
ಯಾದಗಿರಿ: ಗುರುಮಠಕಲ್ ತಾಲ್ಲೂಕಿನ ತೊಟ್ಲೂರು ಗ್ರಾಮದಲ್ಲಿರುವ ಮೆಥೋಡಿಸ್ಟ್ ಚರ್ಚ್ಗೆ ಸೇರಿದ ಜಾಗವನ್ನು ನಾಗಪ್ಪ ಕಟ್ಟೆಗಾಗಿ ಒತ್ತುವರಿ ಮಾಡಿಕೊಂಡು, ಕಾಂಪೌAಡ್ ನಿರ್ಮಿಸಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ರೆವ. ಎಸ್. ನಂದಕುಮಾರ್ ಸ್ಪಷ್ಟಪಡಿಸಿದರು.
ಚರ್ಚ್ಗೆ ಸಂಬAಧಿಸಿದ ಜಾಗವನ್ನು ಕಾನೂನುಬದ್ಧವಾಗಿ ಖರೀದಿಸಲಾಗಿದ್ದು, ಅದಕ್ಕೆ ಸಂಬAಧಿಸಿದ ದಾಖಲೆಗಳು ಚರ್ಚ್ ಬಳಿ ಇವೆ. ಜಾಗದ ಮಾಲೀಕತ್ವ ಹಾಗೂ ಹಕ್ಕಿಗೆ ಸಂಬAಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ತೊಟ್ಲೂರಿನಲ್ಲಿ ಮೆಥೋಡಿಸ್ಟ್ ಚರ್ಚ್ ೧೯೭೩ರಿಂದಲೂ ಅಸ್ತಿತ್ವದಲ್ಲಿದೆ. ಚರ್ಚ್ ಜಾಗದ ಮಾಲೀಕತ್ವಕ್ಕೆ ಸಂಬAಧಿಸಿದAತೆ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಿತ್ತು. ೨೦೨೪ರಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿತ್ತು. ಬಳಿಕ ೨೦-೧೧-೨೦೨೪ರಂದು ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ತಡೆಯಾಜ್ಞೆ ತೆರವುಗೊಂಡಿದೆ. ಇದಾದ ಬಳಿಕ ಎದುರುಪಕ್ಷದವರು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ವಿಚಾರಣೆಯಲ್ಲಿದೆ. ಸೆಪ್ಟೆಂಬರ್ ೨೯, ೨೦೨೬ರಂದು ವಿಚಾರಣೆ ನಿಗದಿಯಾಗಿದೆ ಎಂದು ನಂದಕುಮಾರ್ ಹೇಳಿದರು.
ನ್ಯಾಯಾಲಯದ ತೀರ್ಪಿಗೆ ಗೌರವ
ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಯಾವುದೇ ರೀತಿಯ ಸಂಘರ್ಷಕ್ಕೆ ಅವಕಾಶ ನೀಡದೆ, ನ್ಯಾಯಾಲಯದ ಆದೇಶ ಹಾಗೂ ಕಾನೂನು ಪ್ರಕ್ರಿಯೆಯಂತೆ ಮುಂದುವರಿಯಬೇಕು. ಸಂಬAಧಿಸಿದ ದಾಖಲೆಗಳನ್ನು ಪರಿಶೀಲಿಸಿ, ವಾಸ್ತವಾಂಶದ ಆಧಾರದ ಮೇಲೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕ್ರೈಸ್ತ ಸಮುದಾಯ ಶಾಂತಿಪ್ರಿಯವಾಗಿದ್ದು, ಎಲ್ಲ ಸಮುದಾಯಗಳೊಂದಿಗೆ ಸೌಹಾರ್ದಯುತವಾಗಿ ಬದುಕಲು ಬಯಸುತ್ತದೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ಮೆಥೋಡಿಸ್ಟ್ ಚರ್ಚ್, ಚರ್ಚ್ ಸದಸ್ಯರು ಹಾಗೂ ಚರ್ಚ್ ಆಸ್ತಿಗೆ ಅಗತ್ಯ ಪೊಲೀಸ್ ರಕ್ಷಣೆ ನೀಡಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೆವ. ಗೇಸೋ೯ಮ್ ಕ್ರಿಸ್ಟೋಫರ್, ರೆ. ಅರುಣಕುಮಾರ್, ರೆವ. ಸಭಾಪತಿ, ರೆ. ಸುಮಿತ್ರ ಮುಂಡ್ರಿಕೇರಿ, ರೆ. ರಾಜು ಎಂ.ಕೆ., ರೆ. ಸಿಮೆಯೋನ್ ಜಿ.ಕೆ., ರೆ. ಸುಭಾಷ್, ರೆ. ಸುನಿಲ್, ರೆ. ಜೈಕುಮಾರ್ ಬೂನ್, ಪಾಸ್ಟರ್ ಮೋಹನರಾಜ್ ಸೇರಿದಂತೆ ಧರ್ಮಗುರುಗಳು ಹಾಗೂ ಗ್ರಾಮಸ್ಥರಾದ ಲಚಮಪ್ಪ, ಶಿವನಪ್ಪ ಮಂಥನಗೂಡ, ಅಬ್ರಹಮಪ್ಪ ಲಿಂಗೇರಿ, ರವಿ ಕೋಟಗೇರಿ, ರಾಜು ಉಜಾಳಿ, ತಾಯಪ್ಪ ಕೋಟಗೇರಿ ಮತ್ತಿತರರು ಉಪಸ್ಥಿತರಿದ್ದರು.





























