
ಜೇವರಗಿ,ಮೇ 15: ಸಮಾಜದಲ್ಲಿ ಮನುಷ್ಯರು ಸಮಾನವಾಗಿ ಬದುಕಲು ಬದುಕುವ ಹಕ್ಕನ್ನು ಯಾವ ದೇವತೆಗಳೂ ಕೊಡಲಿಲ್ಲ. ಅದನ್ನು ಕೊಟ್ಟದ್ದು ಡಾ.ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನ. ಜನರು ಮೌಢ್ಯದಿಂದ ಹೊರ ಬರಬೇಕು, ವೆ?ಚಾರಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲೆ ಡಾ. ಶಾಂತಾ ಬಿ ಅಸ್ಟಿಗೆ ಹೇಳಿದರು .
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾಕೂಟದ ಸಮಾರೋಪ ಕಾರ್ಯಕ್ರಮ ದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕಲಬುರಗಿಯ ನಿವೃತ್ತ ಮನೋವಿಜ್ಞಾನದ ಪ್ರಾಧ್ಯಾಪಕ ಆರ್. ವೆಂಕಟರಡ್ಡಿ ಮಾತನಾಡಿ, ಅಂಬೇಡ್ಕರ್ ಅವರು ತಮ್ಮ ಬುಡತನ, ಕಷ್ಟಕೋಟಲೆಗಳನ್ನೇ ಸಾಧನೆಗೆ ಮೆಟ್ಟಿಲುಗಳನ್ನಾಗಿಸಿಕೊಂಡರು. ವಿದ್ಯಾರ್ಥಿಗಳು ತಮ್ಮ ಭವಿಷ್ಯ ವನ್ನು ರೂಪಿಸಿಕೊಳ್ಳಲು ತಮ್ಮ ಅಗತ್ಯಗಳನ್ನು ಮರೆತು ಶಿಕ್ಷಣ ಪಡೆಯಬೇಕು. ಅಂಬೇಡ್ಕರ್ ಅವರನ್ನು ಚೆನ್ನಾಗಿ ಓದಿ ಮಾಡಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿ ಕಾರ್ಯದರ್ಶಿ ಡಾ. ಖಾಜಾವಲಿ ಈಚನಾಳ, ಐಕ್ಯುಏಸಿ ಸಂಯೋಜಕ ಡಾ. ಸಂದೀಪ್ ತಿವಾರಿ, ಡಾ. ರಾಬಿಯಾ ಬೇಗಂ, ಡಾ. ಎನ್ ಜಿ ಶ್ರೀಧರ್, ಡಾ. ಖುತೇಜಾ ನಸ್ರಿನ್, ಡಾ. ಶಿಲ್ಪಾ ಜೆ. ಡಾ. ಶರಣಪ್ಪ ಗುಂಡಗುರ್ತಿ, ಕುಪೇಂದ್ರ, ರೂಪಾ ಕುಲಕರ್ಣಿ, ಮೋಹನ್ ಬೆ?ಲಪತ್ತಾರ್ ಇನ್ನಿತರರು ಹಾಜರಿದ್ದರು.
ಡಾ. ಬಿ ಆರ್ ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾ ಕೂಟದ ಸಂಚಾಲಕ ಭೀಮಣ್ಣ ಬೆಡಕಪಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಡಾ. ರಾಜಶೇಖರ್ ಹಡಪದ್ ನಿರೂಪಿದರು. ಡಾ. ರಾಮುಲು ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಬಹುಮಾನಗಳನ್ನು ವಿತರಿಸಲಾಯಿತು.























