ಸೈದಾಪುರ:ಜು.೧೧:ಸಮೀಪದ ನೀಲಹಳ್ಳಿ ಕಿಲ್ಲನಕೇರಾ ಗ್ರಾಮದಲ್ಲಿ ಶಿಥಿಲ್‌ಗೊಂಡ ನೀರಿನ ಟ್ಯಾಂಕ್ ನೆಲಸಮ ಗೊಳಿಸಿ ಉತ್ತಮ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಕೈಯಲ್ಲಿ ಕಾಲಿಕೊಡ ಹಿಡಿದು ಚಳುವಳಿ ಮಾಡಿದರು ಎಚ್ಚತ್ತು ಕೊಳ್ಳದ ಅಧಿಕಾರಿಗಳ ವಿರುದ್ದ ಯಾದಗಿರಿ – ರಾಯಚೂರು ಹೋಗುವ ಮುಖ್ಯ ರಸ್ತೆ ಕಿಲ್ಲನಕೇರಾ ಸರ್ಕಲ್‌ನಲ್ಲಿ ಜಾಲಿಮುಳ್ಳು ಬಡಿದು ಬೃಹತ್ ಪ್ರತಿಭಟನೆಯನ್ನು ಇದೇ ಜೂಲೈ – ೧೬ ರಂದು ಬೆಳಗ್ಗೆ ೯ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತಿಯ ಕೋಲಿ ಸಮಾಜದ ರಾಜ್ಯ ಸಂಘಟನ ಕಾರ್ಯಾದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಹಿಂದೇ ಭಾರಿ ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ ಕೆಲವು ಅಧಿಕಾರಿಗಳು ನಾಮಕವಾಸ್ತೆ ಗ್ರಾಮಕ್ಕೆ ಬೇಟಿ ನೀಡಿ ಒಂದು ವಾರದಲ್ಲಿ ಸಮಸ್ಯಗಳನ್ನು ಬಗೆಹರಿಸುದಾಗಿ ಬರವಸೆ ನೀಡಿದರು. ಅಧಿಕಾರಿಗಳ ದಿವ್ಯಾ ನಿರ್ಲಕ್ಷದಿಂದ ಗ್ರಾಮ ಗಬ್ಬೆದ್ದು ನಾರುತ್ತಿದೆ. ಸರಿಯಾದ ನೀರು ನೈರ್ಮಲ್ಯ ನಿರ್ವಹಣೆ ಆಗುತ್ತಿಲ್ಲ, ಆದರೆ ಹಣ ಮಾತ್ರ ಖರ್ಚಾಗುತ್ತಿದೆ. ಕನಿಷ್ಟ ಶುದ್ದ ಕುಡಿಯುವ ನೀರಿನ ಸೌಲಭ್ಯ ಸರಿಯಾಗಿ ಜನತೆಗೆ ಸಿಗುತ್ತಿಲ್ಲ. ದೂರವಾಣಿ ಕರೆ ಮಾಡಿದರೂ ಸ್ಪಂದಿಸುವುದಿಲ್ಲ, ಜಿಲ್ಲೆಯಾಗಿ ೧೬ ವರ್ಷವಾದರೂ ಗ್ರಾಮ ಸೌಂದರ್ಯðಕರಣವಾಗಿಲ್ಲ ಎಂದು ಅವರು ದೂರಿದ್ದಾರೆ. ಈ ಬೇಜವಾಬ್ದಾರಿತನ ಖಂಡಿಸಿ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆಗೆ ನಿರ್ಧರಿಸಲಾಗಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಾದಗಿರಿ ರಾಯಚೂರು ಮುಖ್ಯ ರಸ್ತೆ ತಡೆದು ಜಿಲ್ಲಾಡಳಿತಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಬೇಕೆAದು ಅವರು ಮನವಿ ಮಾಡಿದ್ದಾರೆ.
ಇದೇ ಸಂದರ್ಬದಲ್ಲಿ ಸಿದ್ರಾಮ, ಮಲ್ಲೇಶಿ, ಯಂಕಪ್ಪ ಬಾವೂರ ಹೊಸಮನಿ, ಮರೆಪ್ಪ ಶಿಲ್ಪಿ ಬಾವೂರ, ಬಸವರಾಜ ಬಾವೂರ ಗ್ಯಾರೇಜ್, ಬೀರಲಿಂಗಪ್ಪ ಎದ್ದೇರಿ, ಶರಣಪ್ಪ ಹೊಸಳ್ಳಿ, ಬಸಪ್ಪ ಬಾಜರ್, ಹಣಮಂತ ಸರೋಜ ಟ್ಯಾಕ್ಟರ್, ಭೀಮಪ್ಪ ಟೆಂಟ್, ಸಣ್ಣ ಯಂಕಪ್ಪ ಬಾವೂರ, ನಾಗಪ್ಪ ಸುರಪುರ, ನಾಗಪ್ಪ ಗುಂಡ್ಕಲ್, ಈಶಪ್ಪ ಶೇಖಸಿಂದಿ, ಮಲ್ಲಪ್ಪ ಪೂಜಾರಿ, ಖಾಜಪ್ಪ ಬುಗಟೇಗರ್, ಚಾಂದ್ ಫೈಲ್ದೋರ್, ಮಹಿಬೂಬ್ ಬಂಗ್ಲಿ, ದೇವಪ್ಪ ಪೂಜಾರಿ, ನಾಗಪ್ಪ ಆಟೋ ಬಾವೂರ, ಉಸೇನ್ ಕತ್ತಣ್ಣೋರ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.





























