
ಕಲಬುರಗಿ: ಜೂ.25:ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ ಆಯೋಜಿಸಿದ್ದ “ಎಐ ಇನ್ ಹೆಲ್ತ್‍ಕೇರ್” ಕಾರ್ಯಕ್ರಮದಲ್ಲಿ ಡಾ. ಜೂಹಿ ಶಬ್ನಂ ಬೆಂಡಿಗೇರಿ ಅವರು ಶೇ.100 ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಕಾರ್ಯಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಉದಯೋನ್ಮುಖ ಅನ್ವಯಿಕೆಗಳ ಕುರಿತು ಸಮಗ್ರ ಅರಿವು ಮೂಡಿಸುವ ಉದ್ದೇಶ ಹೊಂದಿದ್ದು, ಕ್ಲಿನಿಕಲ್ ಡಿಸಿಷನ್ ಸಪೆÇೀರ್ಟ್, ವೈದ್ಯಕೀಯ ಚಿತ್ರಣ, ಆರೋಗ್ಯ ದತ್ತಾಂಶ ವಿಶ್ಲೇಷಣೆ, ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳು, ಆಡಳಿತ, ನೈತಿಕತೆ, ಅನುμÁ್ಠನ ತಂತ್ರಗಳು ಹಾಗೂ ಭವಿಷ್ಯದ ಆರೋಗ್ಯ ಸೇವಾ ನವೋದ್ಯಮಗಳ ಕುರಿತು ವ್ಯಾಪಕ ತರಬೇತಿ ನೀಡಿತು.
ಡಾ. ಜೂಹಿ ಶಬ್ನಂ ಬೆಂಡಿಗೇರಿ ಅವರು ಪ್ರಸ್ತುತ ಕೆಬಿಎನ್ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಮೆಡಿಕಲ್ ಸೈನ್ಸಸ್ ಅಡಿಯಲ್ಲಿ ದಂತ ವೈದ್ಯಕೀಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಕಾರ್ಯಕ್ರಮವು ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿನ “ಎಐ ಇನ್ ಹೆಲ್ತ್‍ಕೇರ್ ಉಪಕ್ರಮದ” ಭಾಗವಾಗಿದ್ದು, “ಯೂಟ್ಯೂಬ್‍ನಲ್ಲಿ ಆರೋಗ್ಯ ಕ್ಷೇತ್ರದ ಕೃತಕ ಬುದ್ಧಿಮತ್ತೆ ಪಾಠದ ನೇರಪ್ರಸಾರವನ್ನು ಅತಿಹೆಚ್ಚು ವೀಕ್ಷಕರು ವೀಕ್ಷಿಸಿದ ದಾಖಲೆಗೆ” ಗಿನ್ನೆಸ್ ವಿಶ್ವ ದಾಖಲೆ ವಿಶೇಷ ಮಾನ್ಯತೆ ಪಡೆದಿದೆಯೆಂದು ಅವರ ತಂದೆ ಡಾ. ಎನ್.ಡಿ. ಬೆಂಡಿಗೇರಿ ಮಾಹಿತಿ ನೀಡಿದರು.




















