Home ಜಿಲ್ಲೆ ಕಲಬುರಗಿ ಕಿಟಕಿ ಗ್ರೀಲ್ ಕೂಡಿಸುವಾಗ ಬಿದ್ದು ಕಟ್ಟಡ ಕಾರ್ಮಿಕ ಸಾವು

ಕಿಟಕಿ ಗ್ರೀಲ್ ಕೂಡಿಸುವಾಗ ಬಿದ್ದು ಕಟ್ಟಡ ಕಾರ್ಮಿಕ ಸಾವು

ಕಲಬುರಗಿ,ಮೇ.15-ಸ್ಟೂಲ್ ಮೇಲೆ ನಿಂತು ಮನೆಯ ಕಿಟಕಿ ಗ್ರೀಲ್ ಕೂಡಿಸುವಾಗ ಬಿದ್ದು ಕಟ್ಟಡ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಟಿಪ್ಪು ಚೌಕ್ ಹತ್ತಿರವಿರುವ ಅಕ್ಬರ್ ಬಾಗ್ ಕಾಲೋನಿಯಲ್ಲಿ ನಡೆದಿದೆ.
ನಗರದ ಎಂಎಸ್‍ಕೆ ಮಿಲ್ ಜಿಲಾನಾಬದ ಇಕ್ಬಾಲ್ ಕಾಲೋನಿಯ ಮಹ್ಮದ್ ತೌಫಿಕ್ ಅಹ್ಮದ್ ತಂದೆ ದಾದೆ ಪಟೇಲ್ (20) ಮೃತಪಟ್ಟವರು.
ಟಿಪ್ಪು ಚೌಕ್ ಹತ್ತಿರದ ಅಕ್ಬರ್ ಬಾಗ್ ಕಾಲೋನಿಯಲ್ಲಿರುವ ಒಂದು ಹಳೆಯ ಮನೆಯ ಕಟ್ಟಡದ ಕಿಟಕಿಯ ಗ್ರೀಲ್ ಕೂಡಿಸುವ ಕೆಲಸ ಮಾಡುತ್ತಿದ್ದ ವೇಳೆ ಬಿದ್ದು ಮಹ್ಮದ್ ತೌಫಿಕ್ ಅಹ್ಮದ್ ಮೃತಪಟ್ಟಿದ್ದು, ಕೆಲಸ ಮಾಡುವಾಗ ಸರಿಯಾದ ಸುರಕ್ಷತೆ, ಬೆಲ್ಟ್ ಹಾಗೂ ಹೆಲ್ಮೆಟ್ ಒದಗಿಸದೇ ಇರುವ ಗುತ್ತಿಗೆದಾರ ಮಹ್ಮದ್ ಖಾಜಾ ಮೈನೋದ್ದೀನ್ ಹಾಗೂ ಮನೆಯ ಮಾಲೀಕನ ವಿರುದ್ಧ ಕ್ರಮ ಜರುಗಿಸಬೇಕು ಎಂದು ದಾದೆ ಪಟೇಲ್ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.