದವಿ ತ್ಯಾಗ ಮಾಡಿದ ಸ್ವಾತಂತ್ರ್ಯ ಭಾರತದ ಭಾರತದ ಪ್ರಥಮ ರಾಷ್ಟ್ರ ನಾಯಕ ಶ್ಯಾಮ ಪ್ರಸಾದ ಮುಖರ್ಜಿಯವರು ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹಾಗೂ ದೇವದಾಸ ಜಾಧವ ಮಾತನಾಡಿ, ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜೀವನವೇ ಒಂದು ಸಂದೇಶ. ಅವರ ಚಿಂತನೆಗಳಿಂದ ಇಂದು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಧೈರ್ಯವಂತರಾಗಿ ದೇಶ ಮೊದಲು ಎಂಬ ಸಿದ್ಧಾಂತಕ್ಕೆ ಬದ್ಧರಾಗಬೇಕಿದೆ.
ಡಾ. ಮುಖರ್ಜಿ ಅವರು ದೇಶದ ಏಕತೆ, ಸಮಗ್ರತೆ, ಸಾಂಸ್ಕøತಿಕ ಹಿರಿಮೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶ್ರೇಷ್ಠ ರಾಷ್ಟ್ರೀಯ ನಾಯಕ. ನಮ್ಮ ಪಕ್ಷಕ್ಕೆ ಸೈದ್ಧಾಂತಿಕ ಅಡಿಪಾಯ ಹಾಕಿ ಕೊಟ್ಟ ಭಾರತೀಯ ಜನಸಂಘದ ಸ್ಥಾಪಕರು. ದೇಶದ ರಾಜಕಾರಣದಲ್ಲಿ ಒಂದು ಬಲಿಷ್ಠ ರಾಷ್ಟ್ರೀಯವಾದಿ ಸಿದ್ಧಾಂತ ಇರುವ ರಾಜಕೀಯ ಪರಿವಾರಕ್ಕೆ ನಾಂದಿ ಹಾಡಿದವರು. 370 ನೇ ವಿಧಿಯನ್ನು ವಿರೋಧಿಸಿ ಜಮ್ಮು ಮತಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಒಗ್ಗೂಡಿಸಲು ಗಟ್ಟಿಯಾಗಿ ನಿಂತು, ಅದಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ಧೀಮಂತ ನಾಯಕ ಎಂದು ಅವರು ನೆನಪಿಸಿದರು. ಅವರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಕೊಳ್ಳುವಂತಾಗಬೇಕೆಂದು ಹೇಳಿದರು.
ಸಿದ್ರಾಮ ಕುಸಾಳೆ, ರಾಜು ಕುಂಬಾರ, ನಾರಾಯಣ ಕಂದಕೂರ, ಶಿವಕುಮಾರ ಇಂಗಿನಶೆಟ್ಟಿ, ಶೀವಗೌಡ ಪಾಟೀಲ, ಯಲ್ಲಪ್ಪ ದಂಡಗುಲಕರ, ದೇವೇಂದ್ರಪ್ಪ ಯಲಗೊಡ, ಸಾಯಬಣ್ಣ ಬೆಳಗುಂಪಿ, ನವನಾಥ ಕುಸಾಳೆ, ಉಮೇಶ ನಿಂಬಾಳಕರ, ಕಿರಣ ದಂಡಗುಲಕರ, ಸುರೆಂದ್ರ ಗೌಳಿ, ಶಶಿಕಲಾ ಸಜ್ಜನ, ನಂದಾ ಗುಡೂರ, ನೀಲಗಂಗಮ್ಮ ಗಂಟ್ಲಿ, ಗೀತಸ ಪವಾರ, ನಿರ್ಮಲಾ ದೇವದುರ್ಗ, ನಾಗಮ್ಮ, ಜಯಶ್ರೀ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




















