Home ಜಿಲ್ಲೆ ಕಲಬುರಗಿ 8.28 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

8.28 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಜೂ.26-ಹಾಡು ಹಗಲೇ ಮನೆಯ ಮುಖ್ಯ ಬಾಗಿಲಿನ ಕೊಂಡಿ ಮುರಿದು 8,28,500 ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಗೋದುತಾಯಿ ನಗರದಲ್ಲಿ ನಡೆದಿದೆ.
ಲತಾ ನಾಗೇಶ ಯಾದಗೀರ ಎಂಬುವವರ ಮನೆಯ ಮುಖ್ಯ ಬಾಗಿಲಿನ ಕೊಂಡಿ ಮುರಿದು ಕಳ್ಳರು 2 ಲಕ್ಷ ರೂ.ಮೌಲ್ಯದ 50 ಗ್ರಾಂ.ಬಂಗಾಳದ ಮಂಗಳಸೂತ್ರ, 2 ಲಕ್ಷ ರೂ.ಮೌಲ್ಯದ ಬಂಗಾರದ ಬಳೆ, 50 ಸಾವಿರ ರೂ.ಮೌಲ್ಯದ 14 ಗ್ರಾಂ.ಬಂಗಾರದ ನೆಕ್ಲೆಸ್, 50 ಸಾವಿರ ರೂ.ಮೌಲ್ಯದ ಬಂಗಾರದಲ್ಲಿ ಮುತ್ತುಗಳ ಜೋಡಣೆ ಇರುವ ನೆಕ್ಲೆಸ್, 1.10 ಲಕ್ಷ ರೂ.ಮೌಲ್ಯದ ಬಂಗಾರದ ಚೈನ್ ಮತ್ತು ಡೈಮಂಡ್ ತಾಳಿ, 15 ಸಾವಿರ ರೂ.ಮೌಲ್ಯದ ಬಂಗಾರದ ಒಂಕಿ ಉಂಗುರ, 15 ಸಾವಿರ ರೂ.ಮೌಲ್ಯದ ಬಂಗಾರದ ಡಿಜೈನ್ ಉಂಗುರ, 40 ಸಾವಿರ ರೂ.ಮೌಲ್ಯದ ಬಂಗಾರದ ಕಿವಿಯೋಲೆ, 20 ಸಾವಿರ ರೂ.ಮೌಲ್ಯದ ಬಂಗಾರದ ಒಂದು ಜೊತೆ ಕಿವಿಯೋಲೆ, 4 ಸಾವಿರ ಮೌಲ್ಯದ ಬಂಗಾರದ ಕ್ವಾಯಿನ್, 35 ಸಾವಿರ ರೂ.ಮೌಲ್ಯದ ಬೆಳ್ಳಿ ನೆಕ್ಲೆಸ್, 65 ಸಾವಿರ ರೂ.ಮೌಲ್ಯದ ಬೆಳ್ಳಿಯ ನೆಕ್ಲೆಸ್, 9,500 ರೂ.ನಗದು ಸೇರಿ 8.28 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.