
ಹುಬ್ಬಳ್ಳಿ,ಜು.೨೧: ಇಲ್ಲಿನ ಚೆನ್ನಪೇಟೆಯಲ್ಲಿರುವ ಸರ್ಕಾರಿ ಹೆಣ್ಣು ಮಕ್ಕಳ ಕೇಂದ್ರ ಶಾಲೆಯಲ್ಲಿ ವೆಂಕಟೇಶ್ ಅಶೋಕ್ ಕಾಟವೆ (ಗಿಂಏ) ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ೨೫೦ಕ್ಕಿಂತ ಹೆಚ್ಚು ಶಾಲಾ ಬ್ಯಾಗ್, ಪುಸ್ತಕಗಳು ಹಾಗೂ ಪರೀಕ್ಷಾ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷರಾದ ವೆಂಕಟೇಶ್ ಅಶೋಕ್ ಕಾಟವೆ ಅವರು ಮಾತನಾಡಿ,ಶಿಕ್ಷಣವೇ ಸಮಾಜವನ್ನು ಬದಲಾಯಿಸುವ ಅತ್ಯಂತ ಶಕ್ತಿಯುತ ಸಾಧನ. ಪ್ರತಿಯೊಬ್ಬ ಮಗುವಿನ ಕೈಯಲ್ಲಿ ಪುಸ್ತಕ ಇರಬೇಕು, ಕನಸುಗಳಿಗೆ ರೆಕ್ಕೆಗಳಿರಬೇಕು. ಆರ್ಥಿಕ ಪರಿಸ್ಥಿತಿ ಯಾವುದೇ ಮಗುವಿನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂಬುದು ನಮ್ಮ ಫೌಂಡೇಶನ್‌ನ ಸಂಕಲ್ಪ. ಇಂದು ನೀಡುತ್ತಿರುವ ಈ ಬ್ಯಾಗ್, ಪುಸ್ತಕಗಳು ಮತ್ತು ಪರೀಕ್ಷಾ ಕಿಟ್‌ಗಳು ಕೇವಲ ವಸ್ತುಗಳಲ್ಲ, ಮಕ್ಕಳ ಭವಿಷ್ಯದ ಮೇಲಿನ ನಮ್ಮ ನಂಬಿಕೆ ಮತ್ತು ಸಮಾಜದ ಮೇಲಿನ ನಮ್ಮ ಜವಾಬ್ದಾರಿಯ ಪ್ರತೀಕವಾಗಿದೆ ಎಂದರು.
ಒಬ್ಬ ವಿದ್ಯಾರ್ಥಿ ವಿದ್ಯಾವಂತರಾದರೆ ಒಂದು ಕುಟುಂಬವೇ ವಿದ್ಯಾವಂತವಾಗುತ್ತದೆ, ಸಮಾಜ ಸುಭದ್ರವಾಗುತ್ತದೆ ಹಾಗೂ ದೇಶದ ಭವಿಷ್ಯ ಮತ್ತಷ್ಟು ಉಜ್ವಲವಾಗುತ್ತದೆ. ಶಿಕ್ಷಣದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು ನನಸಾಗಲಿ ಎಂಬ ಆಶಯದೊಂದಿಗೆ ಗಿಂಏ ಫೌಂಡೇಶನ್ ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಿದೆ. ಸಮಾಜದ ಅಭಿವೃದ್ಧಿಗೆ ಸೇವೆಯೇ ನಮ್ಮ ಧ್ಯೇಯ, ಶಿಕ್ಷಣವೇ ನಮ್ಮ ಅತ್ಯಂತ ದೊಡ್ಡ ಹೂಡಿಕೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ ಹಳ್ಳಿಕೇರಿ,ಸಂಘ ಪರಿವಾರದ ಹಿರಿಯರಾದ ವಿನಾಯಕ ತಾಂಬೆ,ಮಹಾನಗರ ಪಾಲಿಕೆ ಸದಸ್ಯರಾದ ರಾಧಾಬಾಯಿ ಸಪಾರೆ,ಸಾಮಾಜಿಕ ಬಿಜೆಪಿ ಪ್ರಮುಖರಾದ ಗೋಪಾಲ ಬದ್ದಿ. ಸಮಾಜ ಕ್ಕಾರ್ಯಕರ್ತರಾದ ಯಶೋದಾ ತಾಂಬೆ, ಕಾಪ್ಸೆ ,ವಿ ಎ ಕೆ ಫೌಂಡೇಶನ್ ಸದಸ್ಯರಾದ ಆನಂದ ಬಾಕಳೆ, ಶ್ರೀಧರ್ ಕಲ್ಬುರ್ಗಿ, ಕಾರ್ತಿಕ್ ಪವಾರ ಸೇರಿದಂತೆ ಉಭಯ ಶಾಲೆಗಳ ಗುರುಮಾತೆಯರು,ಶಿಕ್ಷಕ ವೃಂದ,ಪಾಲಕರು ಮಕ್ಕಳು ಉಪಸ್ಥಿತರಿದ್ದರು.






























