
ಕೆ.ಆರ್.ಪುರ, ಜೂ.೧೩- ಕ್ಷೇತ್ರದ ಚೇಳಕೆರೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಗ್ಯಾರಂಟಿಗಳ ಮಹಾಮೇಳ ಕಾರ್ಯಕ್ರಮವನ್ನು ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್ ಅವರು ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಅವರು ಬೆಲೆ ಏರಿಕೆಯ ಪರಿಹಾರವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು,ಗ್ಯಾರಂಟಿ ಯೋಜನೆಯಿಂದ ಬಡವರ ಸಮಗ್ರ ಅಭಿವೃದ್ಧಿ ಯಾಗುತ್ತಿದೆ ಎಂದು ನುಡಿದರು.
ನಾಡಿನ ಜನತೆಯ ಸರ್ವತೋಮುಖ ಬೆಳವಣಿಗೆಗೆ ಗ್ಯಾರಂಟಿ ಯೋಜನೆಗಳು ಪೂರಕವಾಗಿದ್ದು, ಕಾಂಗ್ರೆಸ್ ಪಕ್ಷ ಇರುವವರೆಗೆ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತದೆ ಎಂದು ಹೇಳಿದರು.
ಮೂರು ವರ್ಷಗಳಿಂದ ಸರ್ಮಪಕ ಗ್ಯಾರಂಟಿಗಳ ಅನುಷ್ಠಾನ ವಾಗಿದ್ದು,ಮುಂದುವರೆದ ಭಾಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಮಾಡಲಾಗಿದ್ದು,ಅದರಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯಕ್ರಮಗಳನ್ನು ಸರ್ಕಾರಮಾಡಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಆಯೋಜಕ ಕೇಶವ, ಬಿಎಂ.ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ವೆಂಕಟೇಶ್, ವಾರ್ಡನ ಅಧ್ಯಕ್ಷರಾದ ನಿರೂಪ್ ವೆಂಕಟರಮಣ ರೆಡ್ಡಿ, ಪ್ರಸನ್ನ, ಮುಖಂಡ ಅಗರ ಪ್ರಕಾಶ್, ಹೇಮಾವತಿ ಸುರೇಶ್, ಶೋಭ ವೆಂಕಟ ರಮಣ ರೆಡ್ಡಿ, ಫ್ಲವರ್ ಗಾರ್ಡನ್ ಬಾಬು, ಮೀನಮ್ಮ, ಕಾಂತಮ್ಮ, ರಾಮಾಂಜಿನಮ್ಮ, ಶಿವಯಾದವ್, ಶ್ರೀನಿವಾಸ್, ಸಾಗಯ್, ಮತಿಯಾಸ್, ದೇವರಾಜ್ ಇದ್ದರು.



























