
ಕಲಬುರಗಿ,ಜೂ.1-ಅಪರಿಚಿತ ವ್ಯಕ್ತಿಯೊಬ್ಬ ಮನೆ ಬೀಗ ತೆರೆದು 1.40 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಇಲ್ಲಿನ ಮಹಾದೇವ ನಗರದಲ್ಲಿ ನಡೆದಿದೆ.
ಜಿಲ್ಲಾ ಗೃಹ ರಕ್ಷ ದಳ ಅಧಿಕಾರಿ ಚಂದ್ರಕಾಂತ ಹಾವನೂರ ಅವರ ಮನೆ ಬೀಗ ತೆರೆದು ಕಳ್ಳ ಅಲಮಾರಿಯಲ್ಲಿದ್ದ 1 ಲಕ್ಷ ರೂ.ಮೌಲ್ಯದ ಬಂಗಾರದ ಎರಡು ಸುತ್ತುಂಗುರ ಮತ್ತು 40 ಸಾವಿರ ರೂ.ಭಾಗ್ಯವಂತಿ ದೇವಿಯ ಹುಂಡಿಯ ಹಣ ಕಳವು ಮಾಡಿಕೊಂಡು ಹೋಗಿದ್ದಾನೆ.
ಇವರು ಸ್ವಗ್ರಾಮ ಹಾವನೂರ ಗ್ರಾಮದ ಹಯ್ಯಾಳ್ ಸಿದ್ದೇಶ್ವರ ಜಾತ್ರೆ ನಿಮಿತ್ಯ ಮೊದಲನೇ ಅಂತಸ್ತಿನಲ್ಲಿರುವ ಮನೆಗೆ ಬೀಗ ಹಾಕಿಕೊಂಡು ಗ್ರೌಂಡ್ ಫ್ಲೋರ್‍ನಲ್ಲಿರುವ ಪತ್ರಿಕೆಯ ಕಾರ್ಯಾಲಯದಲ್ಲಿ ಮನೆಯ ಬೀಗ ಇಟ್ಟು ಬೀಗ ಹಾಕದೆ ಕೊಂಡಿ ಹಾಕಿಕೊಂಡು ಹಾವನೂರ ಗ್ರಾಮಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ.
30 ರಿಂದ 35 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಮನೆ ಕಳ್ಳತನ ಮಾಡಿರುವುದು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

























