Home ಜಿಲ್ಲೆ ಕಲಬುರಗಿ ಡ್ಯಾನ್ಸ್ ಒಲಿಂಪಿಯಾಡ್: ಕಲಬುರಗಿ ವಿದ್ಯಾರ್ಥಿನಿಯರ ಸಾಧನೆ

ಡ್ಯಾನ್ಸ್ ಒಲಿಂಪಿಯಾಡ್: ಕಲಬುರಗಿ ವಿದ್ಯಾರ್ಥಿನಿಯರ ಸಾಧನೆ

ಕಲಬುರಗಿ,ಜು.15: ತಿರುಪತಿಯಲ್ಲಿ ನಡೆದ ಅಖಿಲ ಭಾರತ ಡ್ಯಾನ್ಸ್ ಒಲಿಂಪಿಯಾಡ್-2026ರಲ್ಲಿ ಕಲಬುರಗಿಯ ನೂಪುರ ಸಂಸ್ಕøತಿ ನೃತ್ಯ ಮತ್ತು ಸಂಗೀತ ಸಂಸ್ಥೆಯ ವಿದ್ಯಾರ್ಥಿನಿಯರಾದ ಪ್ರಾಜಕ್ತಾ, ವಿದ್ಯಾ, ಸಾಧನಾ ಆಧ್ಯಾ, ಗ್ಯಾನವಿ, ಅದಿತಿ, ಸನ್ನಿಧಿ, ಸುಮನ, ಆದ್ಯಾ, ಶೃತಿ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಬಹುಮಾನಗಳನ್ನು ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಂತಹ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಕಲಬುರಗಿಯ ವಿದ್ಯಾರ್ಥಿನಿಯರು ಬಹುಮಾನ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ಅದೇ ಸಂದರ್ಭದಲ್ಲಿ ಸಂಸ್ಥೆಯ ನೃತ್ಯ ಶಿಕ್ಷಕಿ ಹಾಗೂ ಅಧ್ಯಕ್ಷರಾದ ವಿದುಷಿ ಸೌಖ್ಯ ಪ್ರವೀಣ್ ಅವರು “ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿರುವುದು ಸಂಸ್ಥೆಗೆ ಮತ್ತೊಂದು ಹೆಮ್ಮೆಯ ವಿಷಯವಾಗಿದೆ.
ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಪಾಲಕರು ಹಾಗೂ ಕಲಾಭಿಮಾನಿಗಳು ಪ್ರಶಸ್ತಿ ವಿಜೇತ ವಿದ್ಯಾರ್ಥಿನಿಯರಿಗೆ ಮತ್ತು ವಿದುಷಿ ಸೌಖ್ಯ ಪ್ರವೀಣ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವಂತೆ ಶುಭ ಹಾರೈಸಿದ್ದಾರೆ.