
ಜೇವರ್ಗಿ:ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶಕುಮಾರ ಅವರನ್ನು ವಜಾಗೊಳಿಸಿಎಂದು ಆಗ್ರಹಿಸಿ ತಾಲೂಕು ಪ್ರಗತಿಪರ ಸಂಘಟನೆ ಒಕ್ಕೂಟ ವತಿಯಿಂದ ಡಾಕ್ಟರ್ ಅಂಬೇಡ್ಕರ್ ಭವನದಿಂದ ಬೃಹತ್ ಪ್ರತಿಭಟನೆ ಹಾಗೂ ಪಂಜಿನ ಮೆರವಣಿಗೆ ಮುಖಾಂತರ ಬಿಜಾಪುರ್ ಕ್ರಾಸ್ ಬಳಿಯಲ್ಲಿ ಆಯುಕ್ತ ಜ್ಞಾನೇಶ್ವರ್ ಅವರ ಭೂತ ದಾನ ಮಾಡಲಾಯಿತು ನಂತರ ಮಾತನಾಡಿದ ಪ್ರಗತಿಪರ ಸಂಘಟನೆ ಮುಖಂಡರುಗಳಾದ ಮಹೇಶ ರಾಥೋಡ್ ಹಾಗೂ ಇಬ್ರಾಮ್ ಪಟೇಲ್ ಯಳವಾರ ಮಾತನಾಡಿದವರು ರಾಷ್ಟ್ರಪತಿಗಳು ಮದ್ಯಪ್ರವೇಶ ಮಾಡಿ, ಹಲವು ಅಕ್ರಮ ಗಳನ್ನು ನಡೆಸಿರುವ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶಕುಮಾರ ಅವರನ್ನು ವಜಾಗೊಳಿಸಿ. ಎಸ್‌ಐಆರ್ ನಿಲ್ಲಿಸಿ, ತಪ್ಪಾಗಿ ಹೊರಗಿಡಲಾದವರ ಮತದಾನ ಹಕ್ಕುಗಳನ್ನು ಮರುಸ್ಥಾಪಿಸಬೇಕು ಎಂದು ಹೇಳಿದರು . ನಂತರ ಮಾತನಾಡಿದ ಸಿದ್ದರಾಮಕಟ್ಟಿ ಬಾಬು ಬಿ ಪಾಟೀಲ್ ಮಾತನಾಡುತ್ತಾ , ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಎತ್ತಿದ ಸಮಸ್ಯೆಗಳ ಕುರಿತು ಸೆಪ್ಟೆಂಬರ್ ೨೩ ರಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು, ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಆಧೀನದಲ್ಲಿ ಚುನಾವಣಾ ಆಯೋಗ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತವೆ.
ಇವು ಕೇವಲ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಶೀಲನೆ (ಎಸ್‌ಐಆರ್)ಗೆ ಸೀಮಿತವಲ್ಲ. ಭಾರತ ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಮತ್ತು ಸಮಗ್ರತೆಯ ಬಗ್ಗೆಯೂ ಗಂಭೀರ ಆತಂಕಗಳನ್ನು ಎತ್ತುತ್ತವೆ. ಅವು ಮುಖ್ಯ ಚುನಾವಣಾ ಆಯುಕ್ತರ ಕಚೇರಿಯ ವಿರುದ್ಧ ದೋಷಾರೋಪಣೆಯಾಗಿದೆ ಮತ್ತು ಆ ಕಚೇರಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಮೂವರಲ್ಲಿ ಇಬ್ಬರು ಚುನಾವಣಾ ಆಯುಕ್ತರು ಕನಿಷ್ಠ ೧೪ ಸಂದರ್ಭಗಳಲ್ಲಿ ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ ಮತ್ತು ಮರುಸ್ಥಾಪನೆ. ಹಾಗೂ ಎಸ್‌ಐಆರ್ ನಡವಳಿಕೆಗೆ ಸಂಬAಧಿಸಿದ ನಿರ್ಧಾರಗಳಿಗೆ ಆಕ್ಷೇಪಗಳನ್ನು ದಾಖಲಿಸಿದ್ದಾರೆ. ತಮ್ಮ ಒಪ್ಪಿಗೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಗಂಭೀರ ಆತಂಕಗಳನ್ನೂ ವ್ಯಕ್ತಪಡಿಸಿದ್ದಾರೆ. ಈಗ ಬಹಿರಂಗೊAಡಿರುವ ಅಂಶಗಳು ವಿರೋಧ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ಪದೇ ಪದೇ ಎತ್ತಿದ ಆತಂಕಗಳನ್ನು ದೃಢಪಡಿಸುತ್ತವೆ ಮತ್ತು ಎಸ್‌ಐಆರ್ ಹಾಗೂ ಮತದಾರರ ಪಟ್ಟಿ ನಿರ್ವಹಣೆ ಪಾರದರ್ಶಕ ಹಾಗೂ ವಿಕೇಂದ್ರೀಕೃತ ಎಂಬ ಹೇಳಿಕೆಗಳ ಟೊಳ್ಳುತನವನ್ನು ಬಯಲು ಮಾಡುತ್ತವೆ. ಆ ಇಬ್ಬರು ಆಯುಕ್ತರು ಮತದಾರರ ಡೇಟಾಬೇಸನ್ನು ಕ್ರಮೇಣ ಕೇಂದ್ರೀಕರಣ ಮತ್ತು ರಾಜ್ಯ ಹಾಗೂ ಕ್ಷೇತ್ರ ಮಟ್ಟದ ಶಾಸನಬದ್ಧ ಅಧಿಕಾರಿಗಳ ಪ್ರವೇಶದ ಮೇಲಿನ ನಿಭರ್‌ಂಧಗಳನ್ನು ನಿರ್ದಿಷ್ಟವಾಗಿ ಎತ್ತಿ ತೋರಿಸಿದ್ದಾರೆ. ಇದರ ಪರಿಣಾಮಗಳು ಕೇವಲ ಆಡಳಿತಾತ್ಮಕವಲ್ಲ. ಉದಾಹರಣೆಗೆ ಗೋವಾದಲ್ಲಿ, ೯೭ ಮತದಾರರನ್ನು ಅರ್ಹರು ಎಂದು ಗುರುತಿಸಿದ ತಮ್ಮ ನಿರ್ಧಾರಗಳನ್ನು ದಾಖಲಿಸದಂತೆ ತಂತ್ರಾAಶ ನಿಬರ್‌ಂಧಗಳು ಚುನಾವಣಾ ನೋಂದಣಿ ಅಧಿಕಾರಿಗಳನ್ನು ತಡೆದವು ಎಂದು ವರದಿಯಾಗಿದೆ ಯಾವದೇ ಮತದಾರರ ಕುರಿತು ಆಕ್ಷೇಪಗಳಿದ್ದರೆ, ಅದನ್ನು ಸಲ್ಲಿಸಲು ಇರುವ ಅರ್ಜಿ ನಮನ ೭ ೮ ಮೂಲಕ ಕೆಲವು ದೇಶವಿರೋಧಿ ಶಕ್ತಿಗಳು ದೇಶದ ಸಹ ನಾಗರೀಕರ ಬಗ್ಗೆ ತಪ್ಪಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ವ್ಯವಸ್ಥಿತ ಸಂಚಿನ ಭಾಗವಾಗಿರುವಂತೆ ಸ್ಪಷ್ಟವಾಗುತ್ತದೆ.ಎಂದರು ಬಾಬು ಬಿ ಪಾಟೀಲ್ ಮಾತನಾಡುತ್ ಎಸ್ ಐ ಆರ್ ಅನ್ನು ಮೀರಿ ಬಹಳ ದೂರ ಹೋಗುತ್ತದೆ. ಇದು ಭಾರತ ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆ, ಹಾಗೂ ಸಾರ್ವತ್ರಿಕ ವಯಸ್ಕ ಮತದಾನದ ಮೂಲಭೂತ ಪ್ರಜಾಸತ್ತಾತ್ಮಕ ತತ್ವದ ರಕ್ಷಣೆಗೆ ಸಂಬAಧಿಸಿದೆ. ಮತದಾನದ ಹಕ್ಕನ್ನು ಅಪಾರದರ್ಶಕ, ಕೇಂದ್ರೀಕೃತ ನಿಯಂತ್ರಿತ ಪ್ರಕ್ರಿಯೆಗಳ ಮೇಲೆ ಅವಲಂಬಿತಗೊಳಿಸುವ ಯಾವುದೇ ವ್ಯವಸ್ಥೆ ಚುನಾವಣಾ ವ್ಯವಸ್ಥೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುತ್ತದೆ. ಭಾರತ ಚುನಾವಣಾ ಆಯೋಗದೆ ವಿಶ್ವಾಸಾರ್ಹತೆ ಮತ್ತು ಸ್ವಾತಂತ್ರ‍್ಯ ಇಷ್ಟು ಕೆಳಮಟ್ಟಕ್ಕೆ ಎಂದೂ ಇಳಿದಿರಲಿಲ್ಲ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವ್ಯವಸ್ಥೆಯನ್ನು ಕೆಟ್ಟದಾಗಿ ನಿರ್ವಹಿಸಿ ಸಂಸ್ಥೆಯಲ್ಲಿ ಜನರ ವಿಶ್ವಾಸವನ್ನು ಕುಗ್ಗಿಸಿದ್ದಕ್ಕೆ ಹೊಣೆಗಾರರಾಗಬೇಕು ಬೇಡಿಕೆಗಳನ್ನು ಮುಂದಿಡುತ್ತವೆ:ಜ್ಞಾನೇಶ್ ಕುಮಾರ್ ಅವರನ್ನು ಅಧಿಕಾರದಿಂದ ತೆಗೆದು ಹಾಕಬೇಕು.ಎಸ್‌ಐಆರ್ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಮತದಾರರ ಪಟ್ಟಿಯಿಂದ ತಪ್ಪಾಗಿ ಹೊರಗಿಡಲಾದ ಎಲ್ಲರ ಮತದಾನ ಹಕ್ಕುಗಳನ್ನು ಮರುಸ್ಥಾಪಿಸಬೇಕು.
ಭಾರತ ಚುನಾವಣಾ ಆಯೋಗದ ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ಮರುಸ್ಥಾಪಿಸಬೇಕು.ಚುನಾವಣಾ ಆಯುಕ್ತರ ನೇಮಕದ ಪ್ರಸ್ತುತ ವ್ಯವಸ್ಥೆಯನ್ನು ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪ್ರಸ್ತಾವಿತ ಆಯ್ಕೆ ಪ್ರಕ್ರೀಯೆಯಾಗಿ ಬದಲಾಯಿಸಬೇಕು.ಅರ್ಜಿ ನಮೂನೆ ೭ರ ಮೂಲಕ ಆಕ್ಷೇಪಗಳನ್ನು ಸಲ್ಲಿಸಿರುವವರು ಯಾರು? ಮತ್ತು ಅವರು ಆ ರೀತಿ ಆಕ್ಷೇಪಗಳನ್ನು ಸಲ್ಲಿಸಿರುವದರ ಹಿನ್ನಲೆಯ ಕುರಿತು ಸಮಗ್ರ ತನಿಖೆಯಾಗಿ, ಸಹ ನಾಗರೀಕರ ಮತದಾನದ ಹಕ್ಕುಗಳನ್ನು ಹಾಗೂ ಆ ಮೂಲಕ ಅವರ ನಾಗರೀಕ ಹಕ್ಕುಗಳಿಗೆ ಧಕ್ಕೆ ಮಾಡಿರುವದಕ್ಕಾಗಿ ಅವರೆಲ್ಲರ ವಿರುದ್ಧ ಕ್ರಿಮಿನಲ್ ಸಂಚಿನ ಪ್ರಕರಣ ದಾಖಲಿಸಿ ಬಂಧಿಸಬೇಕು.
ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿಯನ್ನು ತಡೆಯಲು, ದೇಶದ ನಾಗರೀಕರ ವಿರುದ್ಧ ನಡೆಸಲಾಗುತ್ತಿರುವ ವ್ಯವಸ್ಥಿತ ಸಂಚನ್ನು ತಡೆಯಲು ಮುಂದಾಗಬೇಕೆAದು ಭೀಮರಾಯ ನಗನೂರು ಹೇಳಿದರು ಶ್ರೀಹರಿ ಕರಕಿಹಳ್ಳಿ ಸಿದ್ದು ಕೆರೂರ ವಿಷ್ಣುಸೇನಾ ಅಧ್ಯಕ್ಷ ಬಸವರಾಜ್ ಬಾಗೇವಾಡಿ ಮುಖಂಡರಾದ ಸಂಚಾಲಕ ಮೋದಿನ್ ಇನಾಮ್ಹಾರ್ ಪರ್ಮಾನಂದ್ ಯಲಗೋಡ ಹಭಿಬ್ ಜಮಾದಾರ್ ಅಬ್ದುಲ್ ಗಣಿ ಪ್ರಭಾಕರ್ ಸಾಗರ್ ವಿಶ್ವರಾಧ್ಯ ಗೋಪಾಲ್ ಕರ್ ರಾಘವೇಂದ್ರ ಬುದ್ಧನಗರ ಇಬ್ರಾಹಿಂ ಪಟೇಲ್ ಮಹಮ್ಮದ ಚೌದರಿ ಸಂಚಾಲಕರು ಸೇರಿದಂತೆ ಅನೇಕರು ಇದ್ದರು























