
ಸೈದಾಪುರ: ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದAತೆ ಶಾಂತಿ ಮತ್ತು ಸೌಹಾರ್ದತೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿ ಎಂದು ಪಿಐ ಶಿವಾನಂದ ಮರಡಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಆ-೨೬ ಬುಧವಾರ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಪಟ್ಟಣದ ರೈಲ್ವೆ ನಿಲ್ದಾಣದಿಂದ ಬಸವೇಶ್ವರ, ಕನಕ, ಬಾಬು ಜಗಜೀವನ್ ರಾಮ್ ವೃತ್ತದ ಮೂಲಕ ಜಾಮೀಯ ಮಸೀದಿವರೆಗೆ ನಡೆಯುವ ಮೆರವಣಿಯಲ್ಲಿ ಇತರೆ ಸಮುದಾಯಕ್ಕೆ, ಧರ್ಮಕ್ಕೆ, ರಾಷ್ಟ್ರೀಯತೆಗೆ ಧಕ್ಕೆಯಾಗುವಂತ ಘೋಷಣೆ, ಆಚರಣೆಗಳನ್ನು ಮಾಡಬಾರದು. ಮಾರಾಕಾಯುಧಗಳ ಪ್ರದರ್ಶನಗಳನ್ನು ನಿಷೇಧಿಸಲಾಗಿದೆ. ಗುಡಿ-ಮಠ ಮಂದಿರಗಳ ಹತ್ತಿರ ಕೋಮುಗಲಭೆ ಪ್ರೇರಿತ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗ್ರತೆ ವಹಿಸಬೇಕು. ಹಬ್ಬದ ಮೆರವಣಿಗೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ನಡೆಸಬೇಕು. ಡಿಜೆ ಸೌಂಡ್ ಸಿಸ್ಟಂ ಬಳಕೆಗೆ ಅವಕಾಶವಿಲ್ಲದೆ, ಸಾಂಪ್ರದಾಯಿಕ ವಾದ್ಯಗಳನ್ನು ಮಾತ್ರ ಬಳಸಬಹುದು. ಬ್ಯಾನರ್ ಮತ್ತು ಕಟೌಟ್‌ಗಳನ್ನು ಅನುಮತಿ ಪಡೆದು ನಿಗದಿತ ಸ್ಥಳಗಳಲ್ಲಿ ಸಂಬAಧಿಸಿದವರಿAದ ಮೊದಲೇ ಅನುಮತಿ ಪಡೆದು ಅಳವಡಿಸಬೇಕು. ಮೆರವಣಿಗೆಯಲ್ಲಿ ಇತರರಿಗೆ ತೊಂದರೆಯುAಟಾಗುವAತ ಅನುಚಿತ ವರ್ತನೆಗಳಿಗೆ ಅವಕಾಶ ಇಲ್ಲದಂತೆ ಶಿಸ್ತು,ಸಂಯಮ, ಹಾಗೂ ಸೌರ್ಹಾದತೆಯನ್ನು ಪಾಲಿಸಬೇಕು. ಒಂದು ವೇಳೆ ಕೋಮು ಗಲಭೆ ಸೃಷ್ಟಿಸಿದರೆ ಅಂತವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಮಾಜದ ಹಿರಿಯ ಮುಖಂಡರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ವೆಂಕಟೇಶ್ ಗಡದ, ಜಾಮಿಯಾ ಮಸೀದಿ ಅಧ್ಯಕ್ಷ ಮೌಲನ್ ಸಾಬ್, ಉಪಾಧ್ಯಕ್ಷ ಅಲ್ಲಾಭಾಷಾ ಹಿಚ್ಗೇರಿ, ಎಂ ಡಿ ಖಾಜಾ ನಿಜಾಮ್, ಸೈದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ರಾಜಕುಮಾರ್, ಸಕ್ರೆಪ್ಪ, ರಾಘವೇಂದ್ರ ಸೇರಿದಂತೆ ಇತರರಿದ್ದರು





























