Home ಜಿಲ್ಲೆ ಅಪಾಯದ ಹಂತದಲ್ಲಿರುವ 129 ಸರಕಾರಿ ಶಾಲೆ ನೆಲಸಮಕ್ಕೆ ತೀರ್ಮಾನ

ಅಪಾಯದ ಹಂತದಲ್ಲಿರುವ 129 ಸರಕಾರಿ ಶಾಲೆ ನೆಲಸಮಕ್ಕೆ ತೀರ್ಮಾನ

ಬಸವನ ಬಾಗೇವಾಡಿ ,ಜೂ 18: ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಗಳ ಸರ್ವೆ ಮಾಡಿದ್ದು ಅದ ಪ್ರಕಾರ 129 ಸರಕಾರಿ ಶಾಲೆಗಳು ಡೆಮಾಲಿಸ್, 110 ಮೈನರ್ ರಿಪೇರಿ 105 ಶಾಲೆಗಳು ಮೇಜರ್ ರಿಪೇರಿಗಳಿವೆ ಎಂದು ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತ ರಾಠೋಡ್ ತಿಳಿಸಿದರು
ಕೂಡಲೇ ಅಪಾಯದ ಹಂತದಲ್ಲಿರುವ ಶಾಲೆಗಳನ್ನು ಡೆಮಾಲಿಸ್ ಮಾಡಬೇಕೆಂದು ತಾಲೂಕು ಪಂಚಾಯಿತಿಗೆ ಈ ಓ ವೆಂಕಟೇಶ್ ವಂದಾಲ ತಿಳಿಸಿದರು ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಬುಧವಾರ ನಡೆದ ತಾಲೂಕ ಮಟ್ಟದ ಅಧಿಕಾರಿಗಳ ಸಾಮಾನ್ಯ ಸಭೆಯಲ್ಲಿ ಸೂಚನೆ ನೀಡಿದರು ತಾಲೂಕಿನಲ್ಲಿ ಸಂಪೂರ್ಣ ಮಳೆಯಾಗುವವರೆಗೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು ಆರೋಗ್ಯ ಇಲಾಖೆಯ ಈಗಾಗಲೇ ಕೆಮ್ಮ ಜ್ವರ ಬಿಪಿ ಶುಗರ್ ತಪಾಸಣೆ ನಡೆದಿದೆ 12 ಜನರಿಗೆ ಹಾಗೂ ನಿಡುಗುಂದಿ ತಾಲೂಕಿನಲ್ಲಿ ಇಬ್ಬರಿಗೆ ಕ್ಷಯ ರೋಗ ಕಾಯಿಲೆ ಕಂಡು ಬಂದಿದೆ ಎಂದು ಹೇಳಿದರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಾತನಾಡಿ ನಿಡಗುಂದಿ ತಾಲೂಕು ಒಂದು ಬಿಟ್ಟರೆ ಉಳಿದ ಎರಡು ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ ಕಾರಣ ರೈತರಿಗೆ ಈಗ ತೊಗರಿ ಮತ್ತು ಹತ್ತಿಯನ್ನು ಬಿತ್ತುತ್ತಿದ್ದಾರೆ ಮಳೆ ಅವಶ್ಯಕತೆ ಇದೆ ಬೆಳೆ ವಿಮೆ ಎಷ್ಟು ರೈತರಿಗೆ ಬಂದಿದೆ ಎಂದು ಈ ಓ ಕೇಳಿದಾಗ ಬಸವನ ಬಾಗೇವಾಡಿ ತಾಲೂಕಿನಲ್ಲಿ 13216 ಫಲಾನುಭವಿ ರೈತರಿಗೆ 220906272. 8 ರಷ್ಟು ಕೋಲಾರ್ ತಾಲೂಕಿಗೆ 2054 ಫಲಾನುಭವಿ ರೈತರಿಗೆ 44869750. 29 ರಷ್ಟು ನಿಡಗುಂದಿ ತಾಲೂಕಿಗೆ 730 ಫಲಾನುಭವಿ ರೈತರಿಗೆ4412725.8 ರಷ್ಟು ಇನ್ಸೂರೆನ್ಸ್ ಕ್ಲೇಮ್ ಆಗಿದೆ ಎಂದರು ಕೆ ಆರ್ ಡಿ ಎಲ್ ಇಲಕೆಯಿಂದ ನಿರ್ಮಾಣಗೊಳ್ಳುತ್ತಿರುವ ಶಾಲೆಯ ಹಾಗೂ ಅಂಗನವಾಡಿ ಕಾಮಗಾರಿಗಳು ಜೂನ್ ಒಳಗಾಗಿ ಮುಕ್ತಾಯಗೊಳಿಸಿಲ್ಲ ಏಕೆ ಎಂದು ಕೆ ಆರ್ ಐ ಡಿ ಎಲ್ ಅಧಿಕಾರಿಗಳಿಗೆ ಪ್ರಶ್ನಿಸಿದ್ದರು ಇಲಾಖೆಯ ಲಕ್ಷ್ಮಿ ಅವರು ಶೀಘ್ರದಲ್ಲಿ ಮುಕ್ತಾಯಗೊಳಿಸುವುದಾಗಿ ತಿಳಿಸಿದರು ಎಸ್ಸಿ ಎಸ್ಟಿ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆ ಕಾಮಗಾರಿಯ ಲಿಸ್ಟ್ ತೆಗೆದುಕೊಂಡು ಕಾಮಗಾರಿ ಆಗಿದೆ ಇಲ್ಲವೋ ನೋಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುಳಾ ಹಿರೇಮನಿ ಅವರಿಗೆ ಈ ಓ ಸೂಚಿಸಿದರು ಹೆಬ್ಬಾಳ ತೆಲಿಗಿ ನಿಡುಗುಂದಿ ಬಾಗೇವಾಡಿ 1.20 ಕೋಟಿ ಹಣ ಹಾಸ್ಟೆಲ್ ಅಭಿವೃದ್ಧಿಗೆ ಬಂದಿದೆ ಎಂದು ಸಭೆಯ ಗಮನಕ್ಕೆ ಸಮಾಜ ಕಲ್ಯಾಣ ಅಧಿಕಾರಿ ಮಕ್ಬುಲ್ಲ ದಪ್ಪೇದಾರ್ ತಿಳಿಸಿದರು ಹಾಸ್ಟೆಲಿನಲ್ಲಿರುವ ವಿದ್ಯಾರ್ಥಿನಿಯರನ್ನು ಅಧಿಕಾರಿಗಳನ್ನು ನಂಬಿಕೊಂಡು ಪಾಲಕರು ತಮ್ಮ ಮಕ್ಕಳನ್ನು ಹಾಸ್ಟೆಲ್ ನಲ್ಲಿ ಬಿಟ್ಟಿರುವವರು ಕಾರಣ ಅಧಿಕಾರಿಗಳು ಎರಡು ತಿಂಗಳು ಒಮ್ಮೆ ಆರೋಗ್ಯ ತಪಾಸನೆ ಮಾಡಿಸಬೇಕು ಜೊತೆಗೆ ಪಾಲಕರ ಹೊರತಾಗಿ ವಿದ್ಯಾರ್ಥಿನಿಯರನ್ನು ಬೇರೆಯವರು ಯಾರ ಜೊತೆ ಹೊರಗಡೆ ಕಳಿಸಬಾರದು ಎಂದು ಬಿಸಿಎಂ ಮತ್ತು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಕಟ್ಟುವ ನಿಟ್ಟಿನ ಎಚ್ಚರಿಕೆಯನ್ನು ತಾಲೂಕ ಪಂಚಾಯತಿ ಅಧಿಕಾರಿ ಸೂಚಿಸಿದರು ಕೋಲಾರ ತಾಲೂಕ ಪಂಚಾಯಿತಿ ಅಧಿಕಾರಿ ಸುನಿಲ್ ಮದ್ದಿನ್ ಸೇರಿದಂತೆ ಅಖಂಡ ತಾಲೂಕಿನ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು