
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ ಪುಸ್ತಕದ ಮೊರೆ ಹೋದರೆ, ಏ.೧ ಆರೋಪಿ ಪವಿತ್ರಾಗೌಡ ಬರವಣಿಗೆಯ ಮೊರೆ ಹೋಗಿದ್ದಾರೆ.
ಜೈಲಿನಲ್ಲಿರುವ ದರ್ಶನ್, ಕಾಲ ಕಳೆಯಲು ಪುಸ್ತಕದ ಮೊರೆ ಹೋಗಿದ್ದಾರೆ. ಸಹ ಕೈದಿಗಳೊಡನೆ ಒಂದೇ ಬ್ಯಾರಕ್‌ನಲ್ಲಿದ್ದು, ವಾರಕ್ಕೆ ೨ರಿಂದ೩ ಪುಸ್ತಕ ಓದುತ್ತಿದ್ದಾರೆ ಮೂಲಗಳು ತಿಳಿಸಿವೆ.
ಎ೧ ಪವಿತ್ರಾ ಗೌಡ ಜೈಲಿನಲ್ಲಿ ಬರವಣಿಗೆಯ ಮೊರೆ ಹೋಗಿದ್ದಾರೆ. ತಮ್ಮ ಆತ್ಮಕಥೆ ಬರೆಯುತ್ತಿದ್ದಾರೆ,ನಟ ದರ್ಶನ್ ಮತ್ತು ಸಹಚರರು ಮೊದಲ ಬಾರಿಗೆ ಬಂಧನವಾಗಿ ಎರಡು ವರ್ಷ ಕಳೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ೨೦೨೫ರ ಜೂ.೧೧ ರಂದು ದರ್ಶನ್‌ರನ್ನು ಮೈಸೂರಿನ ಹೋಟೆಲ್‌ವೊಂದರಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಜೂ.೭ ರಂದು ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನು ಕಿಡ್ನಾಪ್ ಮಾಡಿ ರಾಜರಾಜೇಶ್ವರಿನಗರದ ಪಟ್ಟಣಗೆರೆ ಶೆಡ್‌ಗೆ ಕರೆತಂದು ಹಲ್ಲೆ ಮಾಡಿದ್ದರು. ಆರೋಪಿಗಳು ದರ್ಶನ್ ಹೆಸರು ಬಾಯ್ಬಿಟ್ಟಿದ್ದರಿಂದ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.
ಜೈಲು ಸೇರಿದ್ದ ದರ್ಶನ್ ಮತ್ತು ಸಹಚರರು ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಜಾಮೀನು ರದ್ದುಪಡಿಸುವಂತೆ ಕೋರಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ ದರ್ಶನ್ ಮತ್ತು ಸಹಚರರ ಜಾಮೀನು ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಸೇರಿ ಏಳು ಜನ ಆರೋಪಿಗಳು ಮತ್ತೆ ಜೈಲುಪಾಲಾಗಿದ್ದರು.
























