
ಯಾದಗಿರಿ: ಆ.೬:ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ೨೦೨೬-೨೭ನೇ ಸಾಲಿಗೆ ರಾಜ್ಯದ ೨೦೪ ಬ್ಲಾಕ್ ಸಂಪನ್ಮೂಲ ಕೇಂದ್ರಗಳಲ್ಲಿ ನೇಮಕವಾಗಲಿರುವ ‘ಅಕಾಡೆಮಿಕ್ ರಿಸೋರ್ಸ್ ಪರ್ಸನ್ ಫಾರ್ ಮೆಂಟಲ್ ಹೆಲ್ತ್’ ಹುದ್ದೆಗಳ ಅಧಿಸೂಚನೆಯಲ್ಲಿ ಒSW (ಒeಜiಛಿಚಿಟ & Psಥಿಛಿhiಚಿಣಡಿiಛಿ Soಛಿiಚಿಟ Woಡಿಞ / Psಥಿಛಿhiಚಿಣಡಿiಛಿ Soಛಿiಚಿಟ Woಡಿಞ) ಪದವೀಧರರನ್ನು ಅರ್ಹತಾ ಪಟ್ಟಿಯಿಂದ ಹೊರಗಿಟ್ಟಿರುವುದನ್ನು ಕರ್ನಾಟಕ ರಾಜ್ಯ ಪ್ರೊಫೆಷನಲ್ ಸೋಷಿಯಲ್ ವರ್ಕರ್ ವೆಲ್ಫೇರ್ ಅಸೋಸಿಯೇಷನ್ (ರಿ.) ಖಂಡಿಸಿದೆ.
ಸAಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್ ಹಾಗೂ ಯಾದಗಿರಿ ಜಿಲ್ಲಾಧ್ಯಕ್ಷ ಮೌನೇಶ ಪಾಟೀಲ್ ಬೆಳಗೇರಾ ಜಂಟಿಯಾಗಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಒSW ವೃತ್ತಿಪರರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ (ಆಒಊP), ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಆಸ್ಪತ್ರೆಗಳು, ಪುನರ್ವಸತಿ ಕೇಂದ್ರಗಳು ಹಾಗೂ ಸಮುದಾಯ ಮಾನಸಿಕ ಆರೋಗ್ಯ ಸೇವೆಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಅರ್ಹ ವೃತ್ತಿಪರರನ್ನು ಯಾವುದೇ ಸಮರ್ಪಕ ಕಾರಣವಿಲ್ಲದೆ ಅರ್ಹತಾ ಪಟ್ಟಿಯಿಂದ ಹೊರಗಿಡುವುದು ಅನ್ಯಾಯಕರ ಕ್ರಮ ಎಂದು ತಿಳಿಸಿದ್ದಾರೆ.
ಒeಟಿಣಚಿಟ ಊeಚಿಟಣhಛಿಚಿಡಿe ಂಛಿಣ-೨೦೧೭ರಡಿ Psಥಿಛಿhiಚಿಣಡಿiಛಿ Soಛಿiಚಿಟ Woಡಿಞeಡಿ ಹಾಗೂ ಸಂಬAಧಿತ ಒSW ವೃತ್ತಿಪರರಿಗೆ ಮಾನಸಿಕ ಆರೋಗ್ಯ ವೃತ್ತಿಪರರ ಮಾನ್ಯತೆ ನೀಡಲಾಗಿದೆ. ಆದರೂ, ಪ್ರಸ್ತುತ ನೇಮಕಾತಿಯಲ್ಲಿ ಅವರನ್ನು ಪರಿಗಣಿಸದಿರುವುದು ಕಾಯ್ದೆಯ ಆಶಯ ಹಾಗೂ ಬಹುಶಾಖಾ ಮಾನಸಿಕ ಆರೋಗ್ಯ ಸೇವಾ ವ್ಯವಸ್ಥೆಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಇದೇ ಹುದ್ದೆಗಳ ನೇಮಕಾತಿಗೆ ಸಮಗ್ರ ಶಿಕ್ಷಣ ಇಲಾಖೆಯು ಹೊರಡಿಸಿದ್ದ ಸರ್ಕಾರಿ ಆದೇಶದಲ್ಲಿ ಒSW (ಒeಜiಛಿಚಿಟ & Psಥಿಛಿhiಚಿಣಡಿiಛಿ Soಛಿiಚಿಟ Woಡಿಞ / Psಥಿಛಿhiಚಿಣಡಿiಛಿ Soಛಿiಚಿಟ Woಡಿಞ) ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ, ಪ್ರಸ್ತುತ ಅಧಿಸೂಚನೆಯಲ್ಲಿ ಯಾವುದೇ ಸ್ಪಷ್ಟನೆ ಇಲ್ಲದೆ ಅವರನ್ನು ಕೈಬಿಡಲಾಗಿದೆ. ಇದರಿಂದ ಸಾವಿರಾರು ಅರ್ಹ ಅಭ್ಯರ್ಥಿಗಳ ಉದ್ಯೋಗಾವಕಾಶಕ್ಕೆ ಧಕ್ಕೆಯಾಗಿದ್ದು, ಸಮಾಜಕಾರ್ಯ ಶಿಕ್ಷಣಕ್ಕೂ ಅನ್ಯಾಯವಾಗಿದೆ ಎಂದು ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಅಧಿಸೂಚನೆಯನ್ನು ಮರುಪರಿಶೀಲಿಸಿ, ತಿದ್ದುಪಡಿ (ಅoಡಿಡಿigeಟಿಜum) ಹೊರಡಿಸುವ ಮೂಲಕ ಒSW ಪದವೀಧರರನ್ನು ಅರ್ಹತಾ ಪಟ್ಟಿಗೆ ಮರುಸೇರಿಸಬೇಕು ಎಂದು ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಿದರೆ ರಾಜ್ಯದ ಒSW ವೃತ್ತಿಪರರ ಹಿತಾಸಕ್ತಿ ರಕ್ಷಣೆಗಾಗಿ ಪ್ರಜಾಪ್ರಭುತ್ವ ಹಾಗೂ ಕಾನೂನುಬದ್ಧ ಹೋರಾಟ ನಡೆಸುವುದರ ಜೊತೆಗೆ ಅಗತ್ಯವಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಸಂತೋಷ್ ಕುಮಾರ್ ಹಾಗೂ ಮೌನೇಶ ಪಾಟೀಲ್ ಬೆಳಗೇರಾ ತಿಳಿಸಿದ್ದಾರೆ.





























