Home ಜಿಲ್ಲೆ ಡಾ.ರೇಷ್ಮಾ ಕೌರ್ ಅವರಿಗೆ “ಬ್ಲ್ಯಾಕ್‍ಸ್ವಾನ್” ಮಹಿಳಾ ಪ್ರಶಸ್ತಿ

ಡಾ.ರೇಷ್ಮಾ ಕೌರ್ ಅವರಿಗೆ “ಬ್ಲ್ಯಾಕ್‍ಸ್ವಾನ್” ಮಹಿಳಾ ಪ್ರಶಸ್ತಿ

ಬೀದರ:ಜೂ.18:ಇತ್ತಿಚಿಗೆ ಮಲೇಷ್ಯಾದ ಕೌಲಾಲಂಪುರ್‍ನ ಜೆಡಬ್ಲ್ಯೂ ಮಾರಿಯಟ್ ಹೋಟಲ್‍ನಲ್ಲಿ 2026ರ ಜುನ್ 10 ರಂದು ನಡೆದ 27ನೇ ಏಷ್ಯಾಒನ್-ಅಸಿಯಾನ್ ಶೃಂಗಸಭೆ ಅಂಗವಾಗಿ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. “ಅಸಿಯಾನ್‍ನ ಉತ್ಸಾಹವನ್ನು ಆಚರಿಸುವುದು” ಎಂಬ ವಿಷಯದಡಿ ನಡೆದ ಈ ಶೃಂಗಸಭೆಯಲ್ಲಿ 27 ದೇಶಗಳ ಗಣ್ಯ ನೀತಿ ನಿರೂಪಕರು, ರಾಜತಾಂತ್ರಿಕರು ಹಾಗೂ ಉದ್ಯಮ ಕ್ಷೇತ್ರದ ಮುಖಂಡರು ಭಾಗವಹಿಸಿದರು.
ಶೃಂಗ ಸಭೆಯ ಮುಖ್ಯ ಉದ್ದೇಶ ಗಡಿಯಾಚೆಗಿನ ವ್ಯಾಪಾರವನ್ನು ಬಲಪಡಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಹಾಗೂ ಆಗ್ನೇಯ ಏಷ್ಯಾ ಮತ್ತು ಅದರಾಚೆಯ ರಾಷ್ಟ್ರಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದು ಶೃಂಗ ಸಭೆಯ ಪ್ರಮುಖ ಉದ್ದೇಶವಾಗಿತ್ತು.
2026ರ ಆವೃತ್ತಿಯ ಭಾಗವಾಗಿ ಏಷ್ಯಒನ್‍ನ ವಿಶೇಷ ಭೌದ್ಧಿಕ ಆಸ್ತಿ “ಬ್ಯ್ಲಾಕ್‍ಸ್ವಾನ್” ಮಹೀಳಾ ಸಬಲೀಕರಣ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವ, ನಾವೀನ್ಯತೆ ಹಾಗೂ ಸಮಾಜಿಕ ಪರಿವರ್ತನೆಗೆ ಗಮನಾರ್ಹ ಕೊಡುಗೆ ನೀಡಿರುವ ಮಹೀಳಾ ಸಾಧಕರಿಗೆ ನೀಡಲಾಯಿತು.
ಮಿತಿಗಳನ್ನು ಧಿಕ್ಕರಿಸುವ, ಅಡೆತಡೆಗಳನ್ನು ಮುರಿಯುವ ಮತ್ತು ಸಮಾಜದ ಮೇಲೆ ವಿಶಿಷ್ಟವಾದ ಆಳವಾದ ಪ್ರಭಾವ ಬೀರುವ ಅಸಾಧಾರಣ ಮಹಿಳಾ ನಾಯಕಿಯರನ್ನು ಗುರುತಿಸುವ ಮತ್ತು ಗೌರವಿಸುವ ಗುರಿಯನ್ನು ಈ ಪ್ರಶಸ್ತಿ ಹೊಂದಿದೆ.

ಗುರು ನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆಯಾದ ಡಾ. ರೇಷ್ಮಾ ಕೌರ್ ಅವರು ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ನೀಡಿದ ಅತ್ಯುತ್ತಮ ಸೇವೆ ಹಾಗೂ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ಅವರು ಸಂಸ್ಥೆಗಳಿಗೆ ಮತ್ತೊಂದು ಗೌರವನ್ನು ತಂದುಕೊಟ್ಟಿದ್ದಾರೆ.

ಆಯ್ಕೆ ಪ್ರಕ್ರಿಯೆನ್ನು ಏಷ್ಯಒನ್‍ನ ಸಂಪಾದಕೀಯ ತಂಡವು ನಡೆಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗೌರವಾನ್ವಿತ ರಾಜತಾಂತ್ರಿಕ ಪ್ರತಿನಿಧಿಗಳ ಸಮ್ಮಖದಲ್ಲಿ ನಡೆಸಲಾಯಿತು.
ಮಲೇಷ್ಯಾಕ್ಕೆ ಹಂಗೇರಿಯ ರಾಯಭಾರಿ ಡಾ. ಸ್ಯಾಂಡರ್ ಸಿಪೋಸ್ ಮತ್ತು ತುರ್ಕಮಿನಿಸ್ಥಾನ ರಾಯಭಾರಿ ಗೌರವಾನ್ವಿತ ಮಹಮ್ಮತ್ಯಾಜ್ ಮಶಾಲೋವ್ ಅವರು ಡಾ. ರೇಷ್ಮಾ ಕೌರ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀ ನಾನಕ ಝಿರಾ ಸಹೇಬ್ ಫೌಂಡೆಷನ್ ಅಧ್ಯಕ್ಷ ಡಾ. ಎಸ್. ಬಲಬೀರ ಸಿಂಗ್ ಉಪಸ್ಥಿತರಿದ್ದರು.