
ಗದಗ, ಸೆ೫: ಶ್ರೀಧರ್.ಸಿ.ಎನ್. ಜಿಲ್ಲಾಧಿಕಾರಿಗಳು ಗದಗ ಜಿಲ್ಲೆ÷ಗದಗ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ತಂಬಾಕು ನಿಷೇಧ ಕೋಶ ಗದಗದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆ ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಮೊದಲಿಗೆ ಡಾ.ಎಸ್.ಎಸ್.ನೀಲಗುಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಗದಗರವರು ಸಭೆಗೆ ಸ್ವಾಗತಿಸಿದರು. ನಂತರ ಡಾ.ವೆಂಕಟೇಶ ರಾಥೋಡ್ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಜಿಲ್ಲಾ ಸಮೀಕ್ಷಣಾಧಿಕಾರಿಗಳು ಗದಗರವರು ಕಾರ್ಯಕ್ರಮ ಕುರಿತು ಮಾತನಾಡುತ್ತಾ, ಜಿಲ್ಲೆಯ್ಯಾದಂತ ಏಪ್ರಿಲ್೨೦೨೬ ರಿಂದ ಇಲ್ಲಿಯವರೆಗೆ ೬೧ ಶಾಲಾ ಕಾಲೇಜುಗಳಲ್ಲಿ ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಹಾಗೂ ಕೋಟ್ಪಾ ಕಾಯ್ದೆ ೨೦೦೩ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಇಲಾಖೆ ಇತರ ಇಲಾಖೆಗಳ ಸಹಯೋಗದಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲೆಯಲ್ಲಿ ೨೫ ದಾಳಿ ಹಮ್ಮಿಕೊಂಡು ೧೮೦ ಪ್ರಕರಣ ದಾಖಲಿಸಿ ರೂ.೮೪೯೫೦/-ದಂಡ ಸಂಗ್ರಹಿಸಿ ಕಾಯ್ದೆ ಕುರಿತು ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಲಾಯಿತು. ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ೧೪೪೦ ತಂಬಾಕು ವ್ಯಸನಿಗಳಿಗೆ ಆಪ್ತಸಮಾಲೋಚನೆ ಮಾಡಲಾಗಿದೆ, ಕೇಂದ್ರಿಕೃತ ಗುಂಪು ಚರ್ಚೆಅಡಿಯಲ್ಲಿ ಸಮೂದಾಯದಲ್ಲಿ ತಂಬಾಕು ಸೇವನೆಗಳ ದುಷ್ಟರಿಣಾಮ ಬಗ್ಗೆ ಜನಜಾಗೃತಿ ಮೂಡಿಸಿದೆ. ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಜಿಲ್ಲೆಯ್ಯಾದಂತ ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ-೨೦೦೩) ಕುರಿತ ಹೆಚ್ಚಿನ ದಾಳಿಗಳನ್ನು ಹಮ್ಮಿಕೊಳ್ಳುವುದು, ಕೋಟ್ಪಾ ೨೦೦೩ ರಾಜ್ಯ ತಿದ್ದುಪಡಿ ೨೦೨೪ರಂತೆ ದಂಡವನ್ನು ರೂ೧೦೦೦/- ವರೆಗೆ ಕಡ್ಡಾಯವಾಗಿ ದಂಡವನ್ನು ವಿಧಿಸುವದು, ವಿಶೇಷವಾಗಿ ಶಿಕ್ಷಣ ಸಂಸ್ಥೆಗಳ ಸುತ್ತ-ಮುತ್ತ ತಂಬಾಕು ನಿಷೇಧ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಧೂಮಪಾನ ನಿಷೇಧವಿದ್ದು ಅಂಗಡಿಗಳ ಮುಂದೆ ಒಳಗೆ ಕಾನೂನು ಬಾಹಿರ ಧೂಮಪಾನ ಅಡ್ಡಾಗಳ ಮೇಲಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವದು, ಪ್ರತ್ಯಕ್ಷö ಹಾಗೂ ಪರೋಕ್ಷ ತಂಬಾಕು ಉತ್ಪನ್ನಗಳ ಜಾಹೀರಾತು ವಿರುದ್ದ, ಉತ್ಪನ್ನಗಳ ಮೇಲಿನ ಆರೋಗ್ಯ ಎಚ್ಚರಿಕೆ ಚಿಹ್ನೆ ಮುದ್ರಣ, ೨೧ ವರ್ಷದವರೆಗೆ ತಂಬಾಕು ನಿಷೇಧ ಹಾಗೂ ಇತರೆ ಸೆಕ್ಷನ್‌ಗಳ ವಿರುದ್ಧ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕ್ರಮ ಕೈಗೊಳ್ಳಲು, ಜಿಲ್ಲೆಯ ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತ ಘೋಷಣೆ ಮಾಡಲು, ತಂಬಾಕು ಮಾರಾಟ ಪರವಾನಿಗೆಯನ್ನು ಎಲ್ಲಾ ತಂಬಾಕು ಮಾರಾಟಗಾರರು ಸ್ಥಳೀಯ ಸಂಸ್ಥೆಗಳ ಮೂಲಕ ಕಡ್ಡಾಯವಾಗಿ ಪಡೆಯಲು, ಬಾಯಿ ಕ್ಯಾನ್ಸ್ರ್ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲು, ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ತಂಬಾಕು ವ್ಯಸನದಿಂದಾಗುವ ದುಷ್ಟರಿಣಾಮಗಳ ಕುರಿತು ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು, ತಂಬಾಕು ನಿಷೇಧ ಕಾಯ್ದೆ ಕುರಿತು ಜಾಗೃತಿ ಹಾಗೂ ಕ್ರಮವಹಿಸುವುದು, ತಂಬಾಕು ವ್ಯಸನಗಳಿಗೆ ಆಪ್ತ ಸಮಾಲೋಚನ ಔಷಧೋಪಚಾರಗಳ ಮೂಲಕ ವ್ಯಸನ ಮುಕ್ತಗೊಳಿಸಲು,ಎಲ್ಲಾ ಅಂಗಡಿಕಾರರು,ಸಾರ್ವಜನಿಕ ಸ್ಥಳದ ಮಾಲೀಕರು ತಂಬಾಕು ಉತ್ಪನ್ನಗಳ ನಿಷೇಧಿತ ಪ್ರದೇಶ ಹಾಗೂ ೨೧ ವರ್ಷದ ವರೆಗೆ ತಂಬಾಕು ನಿಷೇಧದ ನಾಮಫಲಕವನ್ನು ಕಡ್ಡಾಯವಾಗಿ ಬಿತ್ತರಿಸಲು ಸೂಚಿಸಿ ಮತ್ತು ಜಿಲ್ಲೆಯನ್ನು ತಂಬಾಕು ಮುಕ್ತ ಹಾಗೂ ಆರೋಗ್ಯಯುತ ಜಿಲ್ಲೆಯನ್ನಾಗಿಸಲು ಎಲ್ಲರೂ ಕೈ ಜೋಡಿಸಲು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿಗಳು ಜಿ.ಪಂ ಗದಗ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಶಸ್ತçಚಿಕಿತ್ಸಕರು ಜಿಲ್ಲಾ ಆಸ್ವತ್ರೆ ಗದಗ, ಜಿಲ್ಲಾ ಸಮೀಕ್ಷಣಾಧಿಕಾರಿಗಳು, ಉಪನಿರ್ದೇಶಕರು ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆ. ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಅಧಿಕಾರಿಗಳು, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳು, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶದ ಸಿಬ್ಬಂದಿಗಳು, ಜಿಲ್ಲಾ ಉಪ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಕ.ರಾ.ಪ.ರಾ.ವಿಶ್ವವಿದ್ಯಾಲಯದ ಸಿಬ್ಬಂದಿ, ಹೊಟೇಲ ಮಾಲೀಕರ ಸಂಘದ ಅಧ್ಯಕ್ಷರು, ಚಲನಚಿತ್ರ ಮಂದಿರದ ಅಧ್ಯಕ್ಷರು, ಆಹಾರ ಸುರಕ್ಷತಾ ಅಧಿಕಾರಿಗಳು, ಉಪನಿರ್ದೇಶಕರು ಪದವಿ ಪೂರ್ವಶಿಕ್ಷಣ ಇಲಾಖೆಯ ಸಿಬ್ಬಂದಿ, ನಗರಸಭೆ ಗದಗ-ಬೆಟಗೇರಿ ಸಿಬ್ಬಂದಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ ಉಪಸ್ಥಿತರಿದ್ದರು.






























