Home ಜಿಲ್ಲೆ ಮಳೆಬರುವಿಕೆಗಾಗಿ ಗ್ರಾಮದೇವತೆ ಆಲಯದಲ್ಲಿ ಭಕ್ತರಿಂದ ಭಜನೆ

ಮಳೆಬರುವಿಕೆಗಾಗಿ ಗ್ರಾಮದೇವತೆ ಆಲಯದಲ್ಲಿ ಭಕ್ತರಿಂದ ಭಜನೆ

ಗುರುಮಠಕಲ್: ಮುಂಗಾರು ಬಿತ್ತನೆ ಮಡಿದ ರ?ತರು ಪ್ರತಿದಿನಾಲು ತಮ್ಮ ತಮ್ಮ ಹೊಲಗಳಿಗೆ ಹೊಗಿ ಬಿತ್ತಿದ ಬೀಜಗಳ ಮೊಳಕೆಗಳನ್ನು ನೊಡಿ, ಅಯ್ಯೋ ಶಿವನೆ ಎಂತಹ ಪರಸ್ಥಿತಿಯಲ್ಲಿ ರೈತರನ್ನು ಇಟ್ಟು ನೋಡುತ್ತಿರುವಿಯಲ್ಲ. ನಿನ್ನ ತಲೆಯಮೇಲಿರುವ ಗಂಗಾ ಮಾತೆಯನ್ನು ನಿನ್ನ ಜಡೆಯಲ್ಲಿ ಸುತ್ತಿ ಕೊಂಡು ಕುಳಿತರೆ ಸಕಲ ಚರಾಚರ ಜೀವರಾಶಿಗಳ ಪಾಡೆನು, ಬಿತ್ತಿದ ಬೀಜಗಳ ಪಾಡೆನು ನಿನ್ನ ಜಡೆಯಲ್ಲಿರುವ ಗಂಗಾಮಾತೆಯನ್ನು ಧರೆಗಿಳಿಸಿ, ಸರ್ವರನ್ನು ಸಂರಕ್ಷಣೆ ಮಾಡುವ ಭಕ್ತ ವತ್ಸಲವೆಂಬ ಬಿರುದುವುಳವ, ಸಾಕ್ಷಾತ್ ಶಿವ ಪರಮೇಶ್ವರನು ನೀನು. ಮಾತಾ ಪಾರ್ವತಿ ಮಾತೆಯ ಸಮೇತನಾಗಿ, ನಿನ್ನ ಜಡೆಯಲ್ಲಿರುವ ಗಂಗಮ್ಮ ತಾಯಿಯನ್ನು ಧರೆಗಿಳಿಸಿ ಸರ್ವರ ದುಃಖವನ್ನಳಿಸಲು ಗಂಗಮ್ಮ ದೇವಿ ಮಾತೆಯನ್ನು (ಮಳೆಯನ್ನು) ಭೂವಿಗೆ ಇಳಿಸಿ ಸಕಲರಿಗೆ ಸಂತೋಷ ನೀಡಲಿ ಎಂದು ತಾಲೂಕಿನ ಸಮಿಪದ ಚಂಡರಕಿ ಗ್ರಾಮದಲ್ಲಿ ಗ್ರಾಮದೇತೆ ಶ್ರೀ ಮಾತ ಊರಡಮ್ಮ ದೇವಿ ದೇವಸ್ಥಾನದಲ್ಲಿ ಭಕ್ತರು ಮಳೆ ಬರುವಿಕೆಗಾಗಿ ಭಜನೆ ಮಾಡಿದರು. ಈ ವೇಳೆ ಗ್ರಾಮದ ಭಕ್ತರು ಭಜನೆಯಲ್ಲಿ ಇದ್ದರು.