Home ಜಿಲ್ಲೆ ಡೆಂಗಿ ಕಾಯಿಲೆ ನಿಯಂತ್ರಣ ನಿಮ್ಮ ಕೈಯಲ್ಲಿದೆ

ಡೆಂಗಿ ಕಾಯಿಲೆ ನಿಯಂತ್ರಣ ನಿಮ್ಮ ಕೈಯಲ್ಲಿದೆ

ಗದಗ,ಜು೧೧: ಡೆಂಗಿ ಕಾಯಿಲೆಯು ಇಡಿಸ್ ಎಂಬ ಸೊಳ್ಳೆಯಿಂದ ಹರಡುತ್ತಿದ್ದು ನಿಮ್ಮ ಮನೆ ಹಾಗೂ ಪರಿಸರಸುತ್ತ ತೆರೆದ ನೀರಿನಲ್ಲಿ ಬೆಳೆಯುವ ಈ ಸೊಳ್ಳೆ ಒಬ್ಬರಿಂದ ಒಬ್ಬರಿಗೆ ಕಚ್ಚುವ ಮೂಲಕ ಮಾರಣಾಂತಿಕ ಡಂಗಿ ಜ್ವರವನ್ನು ಹರಡಲು ಕಾರಣವಾಗುತ್ತದೆ ಆದ್ದರಿಂದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಮತ್ತು ಮನೆಯಲ್ಲಿಯೇ ನೀರಿನ ಸಂಗ್ರಹಗಳಿಗೆ ಸರಿಯಾದ ಮುಚ್ಚಳ ಅಥವಾ ಬಟ್ಟೆಯಿಂದ ಸಂರಕ್ಷಿಸಬೇಕು. ಡೆಂಗಿ ಕಾಯಿಲೆ ನಿಯಂತ್ರಣ ನಿಮ್ಮ ಕೈಯಲ್ಲಿಯೇ ಇದೆ ಎಂದು ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ. ಪ್ರೀತ್ ಖೋನಾ ಅವರು ಹೇಳಿದರು.

ಇಲ್ಲಿಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಗದಗ್ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ನಗರ ಆರೋಗ್ಯ ಕೇಂದ್ರ ಗದಗ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಜರುಗಿದ ಡೆಂಗಿ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮೇಲಿನಂತೆ ಮಾತನಾಡಿದರು. ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ ರಾಜೇಂದ್ರ ಎಸ್ ಗಡಾದ ಅವರು ಡೆಂಗಿ ರೋಗಿಗೆ ಕಾರಣವಾದ ಇಡಿಸ್ ಸೊಳ್ಳೆ ಉತ್ಪತ್ತಿಯಾಗುವ ತಾಣಗಳು ಕುರಿತು ವಿವರಿಸುತ್ತಾ ಇದ್ದಕ್ಕಿದ್ದಂತೆ ತೀವ್ರ ಜ್ವರ ಮೈ ಕೈ ನೋವು ಮತ್ತು ಕೀಲೂ ನೋವು ತೀವ್ರತರವಾದ ತಲೆನೋವು ಹೆಚ್ಚಾಗಿ ಕಣ್ಣಿನ ಹಿಂಭಾಗದ ನೋವು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ ಗುರುತುಗಳು ತೀವ್ರ ಸ್ಥಿತಿಯಲ್ಲಿ ಬಾಯಿ ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಮತ್ತು ವಾಂತಿ ಇವು ಯೋಗದ ಲಕ್ಷಣಗಳಾಗಿದ್ದು ಇಂತಹ ರೋಗ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರ್ಕಾರ ಆಸ್ಪತ್ರೆಯನ್ನು ತಕ್ಷಣ ಸಂಪರ್ಕಿಸಿ ಉಚಿತ ಚಿಕಿತ್ಸೆ ಪಡೆಯಲು ಮುಂದಾಗಬೇಕೆAದರು. ಮುಂದುವರೆದು ಮಾತನಾಡಿದ ಅವರು ನೀರಿನ ತೊಟ್ಟಿಗಳು ಡ್ರಮ್ಮು ಬ್ಯಾರೆಲ್ ಮತ್ತು ಟ್ಯಾಂಕಗಳನ್ನು ಭದ್ರವಾಗಿ ಮುಚ್ಚಿ ಏರ್ ಕೂಲರ್ ಹೂವಿನ ಕುಂಡ ಫೈಯರ್ ಬಕೆಟ್ ಇತ್ಯಾದಿಗಳ ನೀರನ್ನು ಪ್ರತಿ ವಾರ ಕಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡುವ ಮೂಲಕ ಮುಂಜಾಗ್ರತ ಕ್ರಮಗಳನ್ನು ತಪ್ಪದೇ ಅನುಸರಿಸಬೇಕೆಂದರು. ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಮಹೇಶ ಕೊಪ್ಪಲ್ ಅವರು ಮಾತನಾಡಿ ಮನೆಯ ಮೇಲೆ ಮತ್ತು ಸುತ್ತುಮುತ್ತ ಮಳೆಯ ನೀರು ಸಂಗ್ರಹವಾಗುವAತಹ ಪ್ಲಾಸ್ಟಿಕ್ ವಸ್ತುಗಳು ಟೈರ್ ಗಳು ಒಡೆದ ಒಣಗಿದ ತೆಂಗಿನ ಚಿಪುö್ಪ ಇತ್ಯಾದಿಗಳನ್ನು ತಕ್ಷಣ ವಿಲೇವಾರಿ ಮಾಡುವ ಮೂಲಕ ಸೊಳ್ಳೆ ಬೆಳೆಯದಂತೆ ನೋಡಿಕೊಳ್ಳಬೇಕೆಂದರು.

ಮುಖ್ಯ ಅತಿಥಿಗಳಾಗಿ ಶಿಕ್ಷಣ ಪ್ರೇಮಿಗಳಾದ ಶ್ರೀ ಉಮರ್ ಪಾರುಖ ಹುಬ್ಬಳ್ಳಿಯವರು ಪಾಲ್ಗೊಂಡು ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಮಕ್ಕಳು ಮತ್ತು ಪಾಲಕರು ಪಡೆಯಲು ಮುಂದಾಗಬೇಕೆAದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲಲಿತಾ ವನಕಿಹಾಳ ಗುರುಮಾತೆಯರು ವಹಿಸಿಕೊಂಡು ಈ ರೀತಿಯ ಕಾರ್ಯಕ್ರಮ ಶಾಲಾ ಮಕ್ಕಳಿಗೆ ತುಂಬಾ ಅವಶ್ಯ ಎಂದರು. ಆರಂಭದಲ್ಲಿ ಆಶಾ ಕಾರ್ಯಕರ್ತೆ ಶ್ರೀಮತಿ ಹಿರೇಮಠ ಪ್ರಾರ್ಥಿಸಿದರು.

ಊio ಸಹಜಾನಂದ ಸಾಸವೆಹಳ್ಳಿ ಅವರು ಮಾತಾಚರಣೆ ಕಾರ್ಯಕ್ರಮದ ಉದ್ದೇಶ ಹಾಗೂ ಅವಶ್ಯಕತೆಯನ್ನು ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. ಇನ್ನೋರ್ವ ಹೆಚ್ ಐ ಓ ಚೇತನ್ ಕರ್ಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಅಂಬಿಗೇರ್, ಶಿಕ್ಷಕರು ಸೇರಿದಂತೆ ಶಾಲಾ ಮಕ್ಕಳು, ಪಾಲಕರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.