Home ಜಿಲ್ಲೆ ಬಿಎಸ್ ಎಸ್ ಕೆ ಕಾರ್ಖಾನೆ ಪುನಶ್ಚೇತನಕ್ಕೆ ಒತ್ತಾಯ: ಶಾಸಕ ಪಾಟೀಲ್

ಬಿಎಸ್ ಎಸ್ ಕೆ ಕಾರ್ಖಾನೆ ಪುನಶ್ಚೇತನಕ್ಕೆ ಒತ್ತಾಯ: ಶಾಸಕ ಪಾಟೀಲ್

ಹುಮನಾಬಾದ: ರೈತರ ಜೀವನಾಡಿಯಾಗಿರುವಬೀದರ ಸಹಕಾರಸಕ್ಕರೆ ಕಾರ್ಖಾನೆಯನ್ನು (ಬಿಎಸ್‍ಎಸ್‍ಕೆ) ತಕ್ಷಣವೇ ಪುನರಾರಂಭಿಸುವ0ತೆ ಒತ್ತಾಯಿಸಿ, ಶಾಸಕ ಡಾ.ಸಿದ್ದು ಪಾಟೀಲ ಅವರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಸುಮಾರು 30 ಕಿ.ಮೀ ನಡೆಯಿತು.

ಪಟ್ಟಣದ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪಾದಯಾತ್ರೆಯು ಹುಡಗಿ, ನಂದಗಾಂವ, ಮಲ್ಕಾಪುರ ವಾಡಿ, ಬೇನ್‍ಚಿಂಚೋಳಿ, ಹಳ್ಳಿಖೇಡ್ ಬಿ. ಬಿಎಸ್‍ಎಸ್‍ಕೆ ಕಾರ್ಖಾನೆ ವರೆಗೂ ಸಾಗಿತ್ತು.

ಶಾಸಕ ಡಾ. ಸಿದ್ದು ಪಾಟೀಲ್ ಮಾತನಾಡಿ ಇಲ್ಲಿನ ಬಿಎಸ್‍ಎಸ್‍ಕೆ ಉಳಿಸಿ ಹಿತರಕ್ಷಣೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದ ಅವರು, ಸಚಿವ ಈಶ್ವರ ಖಂಡ್ರೆ ಅವರ ತಂದೆಯವರೇ ಸ್ಥಾಪಿಸಿದ ಈ ಕಾರ್ಖಾನೆಯನ್ನು ಅವರು ಮಾರಾಟವಾಗಲು ಬಿಡದೆ, ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು

ಡಿಸಿಸಿ ಬ್ಯಾಂಕ್‍ನವರು ಕಾರ್ಖಾನೆಗೆ ನೀಡಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಅಪೆಕ್ಸ್ ಬ್ಯಾಂಕ್ ಮತ್ತು ಎಸ್‍ಬಿಐ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಸರ್ಕಾರವು ಕಾರ್ಖಾನೆಗೆ ನೀಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಕಾರ್ಮಿಕರ ಬಾಕಿ ಪೂರ್ಣ ವೇತನವನ್ನು ಪಾವತಿಸಬೇಕು ಎಂದು ಬತ್ತಾಯಿಸಿದರು

ಮಾಜಿ ಕೇಂದ್ರಸಚಿವಭಗವಂತ ಖೂಬಾ ಮಾತನಾಡಿ, ರಾಜ್ಯ ಸರ್ಕಾರವು ಈ ಕಾರ್ಖಾನೆಯನ್ನು ಲೀಸ್ ಆಧಾರದಲ್ಲಿ ಗುತ್ತಿಗೆಗೆ ನೀಡಿದರೆ,ಕೇಂದ್ರಸರ್ಕಾರದಿಂದ
ಸೂಕ್ತ ಅನುದಾನ ತಂದು ಕಾರ್ಖಾನೆಯ ಆಧುನೀಕರಣಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಬಸವರಾಜ ಆರ್ಯ ಮಾತನಾಡಿ, ಹಿಂದೆ ಕಾರ್ಖಾನೆ ಸಂಕಷ್ಟದಲ್ಲಿದ್ದಾಗ ದಿ. ರಾಮಚಂದ್ರ ಆರ್ಯ ಹಾಗೂ ಮಿರಾಜೋದ್ದಿನ್ ಪಟೇಲ್ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ಕಾರ್ಖಾನೆ ನಡೆಸಿದ್ದರು.ಇದೇಕಾರ್ಖಾನೆಯ ಅಡಿಪಾಯದಿಂದ ಅಧಿಕಾರಕ್ಕೆಬಂದ ಸಚಿವ ಈಶ್ವರ ಖಂಡ್ರೆ ಅವರು ಕಾರ್ಖಾನೆಯ ಋಣ ತೀರಿಸುವ ಕೆಲಸ ಮಾಡಬೇಕಿದೆ ಎಂದುಆಕ್ರೋಶವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮಾಜಿ ಶಾಸಕರಾದ ಸುಭಾಷ ಕಲ್ಲೂರ್, ಪ್ರಕಾಶ್ ಖಂಡ್ರೆ, ಪ್ರಮುಖರಾದ ಈಶ್ವರ ಸಿಂಗ್ ಠಾಕೂರ್, ,ಸಂತೋಷ ಪಾಟೀಲ, ಸೇರಿದಂತೆ ಅನೇಕರು ಇದ್ದರು


ಬೇಡಿಕೆ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಜಿಲ್ಲೆಯ ರೈತರು ಅಂದಿಗೆ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಹೋರಾಟ ನಡೆಸುವುದಾಗಿ ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ

ಶಾಸಕ ಡಾ. ಸಿದ್ದು ಪಾಟೀಲ್

ಕಾರ್ಖಾನೆ ಈ ಸ್ಥಿತಿಗೆ ಬರಲು ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಸಹೋದರ ಅಮರ ಖಂಡ್ರೆ ನೇರ ಹೊಣೆಯಾಗಿದ್ದಾರೆ. ಕಾರ್ಖಾನೆ ಉಳಿಸದಿದ್ದರೆ ಭವಿಷ್ಯದಲ್ಲಿ ಈಶ್ವರ ಖಂಡ್ರೆ ಪರಿವಾರಕ್ಕೆ ರಾಜಕೀಯ ಭವಿಷ್ಯ ಅಂತ್ಯವಾಗುತ್ತದೆ

ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಬೀದರ್