Home ಜಿಲ್ಲೆ ಕಲಬುರಗಿ ಆರ್.ಜೆ ಕಾಲೇಜಿನಲ್ಲಿ ವಿಚಾರ ಸಂಕೀರಣ

ಆರ್.ಜೆ ಕಾಲೇಜಿನಲ್ಲಿ ವಿಚಾರ ಸಂಕೀರಣ

ಕಲಬುರಗಿ:ಜೂ.24: ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ್ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ (ಓSS) ಘಟಕದ ಸಂಯುಕ್ತಾಶ್ರಯದಲ್ಲಿ “ಕಲಿಕೆ ಮತ್ತು ಜ್ಞಾನ”À ಕುರಿತು ಡಾ|| ಮೋನಿಕಾ ಮನೋವೈದ್ಯ ಶಾಸ್ತ್ರಜ್ಞರು, ಕೆ.ಬಿ.ಎನ್ ಮೆಡಿಕಲ್ ಕಾಲೇಜು ಕಲಬುರಗಿ ಇವರು ವಿಚಾರ ಸಂಕೀರ್ಣವನ್ನು ನಡೆಸಿಕೊಟ್ಟರು.

“ಕಲಿಕೆ ಮತ್ತು ಜ್ಞಾನ”À ಕುರಿತು ಡಾ|| ಮೋನಿಕಾ ಅವರು ವಿವರಣಾತ್ಮಕ ವಿಚಾರ ಸಂಕೀರ್ಣವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯಲ್ಲಿ ಸ್ಮರಣೆ ಮತ್ತು ಪರಿಣಾಮಕಾರಿ ಕಲಿಕೆ ತಂತ್ರಗಳು ಪ್ರಮುಖ ಪಾತ್ರವಹಿಸುತ್ತವೆ. ಸರಿಯಾದ ಕಲಿಕೆ ವಿಧಾನವನ್ನು ಅನುಸರಿಸುವುದರಿಂದ ಜ್ಞಾನವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ದೀರ್ಘಕಾಲ ನೆನಪಿಡಲು ಸಾಧ್ಯವಾಗುತ್ತದೆ. ಒಂದು ವಿಷಯವನ್ನು ಪದೇ ಪದೇ ಓದುವುದು, ಹೊಸ ಮಾಹಿತಿಯನ್ನು ಈಗಾಗಲೇ ತಿಳಿದಿರುವ ವಿಷಯಗಳೊಂದಿಗೆ ಜೋಡಿಸುವುದು, ಮುಖ್ಯ ಅಂಶಗಳನ್ನು ಚಿಕ್ಕದಾಗಿ ಬರೆದಿಟ್ಟುಕೊಳ್ಳುವುದು, ದೃಶ್ಯ ರೂಪದಲ್ಲಿ ಮಾಹಿತಿಯನ್ನು ನೆನಪಿಡುವುದು, ಚರ್ಚೆಗಳಲ್ಲಿ ಭಾಗವಹಿಸುವುದು, ಸಹಪಾಠಿಗಳೊಂದಿಗೆ ಕಲಿಯುವುದು, ನಿರಂತರವಾಗಿ ಓದುವುದಕ್ಕಿಂತ ಮಧ್ಯೆ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳುವುದು, ಸ್ಮರಣೆ ಮತ್ತು ಕಲಿಕೆ ತಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸುವುದರಿಂದ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆ ಗಳಿಸಿಬಹುದು. ಇವು ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಹಾಯ ಮಾಡುತ್ತವೆ ಎಂದು ತಿಳಿಸಿಕೊಟ್ಟರು.

ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ ಚವ್ಹಾಣ, ಉಪಪ್ರಾಚಾರ್ಯ ಶ್ರೀ ಕೇದಾರ ದೀಕ್ಷಿತ್, ಪ್ರಕಾಶ ಕಾಂತೀಕರ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಳೇಂದ್ರ ಹಿರೇಮಠ ಅವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಉಪನ್ಯಾಸಕ ಹಾಗೂ ಸಿಬ್ಬಂಧಿ ಬಳಗ ಉಪಸ್ಥಿತರಿದ್ದರು.