Home ಜಿಲ್ಲೆ ಬೆಂಗಳೂರು ಪರಿಸರ ಉಳಿಸಲು ಡಾ.ಮಂಜುನಾಥ್ ಕರೆ

ಪರಿಸರ ಉಳಿಸಲು ಡಾ.ಮಂಜುನಾಥ್ ಕರೆ

ಕೆಂಗೇರಿ, ಜೂ.೧೨:ಈ ಭೂಮಿ ಮೇಲೆ ಜೀವರಾಶಿ,ಮಾನವ ಬದುಕುತ್ತಿರುವುದು ನೀರು,ಆಮ್ಲಜನಕ,ಪರಿಸರದಿಂದ. ನಾವೆಲ್ಲರೂ ಗಿಡ ನೆಡುವ ಮೂಲಕ ಪರಿಸರ ಉಳಿಸಬೇಕಾಗಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಹೇಳಿದರು.


ಮಲ್ಲತ್ತಹಳ್ಳಿ ಕೆರೆ ಬಳಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭೂ ಒತ್ತುವರಿಯಿಂದ ಕೆರೆಗಳ ಸಂಖ್ಯೆ ಕಡಿಮೆಯಾಗುತ್ತಿವೆ.ಜೊತೆಗೆ ಇರುವ ಕೆರೆಗಳ ವಿಸ್ತೀರ್ಣ ಕಡಿಮೆಯಾಗುತ್ತಿವೆ.ಭೂಮಿಯ ಆರೋಗ್ಯ ಚೆನ್ನಾಗಿರಬೇಕಾದರೆ ಕೊಳಚೆ ನೀರು ಭೂಮಿಗೆ ಸೇರದಂತೆ ನೋಡಿಕೊಳ್ಳಬೇಕು.ಪ್ರತಿಯೊಬ್ಬ ನಾಗರೀಕರು, ಸಂಘ-ಸಂಸ್ಥೆ, ಸರ್ಕಾರಗಳ ಕರ್ತವ್ಯವಾಗಿದೆ ಎಂದರು.


ಶಾಸಕ ಮುನಿರತ್ನ ಮಾತನಾಡಿ ಮಲ್ಲತ್ತಹಳ್ಳಿ ಕೆರೆ ಅಭಿವೃದ್ದಿಗೆ ಹಿಂದಿನ ಸಿ.ಎಂ. ಆಗಿದ್ದ ಬಸವರಾಜ್ ಬೊಮ್ಮಾಯಿ ಅವರು ಅನುದಾನ ಬಿಡುಗಡೆ ಮಾಡಿ ಕೆರೆ ಅಭಿವೃದ್ದಿ ಸೇರಿ ನಾನಾ ಕಾಮಗಾರಿಗೆ ಚಾಲನೆ ನೀಡಿದರು. ಅವುಗಳು ಸ್ಥಗಿತಗೊಂಡಿದ್ದು, ಶೀಘ್ರದಲ್ಲಿಯೇ ಸಂಸದರ ಜೊತೆಗೂಡಿ ಮತ್ತಷ್ಟು ಅನುದಾನ ತಂದು ಚಾಲನೆ ನೀಡಲಾಗುವುದು ಎಂದರು.ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಮುಖಂಡರಾದ ಮಲ್ಲತ್ತಹಳ್ಳಿಎಂ.ಮಂಜುನಾಥ್,ವಿ.ಸಿ.ಚಂದ್ರು, ರವಿಗೌಡ,ಶ್ರೀನಿವಾಸ್.ಜಿ,ಜ್ಞಾನಭಾರತಿ ವಾರ್ಡ್‌ನ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಜಯರಾಮಯ್ಯ, ಯೋಗೇಶ್,ಮಹಿಳಾ ಘಟಕದ ಅಧ್ಯಕ್ಷೆ ರಾಜಕುಮಾರಿ,ಮಂಜುಶ್ರೀ ಇದ್ದರು.