
ಕಲಬುರಗಿ,ಜೂ 10: ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಮೇಲಿನ ಕೇಸ್ ಹಿಂದಕ್ಕೆ ಪಡೆಯುವಂತೆ ಭಾರತೀಯ ಜನತಾ ಪಾರ್ಟಿ ಓಬಿಸಿ ನಗರ ಜಿಲ್ಲಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಅವರು ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಳಂದ ಪಟ್ಟಣದಲ್ಲಿ ಪ್ರತಿಭಟನೆಕಾರರ ಮೇಲೆ ಕಲ್ಲುತೂರಾಟ ಮಾಡಿದವರ ಮೇಲಿನ ಕೇಸ್ ಹಿಂದಕ್ಕೆ ಪಡೆದ ಸಿದ್ದರಾಮಯ್ಯನವರ ನಡೆಯನ್ನು ವಿರೋಧಿಸಿ ಇತ್ತೀಚೆಗೆ ಕಲಬುರಗಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕರು ಸತ್ಯವನ್ನು ಹೇಳಿದ ಕಾರಣಕ್ಕೆ ಅವರ ಮೇಲೆ ಕೇಸ್ ದಾಖಲು ಮಾಡಲಾಗಿದ್ದು, ಕೇಸ್ ಹಿಂದಕ್ಕೆ ಪಡೆಯ ಬೇಕು ಎಂದು ಆಗ್ರಹಿಸಿದರು
1983-84ರ ನಡೆದ ಚುನಾವಣೆಯ ಸಂದರ್ಭದಲ್ಲಿ ಮಾಜಿ ಶಾಸಕ ಖಮರುಲ್ ಇಸ್ಲಾಂ ಅವರು ಹೇಳಿಕೆಯೊಂದನ್ನು ನೀಡಿದ್ದರು ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ಅವರ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಆರೋಪಿಸಿದ್ದರು.
ಆಗ ಮಾಜಿ ಕಾರ್ಮಿಕ ಸಚಿವರು ಖಮರುಲ್ ಇಸ್ಲಾಂ ಅವರ ಮೇಲೆ ಕೇಸ್ ದಾಖಲಿಸಿದ್ದರು. ಅಂದು ಸರ್ಕಲ್ ಇನ್ಸಪೆಕ್ಟರ್ ಅವರು ತನಿಖೆ ಕೈಗೊಂಡು ಕೋರ್ಟಿಗೆ ಅಂತಿಮ ವರದಿಯನ್ನು ಕೂಡ ಸಲ್ಲಿದ್ದರು ಎನ್ನಲಾಗಿದೆ.
ದತ್ತಾತ್ರೇಯ ಪಾಟೀಲ ರೇವೂರ ಅವರು ಸತ್ಯವನ್ನು ಮುಖದ ಮೇಲೆ ಹೊಡೆದ ಹಾಗೆ ಹೇಳಿದಕ್ಕೆ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದು ಕಾಂಗ್ರೆಸ್‍ನವರು ಆತ್ಮ ವಂಚನೆ ಮಾಡಿಕೊಂಡಿದ್ದಾರೆ. ಅಂದು ಮತದಾರರನ್ನು ದಾರಿ ತಪ್ಪಿಸಿ ಸಮಾಜವನ್ನು ಒಡೆದಾಳುವ ನೀತಿಯನ್ನು ಖಮರಲ್ ಇಸ್ಲಾಂ ಅವರಿಂದ ಆಗಿರುವುದಕ್ಕೆ ಅವರ ಮೇಲೆ ಮಾಜಿ ಕಾರ್ಮಿಕ ಸಚಿವರು ಕೇಸ್ ದಾಖಲಿಸಿರುವುದು ಸುಳ್ಳೇ?ಅಂದಿನ ಸರ್ಕಲ್ ಇನ್ಸಪೆಕ್ಟರ್ ಪ್ರಕರಣದ ಕುರಿತು ತನಿಖೆ ಕೈಗೊಂಡು ಕೋರ್ಟಿಗೆ ಅಂತಿಮ ವರದಿ ಸಲ್ಲಿಸಿರುವುದು ಕೂಡ ಸುಳ್ಳೇ? ಎಂದು ಪ್ರಶ್ನಿಸಬಹುದಲ್ಲವೇ? ತಪ್ಪು ನಡೆದಿದ್ದರಿಂದಲೇ ಇಂದು ಅಪ್ಪು ಗೌಡರು ಸತ್ಯವನ್ನೇ ಹೇಳಿರಬಹುದು.
ಭಾರತದಲ್ಲಿ ಜನಿಸಿ ಭಾರತದ ಅನ್ನವನ್ನು ಸವಿದು ಭಾರತವನ್ನು ವಿರೋಧಿಸುವವರನ್ನು ನಾವು ವಿರೋಧಿಸುವುದು ತಪ್ಪೆ? ಭಾರತವನ್ನು ವಿರೋಧಿಸುವ ಮಾನಸಿಕತೆ ಇರುವವರನ್ನು ಎಚ್ಚರಿಸಿದರೇ ಅದು ತಪ್ಪೆ? ಎಂದು ಪ್ರಶ್ನಿಸಿದರು.
ರೇವೂರ ಅವರ ಮೇಲಿನ ಕೇಸ್ ಹಿಂದಕ್ಕೆ ಪಡೆಯಬೇಕು, ಇಲ್ಲವಾದಲ್ಲಿ ಕಲಬುರಗಿ ನಗರದ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲದೇ ನಾಗರಿಕರು ಹೋರಾಟ ಮಾಡಬೇಕಾಗುತ್ತದೆ ಎಂದರು
ಸುದ್ದಿಗೋಷ್ಠಿಯಲ್ಲಿ ಅಭಿಷೇಕ ಗುತ್ತೇದಾರ, ಜಗನ್ನಾಥ ಶಾಪುರಕರ್,ಅರವಿಂದ ಪೋದ್ದಾರ,ರಾಕೇಶ ಪೋದ್ದಾರ,ಭಾಗಣ್ಣ ಅವರು ಸೇರಿದಂತೆ ಹಲವರಿದ್ದರು.


























