Home ಜಿಲ್ಲೆ ಗಣಕೀಕರಣ ಕಾರ್ಯ ಪೂರ್ಣ ಸನ್ಮಾನ

ಗಣಕೀಕರಣ ಕಾರ್ಯ ಪೂರ್ಣ ಸನ್ಮಾನ

ನವಲಗುಂದ,ಜು.೧೪: ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ ೩೦ ನೇದರ ಅಂಗನವಾಡಿ ಕಾರ್ಯಕರ್ತೆ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಯಾದ ಅಕ್ಕಮಹಾದೇವಿ ಹಣಮಂತಪ್ಪ ಬಳಗಾನೂರ ಅವರನ್ನು ಜಿಲ್ಲಾಡಳಿತದ ಪರವಾಗಿ ನವಲಗುಂದ ತಹಶೀಲ್ದಾರ ಕಚೇರಿಯಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಮತದಾರರ ನೊಂದಣಾಧಿಕಾರಿ ಗೀತಾ ಹೊನಕೇರಿಯವರು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು.


ತಹಶೀಲ್ದಾರ ಸುಧೀರ್ ಸಾಹುಕಾರ್, ಶಿರೇಸ್ತದಾರ ಗಣೇಶ ಚಳ್ಳಕೆರೆ ಇದ್ದರು.