Home ಜಿಲ್ಲೆ ಕಲಬುರಗಿ ಬಸವಾದಿ ಶರಣರ ವೈಚಾರಿಕ ಚಿಂತನೆಗಳ ಅನುಪಾಲನೆಯಿಂದ ಬಸವ ಭಾರತ ನಿರ್ಮಾಣ ಸಾಧ್ಯ: ಮುಡುಬಿ ಗುಂಡೇರಾವ

ಬಸವಾದಿ ಶರಣರ ವೈಚಾರಿಕ ಚಿಂತನೆಗಳ ಅನುಪಾಲನೆಯಿಂದ ಬಸವ ಭಾರತ ನಿರ್ಮಾಣ ಸಾಧ್ಯ: ಮುಡುಬಿ ಗುಂಡೇರಾವ

ಸೇಡಂ: ಬಸವಾದಿ ಶರಣರ ವೈಚಾರಿಕೆ ಚಿಂತನೆಗಳ ಅನುಪಾಲನೆಯಿಂದ ಬಸವ ಭಾರತ ನಿರ್ಮಾಣ ಸಾಧ್ಯ ಎಂದು ಸಂಶೋಧಕ ಸಾಹಿತಿ ಮತ್ತು ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು.
ಅವರು ತಾಲೂಕಿನ ಕಾಚೂರು ಗ್ರಾಮದಲ್ಲಿ ಬಸವ ಪಂಚಮಿ, ಮಕ್ಕಳಿಗೆ ಹಾಲು ಕುಡಿಸುವ ಹಬ್ಬ, ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ ಜಯಂತಿ, ಶರಣೆ ಗೌರಮ್ಮ ತಾಯಿಯವರ ಸ್ಮರಣೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮತ್ತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. 770 ಅಮರಗಣಂಗಗಳನ್ನು ಅನುಭವ ಮಂಟಪದಲ್ಲಿ ಪಾಲ್ಗೊಳ್ಳುವಂತೆ ಮುಕ್ತವಾತಾವರಣ ನಿರ್ಮಿಸುವ ಮೂಲಕ ಜಗತ್ತಿನ ಮೊದಲ ಸಂಸತ್ತು ಮತ್ತು ಪ್ರಜಾಪ್ರಭುತ್ವನ್ನು ಸಾರಿದ ಬಸವಾದಿ ಶರಣರ ಕೊಡುಗೆ ಅಪಾರವಾಗಿದೆ, ಅವರು ರಚಿಸಿದ ಒಂದೊಂದು ವಚನವೂ ಸಮಾಜ ಪರಿವರ್ತನೆಗೆ ಮುನ್ನುಡಿ ಬರೆದಿವೆ, ವೈಚಾರಿಕತೆಯನ್ನು ಜನಸಾಮನ್ಯರಲ್ಲಿ ಬಿತ್ತುವ ಮೂಲಕ ಸಮ ಸಮಾಜ ನಿರ್ಮಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ, ಕಾಯಕ, ದಾಸೋಹ ಸಂಸ್ಕøತಿಯನ್ನು ಜಗತ್ತಿಗೆ ಕಲಿಸಿಕೊಟ್ಟವರು ನಮ್ಮ ಶರಣರು ಅಪ್ಪ ಕನ್ನಡಿಗರು ಧಾನದ ಎಂಬುದು ಯಾರು ಮರೆಯುವಂತಿಲ್ಲ, ವಚನಗಳಲ್ಲಿ ಸಂವಿಧಾನದ ಆಶಯಗಳಿವೆ, ಪ್ರತಿ ಗ್ರಾಮ, ಮನೆ, ಮನಗಳಲ್ಲಿ ವಚನಗಳು ಝೇಂಕಾರಗೊಳ್ಳಬೇಕು, ಬಸವ ಸಂಸ್ಕøತಿ ಎಂದರೆ ಅದು ಅಪ್ಪಟ ಕನ್ನಡ ಸಂಸ್ಕøತಿ ಮತ್ತು ಅದು ಬಸವ ಭಾರತ ವಾಗಿದೆ ಎಂದು ಅಭಿಮತವ್ಯಕ್ತಪಡಿಸಿದರು.
ಸಾನಿಧ್ಯವಹಿಸಿದ್ದ ವಿಭೂತಿ ಶರಣ ಬಸವಾನಂದ ಮಹಾಸ್ವಾಮಿಜಿ ಮಾತನಾಡಿ ಕಳೆದ 25 ವರ್ಷಗಳಿಂದ ಕಾಚೂರಿನಲ್ಲಿ ಬಸವತೀರ್ಥಪ್ಪ ಹೂಗಾರ ಅವರ ನೇತೃತ್ವದಲ್ಲಿ ನಾಗರ ಪಂಚಮಿ ಹಬ್ಬದಂದು, ಬಸವ ಪಂಚಮಿ ಉತ್ಸವ ಮತ್ತು ಮಕ್ಕಳಿಗೆ ಹಾಲು ಕಡಿಸುವ ಹಬ್ಬ ಆಚರಿಸುತತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಜ್ಯೋತಿರ್ಲಿಂಗ ಸ್ವಾಮಿ, ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಮೇಳಕುಂದಿ, ಶಿವಮೂರ್ತಿ ಕಾಚೂರು, ಬಸವಕೇಂದ್ರ ಉಪಾಧ್ಯಕ್ಷ ರಾಚಣ್ಣ ಬಳಗಾರ ಮುಂತಾದವರು ಮಾತನಾಡಿದರು. ಬಸವಪ್ರಸನ್ನ ಪ್ರಾರ್ಥಿಸಿದರು. ಬಸವಪ್ರಸಾದ ವಚನಗಾಯನ ನಡೆಸಿಕೊಟ್ಟರು, ಬಸವರಾಜ ಬಾಳಿ, ಬಸವರಾಜ ಪೋಲಿಸಪಾಟೀಲ, ನಾಗರಾಜ ಮಾಲಿಪಾಟೀಲ, ನಾಗರಾಜ ಪೋಲಿಸಪಾಟೀಲ, ಶಿವಶರಣಪ್ಪ ತಾಡಪಳ್ಳಿ, ಬಶೆಟ್ಟಪ್ಪ ಸಾಹು, ನಾಗರಾಜ ಪಾಟೀಲ ತೆಲ್ಕೂರ, ಸಿದ್ದು ಸಾಹು ಹಳ್ಳಿ, ನರಸಪ್ಪ ಪೂಜಾರಿ, ವೈಜನಾಥ ಹೂಡಾ, ಗೌರೀಶ ನಾಯಕೋಡಿ, ರಾಜು ಪೂಜಾರಿ, ಸಿದ್ದು ಹೂಗಾರ, ಸಿದ್ದಯ್ಯ ಕಾಚೂರು ಮುಂತಾದವರಿದ್ದರು.

ಬಸವಾದಿ ಶರಣರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಜಗತ್ತಿಗೆ ಮೊದಲ ಸಂಸತ್ತು ನೀಡಿದ ಹೆಗ್ಗಳಿಕೆ ನಮ್ಮ ಕನ್ನಡ ನೆಲಕ್ಕೆ ಇದೆ, ಸಮ ಸಮಾಜ ನಿರ್ಮಾಣ, ವೈಚಾರಿಕ ಕ್ರಾಂತಿಯ ರೂವಾರಿ ಬಸವಣ್ಣನವರ ಕೊಡುಗೆ ಅಪಾರವಾಗಿದೆ. ವಚನಗಳ ಪಾಲನೆಯಿಂದ ಬಸವ ಭಾರತ ನಿರ್ಮಾಣ ಸಾಧ್ಯ. ಪ್ರತಿ ಮನೆ, ಮನಗಳಲ್ಲಿ ವಚನಗಳು ಝೇಂಕಾರ ಮೊಳಗಬೇಕು.
ಮುಡುಬಿ ಗುಂಡೇರಾವ
ಸಂಶೋಧಕ ಸಾಹಿತಿ ಮತ್ತು ಸಮ್ಮೇಳನಾಧ್ಯಕ್ಷರು