
ಜೇವರಗಿ,ಮೇ 17: ಈ ದೇಶದಲ್ಲಿರುವ ಹಿಂದುಳಿದವರು, ದಲಿತರು ಹಾಗೂ ಅದಿವಾಸಿಗಳು ಸೇರಿದಂತೆ ಪ್ರತಿಯೊಬ್ಬ ಭಾರತೀಯರಿಗೆ ಹಕ್ಕು ಅಧಿಕಾರಗಳನ್ನು ನೀಡಿದ ಮೇರು ವ್ಯಕ್ತಿತ್ವ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರದಾಗಿತ್ತು ಎಂದು ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಾ ಅಷ್ಟಗಿ ಅಭಿಪ್ರಾಯಪಟ್ಟರು.
ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಅಂಗವಾಗಿ ಜಯಂತ್ಯುತ್ಸವ ಸಮಿತಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಡಾ. ಅಂಬೇಡ್ಕರ್ ಅರಿವು ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎನ್ನುವುದು ನನಗೆ ಬೇಕಿಲ್ಲ. ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎನ್ನುವುದು ನನಗೆ ಬೇಕು ಎನ್ನುವುದು ಬಾಬಾ ಸಾಹೇಬರ ನಿಲುವಾಗಿತ್ತು. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರೊಬ್ಬ ನೀರಾವರಿ, ಆರ್ಥಿಕ ತಜ್ಞರಾಗಿದ್ದರು. ಬಾಬಾ ಸಾಹೇಬರು ಪುಸ್ತಕ ಪ್ರೇಮಿಯೂ ಕೂಡ ಆಗಿದ್ದು ಅವರ ಮನೆಯೇ ಗ್ರಂಥಾಲಯ ಮಾಡಿಕೊಂಡಿದ್ದರು ಎಂದರು.ಚಂದ್ರಶೇಖರ ಕಟ್ಟಿಮನಿ,ಚಿಗರಳ್ಳಿಯ ಸಿದ್ದಬಸವ ಕಬೀರಾನಂದ ಸ್ವಾಮೀಜಿ ಮಾತನಾಡಿದರು
ಸೊನ್ನ ವಿರಕ್ತ ಮಠದ ಡಾ. ಶಿವಾನಂದ ಸ್ವಾಮೀಜಿ, ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ನರಿಬೋಳ ಮಾತನಾಡಿದರು. ಜಿ ಪಂ ಮಾಜಿ ಸದಸ್ಯ ಮರೆಪ್ಪ ಎಂ. ಬಡಿಗೇರ ಕಾರ್ಯಕ್ರಮ ಉದ್ಘಾಟಿಸಿದರು. ಪುಂಡಲೀಕ ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹುಣಸಿಗಿ ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ಮಲ್ಲಿಕಾರ್ಜುನ ಹಬ್ಬಳ್ಳಿ ಮತ್ತುಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷ ಎಸ್ ಕೆ ಬಿರಾದಾರ್ ಕಿರಿಯ ಅಭಿಯಂತರಮರಿಯಪ್ಪ ವರ್ಚನಹಳ್ಳಿ ಎಸ್ ಡಿ ಎ ಸಾಯಿಬಣ್ಣ ಕಲ್ಯಾಣಕರ್‍ರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜೆಡಿಎಸ್ ಮುಖಂಡ ರಮೇಶಬಾಬು ವಕೀಲ, ಶಿವಶರಣಪ್ಪ ಕೋಬಾಳ, ಬೈಲಪ್ಪ ನೆಲೋಗಿ, ಬಿಜೆಪಿ ನಾಯಕಿ ಶೋಭಾ ಬಾಣಿ, ಜಿಪಂ ಮಾಜಿ ಸದಸ್ಯ ದಂಡಪ್ಪ ಸಾಹು ಕುಳಗೇರಿ, ರೇವಣಸಿದ್ದಪ್ಪ ಸಂಕಾಲಿ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪಟೇಲ ಇಜೇರಿ, ಎಸ್.ಎಸ್. ಹುಲ್ಲೂರ, ದಾನಪ್ಪಗೌಡ ಹಳಿಮನಿ, ಷಣ್ಮುಖಪ್ಪ ಹೀರೆಗೌಡ, ಸುರೇಶ ಮೆಂಗನ್, ಬಿ.ವಿ ಚಕ್ರವರ್ತಿ, ಷಣ್ಮುಖಪ್ಪ ಸಾಹು ಗೋಗಿ, ಗುರು ಸುಬೇದಾರ, ಶಿವಶರಣಪ್ಪ ಕೋಬಾಳ, ಬೈಲಪ್ಪ ನೆಲೋಗಿ, ಶಾಂತಪ್ಪ ಯಲಗೋಡ, ಸುಭಾಷ ಚನ್ನೂರ, ರಾಯಪ್ಪ ಬಾರಿಗಿಡ, ಅಮೀನಪ್ಪ ಇಜೇರಿ, ಡಾ. ಧರ್ಮಣ್ಣ ಬಡಿಗೇರ್, ಮಲ್ಲಣ್ಣ ಕೊಡಚಿ, ಹರೀಶ್ಚಂದ್ರ ಕೊಡಚಿ, ಮಲ್ಲಿಕಾರ್ಜುನ ಕರ್ಕಿಹಳ್ಳಿ, ಬಸಣ್ಣ ಸರಕಾರ, ದೊಡ್ಡೇಶ ಕೊಂಬಿನ್, ನಿಜಲಿಂಗ ದೊಡ್ಮನಿ, ಡಾ. ಅಶೋಕ್ ದೊಡ್ಮನಿ, ಸಿದ್ರಾಮ ಕಟ್ಟಿ, ಶ್ರೀಮಂತ ಧನ್ನಾಕರ, ಸಿದ್ದಪ್ಪ ಆಲೂರ, ಶ್ರೀಹರಿ ಕರ್ಕಿಹಳ್ಳಿ, , ರವಿ ಕುಳಗೇರಿ, ಮಲ್ಲಮ್ಮ ಕೊಬ್ಬಿನ, ಜಗದೇವಿ ಜಟ್ನಾಕರ್, ಸಿದ್ದು ಮುದಬಾಳ, ಯಶವಂತ ಮದೇವಾಲ, ಬೆಣ್ಣೆಪ್ಪ ಕೊಂಬಿನ್, ರಾಜಶೇಖರ್ ಶಿಲ್ಪಿ, ಮರೆಪ್ಪ ಬೇಗಾರ್ ಮಾಪಣ್ಣ ಕಟ್ಟಿ, ಮರೆಪ್ಪ ಜನಿವಾರ, ಭೀಮಾಶಂಕರ ಹರನಾಳ, ಸಂಗಣ್ಣ ಕಟ್ಟಿ ಸಂಗಾವಿ, ನಿಂಗಣ್ಣ ಗುಳ್ಯಾಳ, ಸೋಮಶೇಖರ್ ಚಿಕ್ಕ ಜೇವರ್ಗಿ, ಸಿದ್ದು ಜನಿವಾರ, ಸಿದ್ದು ಕೆರೂರ, ಶಿವಶರಣ ಮಾರಡಗಿ, ಮಹೇಶ ಕೋಕಿಲೆ ಪ್ರಕಾಶ್ ಕಾಂಬಳೆ ಮಾಡಿಗಿ ಸೇರಿದಂತೆ ಇತರರು ಇದ್ದರು.

























