
ಚಿಕ್ಕಬಳ್ಳಾಪುರ.ಜೂ.೨೬:ಶೋಷಿತ ಸಮುದಾಯಗಳ ಮೇಲೆ ಸರ್ಕಾರದ ನಿರುತ್ಸಾಹ ಧೋರಣೆ ಖಂಡಿಸಿಕದಸಂಸ(ಅಂಬೇಡ್ಕರ್ ವಾದ)ವು ಜು.೩ರಂದು ದಲಿತರ ಸಮಗ್ರ ಸಬಲೀಕರಣಕ್ಕೆ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ದಲಿತ ಜನಾಗ್ರಹ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳೀಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರದ ನಿಷ್ಕಾಳಜಿಯನ್ನು ವಿರೋಧಿಸಲು ದಲಿತರು, ಬಡವರು, ಬುದ್ದಿಜೀವಿಗಳು ಸಮರೋಪದಿಯಲ್ಲಿ ಜನಾಗ್ರಹ ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಇನ್ನು ದಲಿತರ ಆರ್ಥಿಕ-ಸಾಮಾಜಿಕ ಸಬಲೀಕರಣಕ್ಕೆ ಸರ್ಕಾರ ವಿಶೇಷ ಘಟಕ ಯೋಜನೆ (ಎಸ್.ಸಿ.ಎಸ್.ಪಿ.) (ಟಿ.ಎಸ್.ಪಿ)ಯನ್ನು ಕಾಯ್ದೆ ಮೂಲಕ ೨೦೧೩ ರಂದು ಜಾರಿಗೆ ತಂದು ಸುಮಾರು ೩ ಲಕ್ಷಕ್ಕೂ ಮೇಲ್ಪಟ್ಟು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಸರ್ಕಾರ ಒದಗಿಸಿದೆ.
ಆದರೆ ಈ ಅನುದಾನದಿಂದ ಎಷ್ಟು ಪರಿಶಿಷ್ಟ ಕುಟುಂಬಗಳ ಫಲಾನುಭವಿಗಳು ಬಡತನ ರೇಖೆಯಿಂದ ಹೊರಬಂದಿವೆ ಎಂಬುದರ ಬಗ್ಗೆ ಅಧಿಕೃತ ಅಂಕಿ ಅಂಶಗಳಿಲ್ಲ.ಈ ವಿಶೇಷ ಘಟಕ ಯೋಜನೆ ಹಣವನ್ನು ಗ್ಯಾರಂಟಿಗಳ ಮೂಲಕ ಹಂಚಿದ್ದೇವೆ ಎಂದು ಸಬೂಬು ನೀಡುತ್ತಿರುವುದು ಕಾಯ್ದೆಯ ನೇರ ಉಲ್ಲಂಘನೆಯಾಗಿದೆ.ಜೊತೆಗೆ ಭೂಮಿ, ವಸತಿ, ಸರ್ಕಾರಿ ಉದ್ಯೋಗ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ಕಡ್ಡಾಯ ಶಿಕ್ಷಣ ಮುಂತಾದವು ನೆನೆಗುದಿಗೆ ಬಿದ್ದಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಸದಸ್ಯ ಸುಧಾ ವೆಂಕಟೇಶ್, ದಲಿತ ಕಲಾಮಂಡಳಿಯ ಗಾ ನಾ ಅಶ್ವಥ್, ಜಿಲ್ಲಾ ಸಂಘಟನಾ ಸಂಚಾಲಕ ಶ್ರೀನಿವಾಸ್, ಡೇವಿಡ್, ವೆಂಕಟರಾಮ್ ಮತ್ತಿತರರು ಹಾಜರಿದ್ದರು.























