
ಮುದ್ದೇಬಿಹಾಳ: ಹುಟ್ಟಿನಿಂದ ಹಿಡಿದು ಜೀವನದ ಕೊನೆಯ ಹಂತದವರೆಗೂ ಜನರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿಕೊಂಡು ಮುಂದೆ ಸಾಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನರಿಗೆ ಸರ್ಕಾರಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ನೆರವಾಗುವ ಮೂಲಕ ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಬಾಗಲಕೋಟೆ ಜಿಲ್ಲೆಯ ಸಿದ್ಧನಕೊಳ್ಳದ ಸಿದ್ಧಶ್ರೀ ದಾಸೋಹ ಹಾಗೂ ಕಲಾ ಪೋಷಕ ಮಠದ ಪರಮಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.
ಶುಕ್ರವಾರರಂದು ಪಟ್ಟಣದ ಎಪಿಎಂಸಿ ಯಾರ್ಡ್ನ ಕರ್ನಾಟಕ ಕೋ-ಆಪ್ ಬ್ಯಾಂಕ್ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಮುದ್ದೇಬಿಹಾಳ ತಾಲೂಕು, ಸಾಮೂಹಿಕ ಶ್ರೀ ಮಹಾಲಕ್ಷಿ÷್ಮÃ ಪೂಜಾ ವ್ಯವಸ್ಥಾಪನಾ ಸಮಿತಿ ಹಾಗೂ ಮುದ್ದೇಬಿಹಾಳ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಸಾಮೂಹಿಕ ಶ್ರೀ ಮಹಾಲಕ್ಷಿ÷್ಮÃ ಪೂಜೆ, ೫೦೧ ಮುತ್ತೆöÊದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯ ದಿವ್ಯಸಾನ್ನಿಧ್ಯ ವಹಿಸಿ ಕಾರ್ಯಕ್ರಮವನ್ನು ದೀಪಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಶ್ರೀಗಳು ಧÀರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಾಣಂತಿಯರಿಗೆ ನೆರವಾಗುವ ಯೋಜನೆಗಳಿಂದ ಹಿಡಿದು ಮಕ್ಕಳ ಜನನದ ನಂತರ ಅವರ ಜೀವನದ ವಿವಿಧ ಹಂತಗಳಲ್ಲಿ ಅನುಕೂಲವಾಗುವ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಾ ಸಾಗಿದೆ ಇಂತಹ ಜನಪರ ಯೋಜನೆಗಳ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು. ಇಂದಿನ ದಿನಮಾನಗಳಲ್ಲಿ ಯೋಜನೆಗಳ ಸದುಪಯೋಗಕ್ಕಿಂತ ದುರುಪಯೋಗವೇ ಅಲ್ಲಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ, ಧರ್ಮಸ್ಥಳ ಸಂಸ್ಥೆಯು ರೂಪಿಸಿರುವ ಯೋಜನೆಗಳು ಅರ್ಹ ಜನರಿಗೆ ತಲುಪುವ ಮೂಲಕ ಅವರ ಬದುಕಿನಲ್ಲಿ ಬದಲಾವಣೆ ತರುತ್ತಿವೆ. ನಿಜವಾದ ಸಂಕಷ್ಟದ ಸಮಯದಲ್ಲಿ ನೆರವಿಗೆ ಬರುವವರೇ ದೇವರಿಗೆ ಸಮಾನರು. ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ಧರ್ಮಕಾರ್ಯ ಎಂದು ಶ್ರೀಗಳು ಇಂದಿನ ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ಅವಕಾಶಗಳನ್ನು ಹೊಂದಿದ್ದಾರೆ. ಧರ್ಮಸ್ಥಳದಂತಹ ಸಂಘ-ಸAಸ್ಥೆಗಳ ಮೂಲಕ ಉಳಿತಾಯದ ಮನೋಭಾವ ಬೆಳೆಸಿಕೊಂಡು, ಸ್ವಯಂ ಉದ್ಯೋಗಗಳನ್ನು ಆರಂಭಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಕುಟುಂಬದ ನಿರ್ವಹಣೆಯ ಜೊತೆಗೆ ಸಮಾಜದಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಬೇಕು. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿ ಮುನ್ನಡೆಯುವ ಮೂಲಕ ಇತರರಿಗೆ ಮಾದರಿಯಾಗಬೇಕು. ಇಂತಹ ಸಂಸ್ಥೆಗಳ ಸದಸ್ಯತ್ವ ಪಡೆದು ಅವುಗಳ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಸದಸ್ಯತ್ವ ಪಡೆದಿರುವುದು ಸಾರ್ಥಕವಾಗುತ್ತದೆ ಎಂದರು. ಹಸಿದವರಿಗೆ ಅನ್ನ ನೀಡುವುದು, ಅಸಹಾಯಕರಿಗೆ ಆಸರೆಯಾಗುವುದು ನಿಜವಾದ ದೇವರ ಸೇವೆಯಾಗಿದೆ. ಕಷ್ಟದಲ್ಲಿರುವವರಿಗೆ ಒಳ್ಳೆಯದನ್ನು ಮಾಡಿದಾಗ ದೇವರೇ ನಮ್ಮ ಬಳಿಗೆ ಬಂದAತಾಗುತ್ತದೆ. ಇಂತಹ ಮಾನವೀಯ ಸೇವೆ ಮಾಡುವ ಶಕ್ತಿ ಮಹಿಳೆಯರಲ್ಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕರು ಹಾಗೂ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಮಾತನಾಡಿ ಸಾಮಾಜಿಕ ಕಾರ್ಯಗಳನ್ನು ಪರಮಪೂಜ್ಯರಾದಂತಹ ದರ್ಮದರ್ಶಿ ಡಾ. ವೀರೇಂದ್ರ ಹೆಗ್ಗಡೆ ದಂಪತಿಗಳು ಲಕ್ಷಾಂತರ ಮಹಿಳೆಯರಿಗೆ ಆರ್ಥಿಕವಾಗಿ ಸಬಲೀಕರಣ ಮಾಡುವ ಕುರಿತು ಸಾಕಷ್ಟು ಯೋಜನೆಗಳೊಂದಿಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಾಗಲಾಗಿದೆ ಅಂತಹ ಸೇವೆಯಲ್ಲಿ ಮುನ್ನುಗ್ಗಿದ ಪೂಜ್ಯರಿಗೆ ದಂಪತಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆಂದರು ಗ್ರಾಮೀಣ ಪ್ರದೇಶಗಳಲ್ಲಿ ಬದಲಾವಣೆ ತರುತ್ತಿರುವಂತಹ ಯೋಜನೆಗಳನ್ನು ರೂಪಿಸುವದರೊಂದಿಗೆ ಮುಂದಾಗಿರುವದು ಇದು ಫಲ ನೀಡುವ ಕಾರ್ಯ ಮಾದರೀಯಕಾರ್ಯ ಇದಾಗಿದೆ ಎಂದರು.
ಚೀನಾ ದೇಶದಲ್ಲಿ ಶೇ. ೭೫ ರಷ್ಟು ಉಪಯೋಗವಿಲ್ಲದ ಭೂಮಿಯಿದೆ ಶೇ. ೨೫ ರಷ್ಟು ಒಳ್ಳೆಯ ಭೂಮಿ ಇದೆ ೧೯೬೨ ರಲ್ಲಿ ಅತ್ಯಂತ ಬಡತನದಿಂದ ಆ ದೇಶ ದಿವಾಳಿ ಎದ್ದು ಹೋಗಿತ್ತು ನಂತರ ವಿವಿಧ ಯೀಜನೆಗಳನ್ನು ರೂಪಿಸಿಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾ ಮುನ್ನಡೆದಿದ್ದು ಆರ್ಥಿಕವಾಗಿ ಮುಂದುವರೆದಿದ್ದು ಎದ್ದು ಕಾಣುತ್ತಿದೆ ಅಂತಹ ಯೋಜನೆಗಳನ್ನು ನಾವು ಕೂಡಾ ರೂಪಿಸಿಕೊಳ್ಳಬೇಕಾಗಿದೆ ಎಂದರು ನಮ್ಮ ದೇಶ ಆರ್ಥಿಕವಾಗಿ ೫ ನೇ ಸ್ಥಾನದಲ್ಲಿದೆ ಸಮಾಜವೆಂಬುದು ಗಟ್ಟಿಯಾಗಿ ನಿಲ್ಲಬೇಕಾದರೆ ಉದ್ಯೋಗ, ಕೌಶಲ್ಯ, ಪರಿಶ್ರಮವೆಂಬುದು ಎಲ್ಲರಲ್ಲಿ ಬಂದರೆ ಸಂಪತ್ತು ಎಂಬುದು ಲಭಿಸಲಿದೆ ಎಂದ ಅವರು ನಮ್ಮ ಭಾಗದಲ್ಲಿ ಕುಡಿಯಲು ನೀರಿಲ್ಲ, ಉದ್ಯೋಗವಿಲ್ಲ, ಉದ್ಯೋಗಗಳು ಸೃಷ್ಠಿಯಾಗಬೇಕಾಗಿದೆ ಆದರೂ ಇಂತಹದ್ದರ ಭಗ್ಗೆ ಯೋಚಿಸಬೇಕಾಗಿದೆ ಎಂದರು ಸಬಲೀಕರಣ ಮಾಡಿ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದ ಅವರು ದ. ಕರ್ನಾಟಕದಲ್ಲಿ ಪ್ರತಿಯೊಂದು ಮನೆಯಲ್ಲಿ ಹಾಗೂ ಚೈನಾ ದೇಶದಲ್ಲಿ ಹಾಲಿನ ಉತ್ಪಾದನೆ ಹೆಚ್ಚುತ್ತಲಿದೆ ಆದರೆ ನಮ್ಮ ದೇಶದಲ್ಲಿ ಅಂತಹ ಉತ್ಪಾದನೆ ಮಾಡುವ ಕಲೆ ನಮ್ಮಲ್ಲಿ ಹೆಚ್ಚಿಸಿಕೊಳ್ಳಬೇಕಾಗಿದೆ ಅಂದರೆ ಅಭಿವೃದ್ದಿ ಪಥದಲ್ಲಿ ಸಾಗಲು ಅನುಕೂಲವಾಗಲಿದೆ ಎಂದರು.
ವಿಜಯಪುರ ಶ್ರೀ.ಕ್ಷೇ.ಧ.ಗ್ರಾ. ಬಿಸಿ ಟ್ರಸ್ಟ್ನ ನಿರ್ದೇಶಕರಾದ ಮೋಹನ ನಾಯಕ ಪ್ರಾಸ್ತಾವಿಕ ಮಾತನಾಡಿ ಧರ್ಮಸ್ಥಳ ಕ್ಷೇತ್ರ ಧಾರ್ಮಿಕ ಕ್ಷೇತ್ರವಾಗಿರುವದರಿಂದ ಹಲವಾರು ಕಾರ್ಯಕ್ರಮಗಳು ಧರ್ಮಸ್ಥಳ ಯೋಜನೆಯ ಮೂಲಕ ನಡೆಯುತ್ತಿದೆ ಸುಮಾರು ೨೧೫೦ ಮದ್ಯವರ್ತಿಗಳ ಶಿಭಿರದಲ್ಲಿ ಕುಡಿತವನ್ನು ಬಿಡಿಸುವ ಕಾರ್ಯಕ್ರಮವನ್ನು ರಾಜ್ಯದಲ್ಲಿ ವಿರೇಂದ್ರ ಹೆಗ್ಗಡೆ ಅವರು ಮಾಡಿದ್ದಾರೆ ಸುಮಾರು ೧ ಲಕ್ಷದ ೪೫ ಸಾವಿರ ಮದ್ಯಪಾನ ವ್ಯಸನಿಗಳನ್ನು ಪಾನಮುಕ್ತರನ್ನಾಗಿ ಮಾಡಿದಂತಹ ಹೆಗ್ಗಳಿಕೆ ಧರ್ಮಾದಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರಿಗಿದೆ ಸಲ್ಲುತ್ತದೆ ಎಂದರು. ಈ ವರ್ಷ ಜಿಲ್ಲೆಯಲ್ಲಿ ಮದ್ಯವರ್ತಿಗಳ ಶಿಭಿರವನ್ನು ಮಾಡಿದ್ದೇವೆ ಪ್ರತಿಯೊಂದು ಶಿಭಿರದಲ್ಲಿಯೂ ಸುಮಾರು ೭೦ ರಿಂದ ೮೦ ಜನ ಶಿಭಿರಾರ್ಥಿಗಳು ಸೇರಿಕೊಂಡು ಪಾನಮುಕ್ತರಾಗಿ ಇಂದು ನವ ಜೀವನ ಸಮೀತಿಯ ಸದಸ್ಯರಾಗಿ ಸುರಕ್ಷಿತವಾದ ಜೀವನ ನಡೆಸಲು ಅವರಿಗೆ ದಾರಿದೀಪವಾಗಿದ್ದಾರೆ ಮೈಕ್ರೋಫೈನಾನ್ಸ್ಗಳಿಗಿಂತಲೂ ವಿಬಿನ್ನವಾಗಿರುವಂತಹ ಧರ್ಮಸ್ಥಳದ ಈಜಿಮಾದರೀಯ ಕಾರ್ಯಕ್ರಮದಲ್ಲಿ ಸದಸ್ಯರಿಗೆ ಸಾಲದ ವ್ಯವಹಾರದ ವ್ಯವಸ್ಥೆ ಮಾಡಿಕೊಟ್ಟಿದೆ ಸದಸ್ಯರು ಬೇರೆ ಬೆರೆ ಮೂಲಭೂತ ಸೌಕರ್ಯಗಳಿಗೆ, ಕೃಷಿ ಉತ್ಪಾದನೆ ಚಟುವಟಿಕೆಗಳಿಗೆ ಮಕ್ಕಳ ವಿದ್ಯಾಬ್ಯಾಸಕ್ಕೆ, ಹೈನುಗಾರಿಕೆ ಇನ್ನಿತರ ಚಟುವಟಿಕೆಗಳಿಗೆ ಅಭಿವೃದ್ದಿಗೆ ಸಾಲ ಬಳಕೆ ಮಾಡಲಾಗುತ್ತಿದೆ ಧರ್ಮಸ್ಥಳ ಸಂಸ್ಥೆ ಕೆವಲ ಸಾಲ ಕೊಡುವ ಸಂಘ ಮಾತ್ರವಲ್ಲ ಗ್ರಾಮದಲ್ಲಿಯ ಮೂಲಭೂತ ಕಾರ್ಯಗಳನ್ನು ಪೂಜ್ಯರು ಗುರುತಿಸಿ ಶುದ್ದ ಕುಡಿಯುವ ನೀರಿನ ಘಟಕ, ಕೆರೆ ಹೂಳೆತ್ತುವ ಕಾರ್ಯಕ್ರಮ, ಶಿಕ್ಷಕರ ನೇಮಕಾತಿ, ನಿರ್ಗತಿಕರಿಗೆ ಮಾಶಾಸನ, ಹೇಮಾವತಿ ಅಮ್ಮನವರ ವಾತ್ಸಲ್ಯ ಕಾರ್ಯಕ್ರಮ, ಮಹಿಳಾ ಜ್ಞಾನ ವಿಕಾಸದ ಮೂಲಕ ಜ್ಞಾನವನ್ನು ತುಂಬುವAತಹ, ನಿರ್ಗತಿಕ ಕುಟುಂಬಗಳಿಗೆ ವಾಸದ ಮನೆಗಳನ್ನು ನಿರ್ಮಾಣ ಮಾಡುವಂತ ಕಾರ್ಯಗಳನ್ನು ಈ ಸಂಸ್ಥೆ ಮಾಡುತ್ತಾ ಸಾಗುತ್ತಿದೆ ಎಂದರು.
ಗುತ್ತಿಗೆದಾರರಾದ ಸಿ.ಬಿ. ಅಸ್ಕಿ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀಶೈಲ ದೊಡಮನಿ ಮಾತನಾಡಿದರು.
ಅದ್ಯಕ್ಷತೆಯನ್ನು ಸಾಮೂಹಿಕ ಶ್ರೀ ಮಹಾಲಕ್ಷಿ÷್ಮÃ ಪೂಜಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಮಲ್ಲಣ್ಣ ಕೆಸರಟ್ಟಿ ವಹಿಸಿದ್ದರು.
ಈ ಸಮಯದಲ್ಲಿ ಕೆ.ವಾಯ್. ಬಿರಾದಾರ, ಶ್ರೀಶೈಲ ಮೇಟಿ, ಸಹನಾ ಬಡಿಗೇರ, ಮೇಲ್ವಿಚಾರಕರಾದ ಲಾಯಪ್ಪ ನಂದ್ಯಾಳ, ಎಸ್.ಎಚ್. ದೇವರಳ್ಳಿ, ಸೇವಾ ಪ್ರತಿನಿಧಿ ವಿಜಯಲಕ್ಷಿö್ಮÃ ಮೋಟಗಿ ಮೊದಲಾದವರು ಉಪಸ್ತಿತರಿದ್ದರು.
ಇದೇ ಸಮಯದಲ್ಲಿ ಧರ್ಮಸ್ಥಳ ಸಂಸ್ಥೆಯ ವತಿಯಿಂದ ಅರ್ಹ ವೃದ್ದ ಮಹಿಳೆಗೆ ಮಾಶಾಸನ ಹಾಗೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿವೇತನ(ಸ್ಕಾಲರ್ಶಿಪ್) ನೀಡಲಾಯಿತು.
ಕಾರ್ಯಕ್ರಮಕ್ಕೂ ಮೊದಲು ಸಾಮೂಹಿಕ ಶ್ರೀ ಮಹಾಲಕ್ಷಿö್ಮÃ ಪೂಜಾ ಕಾರ್ಯಕ್ರಮ ನಡೆಯಿತಲ್ಲದೇ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು.
ಈ ಸಮಯದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರು, ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ತಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಿವಾನಂದ ಪಿ. ಸ್ವಾಗತಿಸಿದರು ಮಂಜುಳಾ ಕೊಳ್ಳಿ ನಿರೂಪಿಸಿ ವಂದಿಸಿದರು.





















