Home ಜಿಲ್ಲೆ ಕಲಬುರಗಿ ಭವಿಷ್ಯದ ದೂರದೃಷ್ಟಿ ಚಿಂತನೆಗೆ ಸಮ್ಮೇಳನ ಪ್ರೋತ್ಸಾಹದಾಯಕ

ಭವಿಷ್ಯದ ದೂರದೃಷ್ಟಿ ಚಿಂತನೆಗೆ ಸಮ್ಮೇಳನ ಪ್ರೋತ್ಸಾಹದಾಯಕ

ಕಲಬುರಗಿ:ಜೂ.27: ಯುವ ಜನಾಂಗದ ಶೈಕ್ಷಣಿಕ ಕಲಿಕೆ ಮತ್ತು ಭವಿಷ್ಯದ ದೂರದೃಷ್ಟಿ ಚಿಂತನೆಗೆ ಸಮ್ಮೇಳನ ಪ್ರೋತ್ಸಾಹದಾಯಕವಾಗಿದ್ದು, ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಎರಡು ದಿನಗಳ ಸಮ್ಮೇಳನದ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ದಯಾನಂದ ಅಗಸರ ಪ್ರಶಂಸೆ ವ್ಯಕ್ತಪಡಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಿದ ಸುವರ್ಣ ಮಹೋತ್ಸವ ವμರ್Áಚರಣೆ ಮತ್ತು ‘ಸೂಕ್ಷ್ಮಜೀವಿಗಳ ವ್ಯಾಪ್ತಿ: ಉತ್ತಮ ನಾಳೆಗಾಗಿ ತಂತ್ರಜ್ಞಾನ’ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಹೊಸತನದ ಆಲೋಚನೆ ಮತ್ತು ದೂರದೃಷ್ಟಿ ಮೂಲಕ ನಾವೆಲ್ಲರೂ ವಿಭಾಗದ ಏಳಿಗೆಗೆ ಶ್ರಮಿಸಿ ಮುಂದಿನ 75 ವರ್ಷಗಳ ಸಂಭ್ರಮಾಚರಣೆಗೆ ನಾಂದಿಯಾಡಬೇಕಿದೆ. ಹಳೆಯ ವಿದ್ಯಾರ್ಥಿಗಳ ಸಾಧನೆ ಇಂದಿನ ಯುವಜನತೆಗೆ ಪ್ರೇರಣೆಯಾಗುವಂತಿರಲಿ ಎಂದ ಅವರು ವಿದ್ಯಾರ್ಥಿಗಳ ಸಂಘಕ್ಕೆ ನೇಮಕಗೊಂಡಿರುವ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.
ಬೆಂಗಳೂರು ನಿಮಾನ್ಸ್ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್. ಎ. ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳಿಗೆ ಇಂತಹ ಸಮ್ಮೇಳನ, ಕಾರ್ಯಾಗಾರ, ಸಂಕಿರಣ, ಉಪನ್ಯಾಸಗಳಿಂದ ಅತ್ಯಂತ ಮಹತ್ವದ ವಿಷಯಗಳ ಇತ್ತೀಚಿನ ಬೆಳವಣಿಗೆ ಚರ್ಚಿಸಲು ವೇದಿಕೆಗಳಾಗುತ್ತವೆ. ಗ್ರಹಿಕೆ, ಕಲಿಕೆ. ಚಿಂತನ-ಮಂಥನದ ಮೂಲಕ ಅತ್ಯುತಮ ಅನುಭವಗಳು ಸಿಗುತ್ತವೆ. ಜ್ಞಾನ ಗಳಿಕೆಗೆ ಯಾವುದೇ ಮಿತಿಯಿಲ್ಲ. ಜ್ಞಾನದ ಮೂಲಕ ವ್ಯಕ್ತಿತ್ವ, ಕುಶಲತೆ, ಕೌಶಲ್ಯ ಅನುಭವದಿಂದ ಜಾಗತಿಕ ಮಟ್ಟದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಸಮ್ಮೇಳನದಲ್ಲಿ ಮಂಡಿಸಿದ ವಿಚಾರಗಳು ನಿಮ್ಮ ಗುರಿ ಸಾಧನೆಗೆ ಚೈತನ್ಯದಾಯಕವಾಗಿವೆ ಎಂದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ. ಕೆ. ಲಿಂಗಪ್ಪ ಮಾತನಾಡಿ ಸುವರ್ಣ ಮಹೋತ್ಸವ ಮತ್ತು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವುದೇ ನಮಗೆ ನವಚೈತನ್ಯ ಬಂದಂತಾಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಉದಾರ ಮನದ ಸಹಾಯದಿಂದ ಈ ಸಂಭ್ರಮ ವಿಭಾಗದ ಸಾಧನೆಯ ಮೈಲಿಗಲ್ಲುಗಳು ಹಂಚಿಕೊಳ್ಳುವ ಸೌಭಾಗ್ಯ ನಮಗೆ ದೊರೆತಿದೆ. ವಿಭಾಗದ ವಿದ್ಯಾರ್ಥಿಗಳ ಸಾಧನೆಗೆ ಹಿರಿಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಸ್ಪೂರ್ತಿ ಎಂದು ಬಾವಿಸಿದ್ದೇನೆ. ಮುಂದೆಯೂ ನಿಮ್ಮಲ್ಲರ ಬೆಂಬಲ, ಸಹಾಯ ಮತ್ತು ಸಹಕಾರ ಹೀಗೆಯೇ ಮಮದುವರಿಯಲಿ ಎಂದು ಹೇಳುವ ಮೂಲಕ ಅಭಿನಂದನೆ ಸಲ್ಲಿಸಿದರು.
ನಿವೃತ್ತ ಪ್ರಾಧ್ಯಾಪಕಿ ಪ್ರೊ. ಅನ್ನಪೂರ್ಣ ನಿಂಬರಗಿ ವಿಭಾಗದ ಕಲಿತ ಅನುಭವಗಳನ್ನು ಬಾವನಾತ್ಮಕ ನುಡಿಗಳಲ್ಲಿ ಹಂಚಿಕೊಂಡರು. ಮುಖ್ಯಸ್ಥೆ ಹಾಗೂ ಸಂಯೋಜಕಿ ಪೆÇ್ರ. ಎಂ.ಬಿ. ಸುಲೋಚನಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೆÇ್ರ. ಚಂದ್ರಕಾಂತ ಕೆಳಮನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೂಕ್ಷ್ಮಜೀವಶಾಸ್ತ್ರ ಹಾಗೂ ಜೀವವಿಜ್ಞಾನ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಅತ್ಯುತ್ತಮವಾಗಿ ವಿಷಯ ಮಂಡಿಸಿದ ಸಂಶೋಧಕರಿಗೆ ಬೆಸ್ಟ ಓರಲ್ ಪ್ರಸಂಟೇಷನ್ ಮತ್ತು ಬೆಸ್ಟ್ ಪೋಸ್ಟರ್ ಪ್ರೆಸಂಟೇಷನ್ ಅವಾರ್ಡ್ ಪ್ರಮಾಣಪತ್ರಗಳನ್ನು ನೀಡಲಾಯಿತು. ಕೆಬಿಎನ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ತಸ್ಲಿಮ ಬಾನು ಸಮ್ಮೇಳನ ಕುರಿತು ಅನಿಸಿಕೆ ಹಂಚಿಕೊಂಡರು. ಪ್ರೊ. ಯಶವಂತರಾವ್ ಮೆಂಜಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಸುದರ್ಶನ ಎ. ವಂದಿಸಿದರು. ವಂದಿಸಿದರು.

ಸೂಕ್ಷ್ಮಜೀವಶಾಸ್ತ್ರ ವಿಭಾಗ ಐವತ್ತು ವರ್ಷಗಳ ಪೂರೈಸಿ ಸುವರ್ಣ ಮಹೋತ್ಸವ ಮತ್ತು ರಾಷ್ಟ್ರೀಯ ಸಮ್ಮೇಳನದ ಯಶಸ್ವಿಯಾಗಿ ಜರುಗಿತು. ದೇಶದ ವಿವಿಧ ಭಾಗಗಳಿಂದ ಖ್ಯಾತ ವಿಜ್ಞಾನಿಗಳು ಸಂಶೋಧಕರ ಮೌಖಿಕ ಮತ್ತು ಪೋಸ್ಟರ್ ಪ್ರಬಂಧ ಮಂಡಿಸಿ ವಿದ್ವಾಂಸರ ಮೆಚ್ಚುಗೆ ಪಡೆದರು. ಸೂಕ್ಷ್ಮಜೀವ ವಿಜ್ಞಾನ ಒಳಗೊಂಡ ಬಹುಶಿಸ್ತೀಯ ವಿಷಯಗಳ ವೈಜ್ಞಾನಿಕ ಚಿಂತನೆ, ಅಡ್ವಾನ್ಸ್ಡ ಟೆಕ್ನಾಲಜಿಗಳ ಬಗ್ಗೆ ಮಾಹಿತಿಗಳು ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ಅಳವಡಿಕೆಗೆ ಸಾಕ್ಷಿಯಾಯಿತು. ಸಮ್ಮೇಳನದಲ್ಲಿ ಸುಮಾರು 200 ಪ್ರತಿನಿಧಿಗಳು ಭಾಗವಹಿಸಿದ್ದರು. ದೇಶದ ನಾನಾ ರಾಜ್ಯಗಳಿಂದ 20 ವಿಜ್ಞಾನಿಗಳು ಉಪನ್ಯಾಸ ನೀಡಲು ಆಗಮಿಸಿದ್ದರು. 30 ಸಂಶೋಧನಾ ಲೇಖನಗಳು ಸ್ವೀಕೃತಗೊಂಡಿದ್ದವು.