Home ಜಿಲ್ಲೆ ಅಭಿನಂದನಾ ಸಮಾರಂಭ

ಅಭಿನಂದನಾ ಸಮಾರಂಭ

ನವಲಗುAದ, ಜೂ೧ : ತಾಲ್ಲೂಕಿನಲ್ಲಿ ಕುಮಾರಗೋಪ್ಪ ಶಾಲೆ ಸೇರಿ ವಿವಿಧಡೆ ಸುದೀರ್ಘ ಸೇವೆ ಸಲ್ಲಿಸಿ ಮೌಲ್ಯಯುತ ಶಿಕ್ಷಣ ನೀಡುತ್ತಾ ಶಿಕ್ಷಣ ರಂಗದಲ್ಲಿ ಹಲವಾರು ಚೇತನಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಶಿಕ್ಷಕ ಶಿವಪ್ಪ ಅರೇರ ಅವರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಅಜಾತ ನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ ನುಡಿದರು.

ಅವರು ಸ್ಥಳೀಯ ಮೇಟಿ ಭವನದಲ್ಲಿ ತಾಲ್ಲೂಕಿನ ಕುಮಾರಗೊಪ್ಪ ಸರ್ಕಾರಿ ಶಾಲೆ ಶಿಕ್ಷಕ ಶಿವಪ್ಪ ಅರೇರ ಅವರ ಸೇವಾನಿವೃತ್ತಿ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ಶಿಕ್ಷಕ ಶಿವಪ್ಪ ಅರೇರ ಸನ್ಮಾನ ಸ್ವೀಕರಿಸಿ ಮಾತನಾಡಿ ಮಕ್ಕಳೊಂದಿಗೆ ಕಳೆದ ದಿನಗಳು, ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದಿ ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು. ಇದೆ ವೇಳೆ ದಂಪತಿಗಳನ್ನು ಸನ್ಮಾನಿಸಲಾಯಿತು.

ಹರೀಶ ಭೂಮ್ಮನಹಳ್ಳಿ, ಶಿವಾನಂದ ಕದಂ, ಜೀವನ ಪವಾರ, ಆರ್.ಬಿ.ಮುರನಾಳ ಮಂಜು ಜಾದವ, ಶಿವಾನಂದ ಬೆಂಚಿಕೇರಿ, ಮಹಾಂತೇಶ ಕುಲಕರ್ಣಿ, ಎಸ್ ಎಫ್ ನೀರಲಗಿ, ಪಿ ಕೆ ಹಿರೇಗೌಡ್ರ, ಹಾಗೂ ಪಡೆಸೂರ ಹಾಗೂ ಕುಮಾರಗೂಪ್ಪ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಪದಾಧಿಕಾರಿಗಳು ಇತರರು ಇದ್ದರು.