Home ಜಿಲ್ಲೆ ಮೃತ ಗ್ರಾಹಕರ ವಾರಸುದಾರರಿಗೆ ೨ ಲಕ್ಷ ವಿಮಾ ಪರಿಹಾರ ಚೆಕ್ ವಿತರಣೆ

ಮೃತ ಗ್ರಾಹಕರ ವಾರಸುದಾರರಿಗೆ ೨ ಲಕ್ಷ ವಿಮಾ ಪರಿಹಾರ ಚೆಕ್ ವಿತರಣೆ

ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (Pಒಎಎಃಙ)ಯಡಿ ವಿಮಾ ಕಂತು ಪಾವತಿಸಿದ್ದ ಇಬ್ಬರು ಮೃತ ಗ್ರಾಹಕರ ಕುಟುಂಬಸ್ಥರಿಗೆ ತಲಾ ?೨ ಲಕ್ಷ ವಿಮಾ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.
ಹತ್ತಿಕುಣಿ ಗ್ರಾಮದ ಸಾಬಣ್ಣ ಗಣಪೂರ ಹಾಗೂ ಹೊನಗೇರಾ ಗ್ರಾಮದ ಲಕ್ಷ್ಮೀ ರಾಮಪ್ಪನೋರ ಅವರು ಸ್ವಾಭಾವಿಕವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಕುಟುಂಬಸ್ಥರಿಗೆ ಯೋಜನೆಯಡಿ ಮಂಜೂರಾದ ತಲಾ ?೨ ಲಕ್ಷ ಮೊತ್ತದ ಚೆಕ್‌ಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪಗೌಡ ಮಾಲಿಪಾಟೀಲ್ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕಿ ರೇಣುಕಾ ಗಂಧಮ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶರಣಪ್ಪಗೌಡ ಮಾಲಿಪಾಟೀಲ್, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಜನಸಾಮಾನ್ಯರಿಗೆ ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬರೂ ತಮ್ಮ ಉಳಿತಾಯ ಖಾತೆಯೊಂದಿಗೆ ಕಡಿಮೆ ಮೊತ್ತದ ವಾರ್ಷಿಕ ವಿಮಾ ಕಂತು ಪಾವತಿಸುವ ಮೂಲಕ ಕುಟುಂಬಕ್ಕೆ ಆರ್ಥಿಕ ಭದ್ರತೆ ಕಲ್ಪಿಸಿಕೊಳ್ಳಬೇಕು ಎಂದು ಹೇಳಿದರು.
ಮೃತ ಗ್ರಾಹಕರ ಕುಟುಂಬಸ್ಥರು ಪಡೆದ ಪರಿಹಾರ ಮೊತ್ತವನ್ನು ದುಂದುವೆಚ್ಚ ಮಾಡದೆ ಮಕ್ಕಳ ಶಿಕ್ಷಣ ಸೇರಿದಂತೆ ಕುಟುಂಬದ ಅಗತ್ಯಗಳಿಗೆ ಬಳಸಿಕೊಳ್ಳಬೇಕು. ಮಕ್ಕಳನ್ನು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿಸಿ, ಅವರು ಭವಿಷ್ಯದಲ್ಲಿ ಗುರಿ ಸಾಧಿಸಲು ಈ ಹಣ ನೆರವಾಗಲಿ ಎಂದು ಸಲಹೆ ನೀಡಿದರು.
ಬ್ಯಾಂಕ್ ವ್ಯವಸ್ಥಾಪಕಿ ರೇಣುಕಾ ಗಂಧಮ್ ಮಾತನಾಡಿ, ಪಿಎಂಜೆಜೆವೈ ಯೋಜನೆಯ ಪ್ರಯೋಜನಗಳ ಕುರಿತು ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ನಿರಂತರವಾಗಿ ಮಾಹಿತಿ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಯೋಜನೆಗೆ ಸೇರ್ಪಡೆಯಾಗಿ ಪ್ರತಿವರ್ಷ ವಿಮಾ ಕಂತು ಪಾವತಿಸಬೇಕು. ಕಷ್ಟದ ಸಂದರ್ಭದಲ್ಲಿ ಈ ಯೋಜನೆಯು ಕುಟುಂಬಕ್ಕೆ ಆರ್ಥಿಕ ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಮಧುಶಂಕರ ನಾಯ್ಡು, ಖಜಾಂಚಿ ಪರಶುರಾಮ, ಸಿಬ್ಬಂದಿಗಳಾದ ಬಸವರಾಜ ಕೌಳೂರ, ಪೃಥ್ವಿರಾಜ ಹೊನಗೇರಾ, ಚಂದ್ರಲಿAಗ ಮುರಾರಿ, ಶರಣಪ್ಪ ಶಂಕ್ರಪ್ಪನೋರ ಸೇರಿದಂತೆ ಹಲವರು ಉಪಸ್ಥಿತರಿದ್ದರು.