Home ಜಿಲ್ಲೆ ಕ್ರಿಕೆಟ್ ಟೂರ್ನಾಮೆಂಟ್

ಕ್ರಿಕೆಟ್ ಟೂರ್ನಾಮೆಂಟ್


ನವಲಗುಂದ,ಮೇ.೧೭
: ತಾಲೂಕಿನ ಶಲವಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಯುವಕರಿಗಾಗಿ ಪ್ರಧಾನಿ ನರೇಂದ್ರ ಮೋದಿ ರವರ ನಾಮಾಂಕಿತ ನಮೋ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಆಯೋಜಕರಾದ ಬಿಜೆಪಿ ಮುಖಂಡರಾದ ದೇವರಾಜ್ ಬ. ಧಾಡಿಬಾವಿ ಭಾಗವಹಿಸಿ ಮಾತನಾಡಿ, ಹಳ್ಳಿಗಳು ಹಾಗೂ ಸಣ್ಣ ಪಟ್ಟಣಗಳ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಗ್ರಾಮೀಣ ಪ್ರತಿಭೆಗಳ ಪ್ರೋತ್ಸಾಹಿಸುವುದು. ಯುವಜನರಲ್ಲಿ ಕ್ರೀಡಾ ಆಸಕ್ತಿ ಹೆಚ್ಚಿಸುವುದು ಮತ್ತು ಫಿಟ್‌ನೆಸ್ ಕಾಪಾಡಿಕೊಳ್ಳಲು ಪ್ರೇರೇಪಿಸುವುದಾಗಿದೆ. ಯುವಕರು ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ವಿನಂತಿಸಿದರು.


ಮುಖAಡರಾದ ಸಿದ್ದನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರಲ್ಲಿ ನಾಯಕತ್ವ ಗುಣ, ದೈಹಿಕ ಹಾಗೂ ಮಾನಸಿಕ ಸದೃಢತೆ ಬೆಳೆಸಲು ಕ್ರೀಡೆ ಅತ್ಯಂತ ಅವಶ್ಯಕವಾಗಿದೆ. ಈ ವೇದಿಕೆಯು ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಉತ್ತಮ ಅವಕಾಶವಾಗಿದೆ, ಎಲ್ಲರೂ ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳಬೇಕೆಂದುರು.
ಈ ಸಂದರ್ಭದಲ್ಲಿ ಬಿ.ಎಫ್. ರೋಣದ, ಶ್ರೀಶೈಲಪ್ಪ ಹುಯಿಲಗೋಳ, ಮಲ್ಲಿಕಾರ್ಜುನ ಹಳ್ಳಿ, ಶ್ರೀಶೈಲ ಬಸವರಡ್ಡಿ, ಉಮೇಶ ಶಿರೋಳ, ರುದ್ರಗೌಡ ಎಮ್ಮಿ, ವಿ.ಬಿ.ಸಾಮ್ರಾಣಿ, ಬಸವರಾಜ ಗುಳೇದ, ಶರಣಪ್ಪ ಪರವಣ್ಣವರ, ರವಿಕುಮಾರ ಸವದತ್ತಿ, ಮಹೇಶ ತೋಟರ, ಶಂಭು ನಡುವಿನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.