
ಲಕ್ಷೆ÷್ಮÃಶ್ವರ,ಜು ೧೫: ತಾಲೂಕಿನ ರೈತರಿಗೆ ಸನ್ ೨೦೨೬ ೨೭ ನೇ ಸಾಲಿನ ಫಸಲ್ ಭೀಮಾ ಯೋಜನೆ ಅಡಿ ಬೆಳೆ ವಿಮೆ ಮಾಡಿಸಲು ಕಟಬಾಕಿ ರೈತರಿಗೆ ಬ್ಯಾಂಕುಗಳು ನಿರಾಕರಿಸುತ್ತಿದ್ದು ಇದರಿಂದಾಗಿ ರೈತರು ಬೆಳೆವಿಮೆ ಬೆಳೆ ಹಾನಿ ಮಧ್ಯಂತರ ಪರಿಹಾರ ಮತ್ತಿತರ ಸೌಲಭ್ಯ ಪಡೆಯಲು ವಂಚಿತರಾಗುತ್ತಿದ್ದು ಕೂಡಲೇ ಕಟಬಾ?ಕಿ ರೈತರಿಗೂ ಬೆಳೆ ವಿಮೆ ಮಾಡಿಸಲು ಬ್ಯಾಂಕುಗಳು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ರವರ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಲ್ಲಿಸಿದರು.
ಮನವಿ ಪತ್ರದಲ್ಲಿ ಈ ವರ್ಷವೂ ಸಹ ಬರಗಾಲದ ಸನ್ನಿವೇಶ ಎದುರಾಗಿದ್ದು ರೈತರು ಉತ್ತಿಬಿತ್ತಿ ಬೆಳೆದ ಬೆಳೆ ಒಣಗುವ ಭೀತಿಯಲ್ಲಿದೆ. ಇಂತಹ ಕಷ್ಟಕರ ಸನ್ನಿವೇಶದಲ್ಲಿ ಬ್ಯಾಂಕುಗಳು ರೈತರ ಜೀವ ಹಿಂಡುತ್ತಿರುವುದು ಅತ್ಯಂತ ಖಂಡನೀಯ ಲೀಡ್ ಬ್ಯಾಂಕು ಮತ್ತು ರಾಜ್ಯ ಸರ್ಕಾರ ಈ ಕೂಡಲೇ ರಾಜ್ಯದ ಎಲ್ಲಾ ಬ್ಯಾಂಕುಗಳಿಗೂ ಕಟ್ಟಬಾಕಿ ರೈತರ ಬೆಳೆ ವಿಮೆ ಮಾಡಿಸಲು ಅರ್ಜಿ ನೀಡಬೇಕು ಎಂದು ಗದಗ ಜಿಲ್ಲಾ ಕರ್ವೆ ನಾರಾಯಣಗೌಡಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಹೊಗೆಸೊಪ್ಪಿನ ತಾಲೂಕ ಘಟಕದ ಅಧ್ಯಕ್ಷ ಲೋಕೇಶ ಸುತಾರ ಅವರ ನೇತೃತ್ವದಲ್ಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಂಕರ್ ಗೌಡ ಪಾಟೀಲ್ ಪ್ರವೀಣ್ ಗಾಣಿಗೇರ ಚನ್ನಬಸಯ್ಯ ಗಡ್ಡ ದೇವರ ಮಠ ಬಸವರಾಜ್ ಮಲ್ಲೂರ ಗಂಗಾಧರ ಕುಂಚಿಗೇರಿ ಮಠ ಗಂಗಾಧರ ಕರಜ ಕ್ಕಣ್ಣವರ ಸಾವಿತ್ರ ಅತ್ತಿಗೇರಿ ಸೇರಿದಂತೆಅನೇಕರಿದ್ದರು.































