
ಚಿಂಚೋಳಿ :ಜೂ.27:ತಾಲೂಕಿನ ಚಿಮ್ಮಾಇದ್ಲಾಯಿ ಗ್ರಾಮದ ರೈತರು ತಮ್ಮ ಹೊಲದಲ್ಲಿ ಸೋಯ ತೊಗರಿ ಮತ್ತು ಮುಂತಾದ ಬೆಳೆಗಳನ್ನು ತಮ್ಮ ಹೊಲದಲ್ಲಿ ಬಿತ್ತನೆ ಮಾಡಿ 15 ದಿವಸಗಳಾದರೂ ಮಳೆ ಬರದ ಕಾರಣ ಇಂದು ಗ್ರಾಮದ ರೈತರು ಹಾಗೂ ಪರಮ ಪೂಜಾ ವಿಜಯ ಮಾಂತೇಶ್ವರ್ ಸ್ವಾಮೀಜಿಗಳ ಅವರ ನೇತೃತ್ವದಲ್ಲಿ ಗ್ರಾಮದ ಹನುಮಾನ್ ದೇವರ ಬರೆ ಹೋಗಿದ್ದಾರೆ ಇಂದಿನಿಂದ ಏಳು ದಿನದ ಸಪ್ತ ಭಜನೆ ಮಾಡುತ್ತಿದ್ದಾರೆ ಗ್ರಾಮದ ರೈತರು ಹಾಗೂ ಭಜನೆ ಮಂಡಳಿದವರು ಮಳೆಗಾಗಿ ಚಿಮ್ಮಾಇದ್ಲಾಯಿ ಗ್ರಾಮದ ವಿವಿಧ ಭಜನೆ ಮಂಡಳಿಗಳಿಂದ ಭಜನೆಯನ್ನು ಹಮ್ಮಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಚಿಮ್ಮಾಇದ್ಲಾಯಿ ಗ್ರಾಮದ ಮುಖಂಡರಾದ ಶಿವಶರಣಪ್ಪ ಪೆÇಲೀಸ್ ಪಾಟೀಲ್, ಶಿವರಾಜ ದೇಶಮುಖ್, ಮಲ್ಲಿಕಾರ್ಜುನ ಬಳಕೇರಿ, ಶಿವಶರಣಪ್ಪ ಡೆಂಗಿ, ಗುಂಡಪ್ಪ ಅವರಾದಿ, ಲಕ್ಷ್ಮಿಕಾಂತ ಕೋಂಟಿ, ಶಿವರಾಜ್ ಚಟನಳ್ಳಿ, ಮತ್ತು ಅನೇಕ ಚಿಮ್ಮಾಇದ್ಲಾಯಿ ಗ್ರಾಮದ ಭಜನೆ ಮಂಡಲ ಸದಸ್ಯರು ಹಾಗೂ ಗ್ರಾಮದ ರೈತರು ಸಪ್ತ ಭಜನೆಯಲ್ಲಿ ಭಾಗಿಯಾಗಿದ್ದರು




















