Home ಕ್ರೈಂ ಸುದ್ದಿಗಳು ಹಾವು ಕಡಿದು ಎಮ್ಮೆ ಸಾವು

ಹಾವು ಕಡಿದು ಎಮ್ಮೆ ಸಾವು

ಔರಾದ್ : ತಾಲ್ಲೂಕಿನ ಖಾಶೇಂಪುರ( ಬಿ) ಗ್ರಾಮದ ರೈತ ಮಹಿಳೆ ಸಂಗೀತಾ ಗಂಡ ಸಂಗಪ್ಪ ಬಿರಾದಾರ ಅವರಿಗೆ ಸೇರಿದ 70 ಸಾವಿರ ರೂಗಳ ಮೌಲ್ಯದ ಎಮ್ಮೆ ಹೊಲದಲ್ಲಿ ಮೇಯಲು ಹೋದಾಗ ಹಾವು ಕಡಿದು ಮೃತ ಪಟ್ಟಿರುವ ಘಟನೆ ಶುಕ್ರವಾರ ಮುಂಜಾನೆ 8ಗಂಟೆಗೆ ಜರುಗಿದೆ.

ಮೂಲತಃ ಬೀದರ್ ತಾಲ್ಲೂಕಿನ ಮರಖಲ್ ಗ್ರಾಮದ ನಿವಾಸಿಗಳಾಗಿರುವ ಈ ಬಡದಂಪತಿಗಳು ಖಾಶೇಂಪುರ ( ಬಿ) ಗ್ರಾಮದಲ್ಲಿ ಸ್ವಂತ ಹೊಲ ಇರುವ ಕಾರಣ , ನಾಲ್ಕು ವರ್ಷದಿಂದ ಗದ್ದೆ ಕೆಲಸ ಮಾಡಿಕೊಂಡು ಖಾಶೇಂಪುರ ( ಬಿ) ದಲ್ಲಿ ನೆಲೆಸಿರುವಾಗ ಈ ಘಟನೆ ಜರುಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ವಡಗಾಂವ (ದೆ ) ಸರ್ಕಾರಿ ಪಶು ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಈ ಕುರಿತು ಸಂತಪೂರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಶು ಆಸ್ಪತ್ರೆಯ ಪರಮೇಶ ರಾಠೋಡ, ಎಎಸ್‍ಐ ರವೀಂದ್ರ ಜಮಾದಾರ , ರಾಜಕುಮಾರ ಪಾಂಚಾಳ, ಸಂಗೀತಾ, ಸಂಗಪ್ಪ ಬಿರಾದಾರ ಇದ್ದರು.