Home ಕ್ರೈಂ ಸುದ್ದಿಗಳು ಗ್ಯಾಸ್ ಕಟರ್‍ನಿಂದ ಎಟಿಎಂ ಒಡೆದು 19.29 ಲಕ್ಷ ಕಳವು ಪ್ರಕರಣ: ಮಧ್ಯಪ್ರದೇಶದಲ್ಲಿ ಮೂವರು ಆರೋಪಿಗಳ ಬಂಧನ

ಗ್ಯಾಸ್ ಕಟರ್‍ನಿಂದ ಎಟಿಎಂ ಒಡೆದು 19.29 ಲಕ್ಷ ಕಳವು ಪ್ರಕರಣ: ಮಧ್ಯಪ್ರದೇಶದಲ್ಲಿ ಮೂವರು ಆರೋಪಿಗಳ ಬಂಧನ

ವಿಜಯಪುರ, ಸೆ.12:
ಜಿಲ್ಲೆಯ ಕೂಡಗಿ ಪೆÇಲೀಸ್ ಠಾಣೆ ವ್ಯಾಪ್ತಿಯ ಗೊಳಸಂಗಿ ಗ್ರಾಮದ ಸಮೀಪ ಕೆನರಾ ಬ್ಯಾಂಕ್ ಎಟಿಎಂಗೆ ಗ್ಯಾಸ್ ಕಟರ್ ಬಳಸಿ ನುಗ್ಗಿ ?19.29 ಲಕ್ಷ ಕಳವು ಮಾಡಿದ್ದ ಪ್ರಕರಣವನ್ನು ವಿಜಯಪುರ ಪೆÇಲೀಸರು ಭೇದಿಸಿದ್ದು, ಹರಿಯಾಣ ಮತ್ತು ಉತ್ತರ ಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಣೆ ನೀಡಿ ಮಾತನಾಡಿದ ಅವರು,
ಸೆ.2ರಂದು ರಾತ್ರಿ ಸುಮಾರು 2.30ರ ವೇಳೆಗೆ ವಿಜಯಪುರ-ಆಲಮಟ್ಟಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗೊಳಸಂಗಿ ಗ್ರಾಮದ ಕೆನರಾ ಬ್ಯಾಂಕ್ ಎಟಿಎಂನ ಶೆಟರ್‍ಗೆ ಹಾಕಿದ್ದ ಬೀಗವನ್ನು ಗ್ಯಾಸ್ ಕಟರ್‍ನಿಂದ ಕತ್ತರಿಸಿದ ಕಳ್ಳರು, ಒಳನುಗ್ಗಿ ಎಟಿಎಂ ಯಂತ್ರದ ಸೇಫ್ ಡೋರ್ ಕೂಡ ಕತ್ತರಿಸಿದ್ದರು. ಬಳಿಕ ಯಂತ್ರದಲ್ಲಿದ್ದ ?19.29 ಲಕ್ಷ ಹಣವನ್ನು ಕ್ಯಾಸೆಟ್ ಸಮೇತ ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಗೊಳಸಂಗಿ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಶರಣಪ್ಪ ಸಾಬು ಹೊನವಾಡ ಅವರು ಕೂಡಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಹೇಳಿದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಡಿಎಸ್‍ಪಿ ಚಂದ್ರಕಾಂತ ನಂದರೆಡ್ಡಿ, ನಿಡಗುಂದಿ ಸಿಪಿಐ ಶರಣಗೌಡ ಬಿ.ಗೌಡರ್ ಸೇರಿದಂತೆ ವಿವಿಧ ಠಾಣೆಗಳ ಪಿಎಸ್‍ಐಗಳು ಹಾಗೂ ಸಿಬ್ಬಂದಿ ತಂಡಗಳು ಘಟನಾ ಸ್ಥಳ, ರಾಷ್ಟ್ರೀಯ ಹೆದ್ದಾರಿ ಹಾಗೂ ವಿವಿಧ ಮಾರ್ಗಗಳಲ್ಲಿ ತನಿಖೆ ನಡೆಸಿದರು.
ತನಿಖೆ ವೇಳೆ ಕೃತ್ಯಕ್ಕೆ ಸಂಬಂಧಿಸಿದಂತೆ ಸಂಶಯಾಸ್ಪದ ವಾಹನದ ಸುಳಿವು ಪತ್ತೆಯಾಗಿದ್ದು, ಅದು ಮಧ್ಯಪ್ರದೇಶದತ್ತ ತೆರಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಮಧ್ಯಪ್ರದೇಶ ಪೆÇಲೀಸರಿಗೆ ವಾಹನದ ಮಾಹಿತಿ ನೀಡಿ ತಪಾಸಣೆ ನಡೆಸುವಂತೆ ಕೋರಲಾಗಿತ್ತು.
ಪೆÇಲೀಸರು ನೀಡಿದ ಮಾಹಿತಿಯ ಆಧಾರದ ಮೇಲೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕಾನ್ವಾಯ್ ಠಾಣೆ ಪೆÇಲೀಸರು ಸೆ.3ರಂದು ದೆಹಲಿ-ಮುಂಬೈ ರಾಷ್ಟ್ರೀಯ ಹೆದ್ದಾರಿಯ ಘಾಟಾ-ನಾಗದಾ-ನಿಮಾಚ್ ಟೋಲ್ ನಾಕಾ ಬಳಿ ಗಸ್ತು ನಡೆಸುತ್ತಿದ್ದ ವೇಳೆ ಸಂಶಯಾಸ್ಪದ ಸ್ಕಾರ್ಪಿಯೋ ವಾಹನವನ್ನು ತಡೆದು ಅದರಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿಜಯಪುರ ಜಿಲ್ಲೆಯ ತನಿಖಾ ತಂಡ ಸೆ.4ರಂದು ಮಧ್ಯಪ್ರದೇಶಕ್ಕೆ ತೆರಳಿ ಸ್ಥಳೀಯ ಪೆÇಲೀಸರ ಸಹಕಾರದೊಂದಿಗೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮೂವರು ಆರೋಪಿಗಳನ್ನು ವಿಜಯಪುರಕ್ಕೆ ಕರೆತಂದಿದೆ ಎಂದು ವಿವರಿಸಿದರು.

ಬಂಧಿತ ಆರೋಪಿಗಳು:
ಹರಿಯಾಣದ ಪಲ್ವಾಲ್ ಜಿಲ್ಲೆಯ ಧಿರಂಕಿಯ
ಸಾಹಿಲ್ ಮೆಹಮೂದ್, ಉತ್ತರ ಪ್ರದೇಶದ ಸಪೀಯಾಬಾದ್ ಲೌಟಿ, ಮುಂಡಾಳಿಯ ಕಮರಿಯಾಬ್ ಸತ್ತಾರ್ , ಮಿರತ್ ಜಿಲ್ಲೆಯ ಬಿಝೋಲಿಯ
ಆಕಾಶ ಪ್ರದೀಪ ತ್ಯಾಗಿ ಬಂಧಿತರು ಎಂದು ತಿಳಿಸಿದರು.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಹರಿಯಾಣ ಮತ್ತು ಉತ್ತರ ಪ್ರದೇಶ ಮೂಲದ ಒಟ್ಟು ಆರು ಮಂದಿ ಸೇರಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಬಂಧಿತರು ರೂಢಿಗತ ಕಳ್ಳತನದ ಆರೋಪಿಗಳಾಗಿದ್ದು, ಉoogಟe ಒಚಿಠಿs ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಎಟಿಎಂಗಳನ್ನು ಗುರುತಿಸಿ, ತಮ್ಮ ಕಾರ್ಯಾಚರಣೆಗೆ ಅನುಕೂಲವಾಗುವ ಎಟಿಎಂಗಳನ್ನು ಆಯ್ಕೆ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಅದೇ ರೀತಿಯಲ್ಲಿ ವಿಜಯಪುರ-ಆಲಮಟ್ಟಿ ರಾಷ್ಟ್ರೀಯ ಹೆದ್ದಾರಿಯ ಗೊಳಸಂಗಿ ಗ್ರಾಮದ ಸಮೀಪದ ಕೆನರಾ ಬ್ಯಾಂಕ್ ಎಟಿಎಂ ಅನ್ನು ಗುರಿಯಾಗಿಸಿಕೊಂಡು ಯೋಜನೆ ರೂಪಿಸಿ ಕಳ್ಳತನ ನಡೆಸಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಶಪಡಿಸಿಕೊಂಡ ವಸ್ತುಗಳು

  • ?3.60 ಲಕ್ಷ ನಗದು
  • ಒಊ-12-ಘಿಊ-5112 ನೋಂದಣಿ ಸಂಖ್ಯೆಯ ಸ್ಕಾರ್ಪಿಯೋ ವಾಹನ
  • ಸ್ಕ್ರೂ ಡ್ರೈವರ್
  • ಗ್ಯಾಸ್ ಕಟರ್
    ಎಂದು ವಿವರಿಸಿದ್ದಾರೆ.
    ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದ್ದು, ಅವರ ಪತ್ತೆಗಾಗಿ ಪೆÇಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
    ಪ್ರಕರಣವನ್ನು ತ್ವರಿತವಾಗಿ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ನಾಲ್ಕು ತನಿಖಾ ತಂಡಗಳ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಶ್ಲಾಘಿಸಿದ್ದಾರೆ.

ಲಚ್ಯಾಣ ಕೊಲೆ ಪ್ರಕರಣ: 22 ವರ್ಷದ ಯುವಕ ಬಂಧನ

ಇಂಡಿ ಗ್ರಾಮೀಣ ಪೆÇಲೀಸ್ ಠಾಣೆ ವ್ಯಾಪ್ತಿಯ ಲಚ್ಯಾಣ ಗ್ರಾಮದಲ್ಲಿ ಅನೀಲ @ ಸುಖದೇವ ಭಂಡಾರಿ (40) ಎಂಬುವವರ ಕೊಲೆ ಪ್ರಕರಣವನ್ನು ಪೆÇಲೀಸರು ಭೇದಿಸಿ, 22 ವರ್ಷದ ಯುವಕ ಚೌಡಪ್ಪ @ ಆಕಾಶ ಶಿವಕುಮಾರ ಕಾಂಬಳೆ ಎಂಬಾತನನ್ನು ಬಂಧಿಸಿದ್ದಾರೆ ಎಂದು ಎಸ್ಪಿ ನಿಂಬರಗಿ ತಿಳಿಸಿದರು.
ಸೆ.7ರ ರಾತ್ರಿ ಸರ್ಕಾರಿ ಶಾಲೆ ಆವರಣದಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ, 2022ರ ಹಳೆಯ ಪ್ರಕರಣದ ರಾಜಿ-ಸಂಧಾನ ವಿಚಾರವಾಗಿ ಅನೀಲ ಹಾಗೂ ಆರೋಪಿಯ ನಡುವೆ ವಾಗ್ವಾದ ನಡೆದಿದೆ. ಬಳಿಕ ಆರೋಪಿ ಮನೆಯಿಂದ ಕೊಡಲಿ ತಂದು ಅನೀಲನ ಬಾಯಿ, ಕುತ್ತಿಗೆ ಹಾಗೂ ಬಲಭುಜಕ್ಕೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ. ಸಿಪಿಐ ಸುನೀಲ ಬಿ. ಪಾಟೀಲ ಹಾಗೂ ಪಿಎಸ್‍ಐ ರಾಜು ಮಮದಾಪೂರ ನೇತೃತ್ವದ ತಂಡ ಪ್ರಕರಣ ಭೇದಿಸಿದ್ದು, ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೆÇಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷಿತ ಆರೋಪಿ ಬಂಧನ

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ವೇಳೆ ಸರ್ಕಾರಿ ಆಸ್ಪತ್ರೆಯಿಂದ ಪರಾರಿಯಾಗಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಸವರಾಜ ಮಹಾಲಿಂಗಪ್ಪ ಪಾಟೀಲನನ್ನು ಗಾಂಧಿಚೌಕ್ ಠಾಣೆಯ ರೌಡಿ ನಿಗ್ರಹ ದಳ ಬಂಧಿಸಿದೆ.
2009ರ ಹುನಗುಂದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬಸವರಾಜ ಪಾಟೀಲ, 2014ರ ಆಗಸ್ಟ್ 29ರಂದು ಚಿಕಿತ್ಸೆಗಾಗಿ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಗ ಪೆÇಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ. ಆತನ ವಿರುದ್ಧ ಬಂಧನ ವಾರಂಟ್ ಜಾರಿಯಾಗಿತ್ತು.
ನಮ್ಮ ಮಾರ್ಗದರ್ಶನದಲ್ಲಿ ಪಿಐ ಪ್ರದೀಪ ತಳಕೇರಿ ನೇತೃತ್ವದ ತಂಡ ತನಿಖೆ ನಡೆಸಿ, ಆರೋಪಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಿದ್ದಸಮುದ್ರ ಗ್ರಾಮದಲ್ಲಿ ಜಮೀನು ಲೀಸ್‍ಗೆ ಪಡೆದು ವಾಸಿಸುತ್ತಿರುವುದನ್ನು ಪತ್ತೆಹಚ್ಚಿದೆ. ಆಗಸ್ಟ್ 25ರಂದು ಕಾರ್ಯಾಚರಣೆ ನಡೆಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತಂಡದ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.